ETV Bharat / state

ವಿದ್ಯಾರ್ಥಿಗಳನ್ನು 'ನಗರ ನಕ್ಸಲರು' ಎಂದ ಪ್ರಧಾನಿ ಯುವಕರ ಕ್ಷಮೆ ಯಾಚಿಸಬೇಕು: ಡಿ.ಕೆ.ಶಿವಕುಮಾರ್ ಆಗ್ರಹ

ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳನ್ನು 'ನಗರ ನಕ್ಸಲರು' ಎಂದು ಕರೆಯುವ ಮೂಲಕ ನಿಂದಿಸುವ ಕೆಲಸ ಮಾಡಿದ್ದಾರೆ. ಯುವಕರು ಇಲ್ಲದಿದ್ರೆ ನೀವು ಅಧಿಕಾರಕ್ಕೆ ಬರುತ್ತಿರಲಿಲ್ಲ. ಹಾಗಾಗಿ ಅವರು ಯುವಕರಲ್ಲಿ ಕ್ಷಮೆಯಾಚಿಸಬೇಕು ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.

bangalore
ವಿದ್ಯಾರ್ಥಿಗಳನ್ನು ನಗರ ನಕ್ಸಲರು ಎಂದ ಪ್ರಧಾನಿ ಯುವಕರಲ್ಲಿ ಕ್ಷಮೆಯಾಚಿಸಬೇಕು: ಡಿಕೆಶಿ ಆಗ್ರಹ
author img

By

Published : Dec 24, 2019, 2:59 PM IST

ಬೆಂಗಳೂರು: ವಿದ್ಯಾರ್ಥಿಗಳನ್ನು 'ನಗರ ನಕ್ಸಲರು' ಎಂದು ಕರೆದ ಪ್ರಧಾನಿ ನರೇಂದ್ರ ಮೋದಿಯವರು ಯುವಕರಲ್ಲಿ ಕ್ಷಮೆ ಯಾಚಿಸಬೇಕು ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.

ಸದಾಶಿವನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ನಗರ ನಕ್ಸಲರು' ಎಂದು ಕರೆಯುವ ಮೂಲಕ ವಿದ್ಯಾರ್ಥಿಗಳನ್ನು ನಿಂದಿಸುವ ಕೆಲಸವನ್ನು ಪ್ರಧಾನಿ ಮಾಡಿದ್ದಾರೆ. ಯುವಕರು ಇಲ್ಲದಿದ್ರೆ ನೀವು ಅಧಿಕಾರಕ್ಕೆ ಬರುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳನ್ನು ನಗರ ನಕ್ಸಲರು ಎಂದ ಪ್ರಧಾನಿ ಯುವಕರಲ್ಲಿ ಕ್ಷಮೆ ಯಾಚಿಸಬೇಕು: ಡಿಕೆಶಿ ಆಗ್ರಹ

ದೇಶದ ಹೊಸ ಕಾನೂನುಗಳನ್ನು ಎಲ್ಲಾ ದೇಶಗಳು ವಿರೋಧ ಮಾಡುತ್ತಿವೆ. ನಿಮಗೆ ಬೆಂಬಲ ನೀಡಿದ ಯುವಕರು ಮತ್ತು ಪಕ್ಷಗಳೇ ಇದೀಗ ನಿಮ್ಮ ಧೋರಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಮಂಗಳೂರಿನ ವಿಡಿಯೋ ಹಳೆಯದು. 144 ಸೆಕ್ಷನ್ ಹಾಕುವುದಕ್ಕೆ ಹೇಳಿದ್ದು ಯಾರು? ಇನ್ನೂ ಸಾಯಲಿಲ್ಲವಾ ಎಂದು ಕೇಳಿದ್ದು ಯಾರು? ಪೊಲೀಸರೇ ಅಲ್ವಾ? ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಿಡಿಕಾರಿದ ಅವರು, ಮಂಗಳೂರು ಹಾಗೂ ರಾಜ್ಯದ ಘಟನೆಗೆ ನೇರ ಜವಾಬ್ದಾರಿ ರಾಜ್ಯ ಸರ್ಕಾರ. ವಿದ್ಯಾವಂತರು ಮತ್ತು ಬುದ್ಧಿವಂತರು ಇಲ್ಲದಿದ್ದರೂ ದೇಶ ನಡೆಯುತ್ತೆ. ಆದರೆ ಪ್ರಜ್ಞಾವಂತರು ಇಲ್ಲದೇ ದೇಶ ನಡೆಸಲು ಸಾಧ್ಯವಿಲ್ಲ. ಸಾಮಾನ್ಯ ಜನರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದಿರಿ ಎಂದರು.

Intro:newsBody:ಪ್ರಧಾನಿ ನರೇಂದ್ರ ಮೋದಿ ಕೂಡಲೇ ಯುವಕರ ಕ್ಷಮೆಯಾಚಿಸಬೇಕು: ಡಿಕೆಶಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮೊದಲು ಯುವಕರ ಕ್ಷಮೆ ಯಾಚಿಸಬೇಕು ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.
ಸದಾಶಿವನಗರ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ವಿದ್ಯಾರ್ಥಿಗಳನ್ನು ನಗರ ನಕ್ಸಲರು ಅಂತ ಕರೆದಿದ್ದಾರೆ. ಈ ಮೂಲಕ ವಿದ್ಯಾರ್ಥಿಗಳನ್ನು ನಿಂದಿಸುವ ಕೆಲಸ ಮಾಡಿದ್ದಾರೆ. ಯುವಕರು ಇಲ್ಲದಿದ್ರೆ ನೀವು ಅಧಿಕಾರ ಕ್ಕೆ ಬರುತ್ತಿರಲಿಲ್ಲ. ಮೊದಲು ನೀವು ಕ್ಷಮೆ ಕೇಳಿ ಎಂದು ಆಗ್ರಹಿಸಿದ್ದಾರೆ.
ಭಾರತದಲ್ಲಿ ಹೂಡಿಕೆ ಗೆ ವಿದೇಶದವರು ಹಿಂದೇಟು ಹಾಕಿದ್ದಾರೆ. ದೇಶದ ಹೊಸ ಕಾನೂನನ್ನ ಎಲ್ಲ ದೇಶಗಳು ವಿರೋಧ ಮಾಡ್ತಿವೆ. ನಿಮಗೆ ಬೆಂಬಲ ನೀಡಿದ ಯುವಕರು ಮತ್ತು ಪಕ್ಷಗಳು ನಿಮ್ಮ ಧೋರಣೆ ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮಂಗಳೂರಿನ ವಿಡಿಯೋ ಹಳೆಯದು. 144 ನೇ ಸೆಕ್ಷನ್ ಹಾಕುವುದಕ್ಕೆ ಹೇಳಿದ್ದು ಯಾರು? ಇನ್ನೂ ಸಾಯಲಿಲ್ಲವಾ ಅಂತ ಕೇಳಿದ್ದು ಯಾರು? ಪೊಲೀಸರು ಅಲ್ವಾ? ಎಂದು ಪ್ರಶ್ನಿಸಿದ್ದಾರೆ.
ಮಂಗಳೂರು ಹಾಗೂ ರಾಜ್ಯದ ಘಟನೆಗೆ ನೇರ ಜವಾಬ್ದಾರಿ ರಾಜ್ಯ ಸರ್ಕಾರ. ಮಂಗಳೂರಿನಲ್ಲಿ ಇರೋ ಬಹಳ ಜನ ಹೊರದೇಶದಲ್ಲಿ ಇದ್ದಾರೆ. ಅವರಿಗೆ ಇದು ಬೇಕಿಲ್ಲ. ಅಲ್ಲಿ ಗಲಾಬೆ ಮಾಡುವವರಿಗೆ ಇದು ಬೇಕು. ವಿದ್ಯಾವಂತ ಮತ್ತು ಬುದ್ದಿವಂತರು ಇಲ್ಲದಿದ್ರು ದೇಶ ನಡೆಯುತ್ತೆ. ಪ್ರಜ್ಞಾವಂತರು ಇಲ್ಲದೇ ದೇಶ ನಡೆಸಲು ಸಾಧ್ಯವಿಲ್ಲ. ಗುಜರಾತಿನಲ್ಲಿ ಎದೆ ಸೀಳಿಸಿ ತೋರಿಸಿದ್ದ ಆಯ್ತು ಈಗ ಕರ್ನಾಟಕದಲ್ಲಿ ಎದೆ ಸೀಳಿಸಿ ತೋರಿಸಬೇಕಾ. ಸಾಮಾನ್ಯ ಜನರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಇರಿ ಎಂದು ಸಂಸದ ತೇಜಸ್ವಿ ಸೂರ್ಯಗೆ ಎಚ್ಚರಿಕೆ ನೀಡಿದರು.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.