ETV Bharat / state

ಪ್ರಧಾನಿ ಅವರ ಕೊಡುಗೆ ಕೇವಲ ರಾಜ್ಯಕ್ಕೆ ಮಾಲಾರ್ಪಣೆ ಮಾಡೋದಷ್ಟೇ: ಡಿಕೆ ಶಿವಕುಮಾರ್ ವ್ಯಂಗ್ಯ​ - Etv Bharat Kannada

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಂತ ಹೆಸರು ಇಟ್ಟಿದ್ದೇ ನಮ್ಮ ಪಕ್ಷ. ವಿಮಾನ ನಿಲ್ದಾಣಕ್ಕಾಗಿ ರೈತರಿಂದ ಸ್ಥಳ ಕೊಡಿಸಿದ್ದು ನಾವು ಎಂದು ಡಿಕೆಶಿ ಹೇಳಿದರು

KN_BNG
ಡಿಕೆ ಶಿವಕುಮಾರ್​
author img

By

Published : Nov 12, 2022, 6:19 PM IST

ಬೆಂಗಳೂರು: ಪ್ರಧಾನಿಯವರ ಕೊಡುಗೆ ಕೇವಲ ರಾಜ್ಯಕ್ಕೆ ಮಾಲಾರ್ಪಣೆ ಮಾಡೋದು ಬಿಟ್ಟರೆ ಈ ಸರ್ಕಾರಕ್ಕೆ ಯಾವ ಶಿಷ್ಟಾಚಾರವೂ ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಲೇವಡಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಕರ್ನಾಟಕ ರಾಜ್ಯದ ಇತಿಹಾಸ ಸೃಷ್ಟಿ ಮಾಡಿದವರು ಕೆಂಪೇಗೌಡರು, ಕೆಂಗಲ್​ ಹನುಮಂತಯ್ಯ, ದೇವೇಗೌಡರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಂತ ಹೆಸರು ಇಟ್ಟಿದ್ದೇ ನಮ್ಮ ಪಕ್ಷ. 2000 ಎಕರೆಯನ್ನ ರೈತರಿಂದ ಖರೀದಿ ಮಾಡಿ ಕೆಐಎಎಲ್​ನವರಿಗೆ ನಾವು ಕೊಟ್ಟಿದ್ವಿ.

ನಾವು ಪ್ರಧಾನಿಯವರಿಗೆ ಕೆಲವು ಪ್ರಶ್ನೆ ಕೇಳುತ್ತೇವೆ. ನಿಮ್ಮ ಡಬಲ್ ಎಂಜಿನ್ ಸರ್ಕಾರ, ಕಾರ್ಮಿಕರ ಆದಾಯ ಡಬಲ್ ಮಾಡ್ತಿನಿ ಅಂತ ಹೇಳಿತ್ತು. ಆದರೇ ಕೇವಲ ಮಾಲಾರ್ಪಣೆ ಮಾಡೋದ್ರಿಂದ ಅವರ ಹೊಟ್ಟೆ ತುಂಬಲ್ಲ. ಆಕ್ಸಿಜನ್ ಕೊರತೆಯಿಂದ ಸತ್ತವರಿಗೆ ಇನ್ನು ಹಣ ಕೊಟ್ಟಿಲ್ಲ. ಕೆಂಪೇಗೌಡ ಅವರ ಪುತ್ಥಳಿ ಮಾಡಿರುವುದು ಸಂತೋಷ. ಆದರೆ ಅದಕ್ಕೆ ಸರ್ಕಾರದ ದುಡ್ಡು ಯಾಕೆ ಬೇಕಿತ್ತು. ನಮ್ದು 26 ಪರ್ಸೆಂಟ್ ಇದೇ ಪ್ರಾಧಿಕಾರದವರಿಗೆ ಹೇಳಿದ್ದರೆ ಅವರೇ ಈ ಕಾರ್ಯ ಮಾಡುತ್ತಿದ್ದರು ಎಂದು ಡಿ ಕೆ ಶಿವಕುಮಾರ್ ಹೇಳಿದರು.

ನನಗೆ ಆಹ್ವಾನ ಬಂದಿಲ್ಲ: ಇನ್ನು ನನಗೆ ಕೆಂಪೇಗೌಡರ ಪುತ್ಥಳಿ ಲೋಕಾರ್ಪಣೆಗೆ ಯಾವುದೆ ಆಹ್ವಾನ ಕೊಟ್ಟಿಲ್ಲ, ಕಾಲ್ ಸಹ ಮಾಡಿಲ್ಲ. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಫೌಂಡೇಶನ್ ಹಾಕಬೇಕಿದ್ದಾಗ ನನ್ನನ್ನ ಕರೆದಿದ್ದರು ನಾನು ಆವಾಗ ಹೋಗಿದ್ದೆ. ಏರ್​ಪೋರ್ಟ್​ಗೆ ಕೆಂಪೇಗೌಡರ ಹೆಸರಿಡಲು ನಾವು ಪ್ರಸ್ತಾವನೆ ಕಳಿಸಿದ್ದು ನಾವು. ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಏರ್​ಪೋರ್ಟ್​ಗಾಗಿ 2000 ಎಕರೆ ಜಾಗ ಕೊಟ್ಟಿದ್ದೆವು. ಸರ್ಕಾರ ಹೇಳಿದ್ದರೇ ಏರ್​ಪೋರ್ಟ್ ನವರೇ ಈ ಕೆಲಸವನ್ನು ಮಾಡ್ತಾ ಇದ್ದರು. ಇವರು ಕಮಿಷನ್ ಹೊಡೆಯೋದಕ್ಕೇನೋ ಮಾಡಿದ್ದಾರೆ ಎಂದು ದೂರಿದರು.

ಬಿಜೆಪಿ ಅವರು ದೇವೇಗೌಡ ಅವರಿಗೆ ರಾತ್ರಿ 12 ಗಂಟೆಗೆ ಆಹ್ವಾನ ಕೊಟ್ಟಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಅವರಿಗೆ ಡಿಕೆ ಶಿವಕುಮಾರ್ ಆಗಲಿ, ದೇವೇಗೌಡರು ಆಗಲಿ, ಯಾರು ಬೇಡ. ಅವರಿಗೆ ಬೇಕಿರೋದು ಎಲೆಕ್ಷನ್. ಅವರಿಗೆ ಬೇಕಿರೋದು ವೋಟ್, ನಾವು ಅವರಿಂದ ಏನನ್ನೂ ಕೂಡ ನಿರೀಕ್ಷೆ ಮಾಡಬಾರದು.

ಇದೂ ಪಕ್ಕಾ ರಾಜಕಾರಣ ಹಾಗೂ ಸರ್ಕಾರದ ಹಣದಲ್ಲಿ ನಡೆದ ಖಾಸಗಿ ಕಾರ್ಯಕ್ರಮ. ನಾವು ಅದಕ್ಕೆ ತಲೆಕೆಡಿಸಿಕೊಂಡಿಲ್ಲ. ಅವರು ಪಾರ್ಟಿ ಅಜೆಂಡಾ ಇಟ್ಟುಕೊಂಡಿದ್ದಾರೆ. ವೋಟ್​​ ಗಾಗಿ ಏನ್ ಬೇಕೋ ಅದನ್ನ ಮಾಡುತ್ತಿದ್ದಾರೆ ಎಂದು ಡಿ ಕೆ ಶಿವಕುಮಾರ್​ ಆರೋಪಿಸಿದರು.

ಏನಾದರೂ ಕೊಡುಗೆ ಕೊಟ್ಟರಾ?: ಗ್ಲೋಬಲ್ ಬೆಂಗಳೂರು, ಗ್ಲೋಬಲ್ ಕರ್ನಾಟಕ, ಏನಾದ್ರೂ ಒಂದು ಮೆಸೇಜ್ ಕೊಟ್ರಾ..? ನಿರುದ್ಯೋಗ, ಶೇ 40ರಷ್ಟು ಕಮಿಷನ್, ಭ್ರಷ್ಟಾಚಾರದ ಬಗ್ಗೆ ಪ್ರಧಾನಿಗೆ ಪತ್ರ ಬರೆದು ಪ್ರಶ್ನೆ ಮಾಡಿದ್ವಿ. ಅವರ ಸಂಕಲ್ಪದಂತೆ ಜನರು ಅವರ ಸರ್ಕಾರವನ್ನ ಕಿತ್ತು ಒಗೆಯುತ್ತಾರೆ. ಪ್ರಧಾನಿಗಳು ಏನಾದ್ರೂ ಕೊಡುಗೆ ಕೊಡ್ತಾರೆ ಅಂದುಕೊಂಡಿದ್ವಿ. ಕಾರ್ಯಕ್ರಮಕ್ಕೆ ಸರ್ಕಾರಿ ಹಣ ಯಾಕೆ ಬೇಕಿತ್ತು. ಇದೆಲ್ಲ ಕಮಿಶನ್ ಹೊಡೆಯೋದಕ್ಕೆ ಮಾಡಿದ್ದಾರೆ. ಕೆಂಪೇಗೌಡರ ಪ್ರಾಧಿಕಾರ ಮಾಡಿದ್ದು ನಾವು. ಇವರು ಈಗ ಬರೀ ಶೋ ಕ್ರಿಯೇಟ್ ಮಾಡಿದ್ದಾರೆ ಎಂದರು.

ಇನ್ನು ಆರ್​.ಅಶೋಕ್​ ಸ್ವಾಮೀಜಿಗಳ ಹೆಗಲ ಮೇಲೆ ಕೈಯಿಟ್ಟ ವಿಚಾರವಾಗಿ ಮಾತನಾಡಿ, ಸ್ವಾಮಿಗಳ ಬಗ್ಗೆ ನಾನು ಮಾತಾಡಲ್ಲ. ಅಶೋಕ್​ ಅವರಿಗೂ ಸ್ವಾಮೀಜಿಗೂ ಏನ್ ಸಂಬಂಧ ಇದೆಯೋ ಗೊತ್ತಿಲ್ಲ. ನನಗೂ ಸ್ವಾಮೀಜಿಗೂ ಭಕ್ತನಿಗೂ, ಭಗವಂತನಿಗೂ ಇರೋ ಸಂಬಂಧ ಇದೆ. ಆ ಪೀಠಕ್ಕೆ ತನ್ನದೇ ಆದ ಗೌರವ ಇದೆ. ರಾಜಕೀಯಕ್ಕೆ ಸ್ವಾಮೀಜಿಗಳ ಬಗ್ಗೆ ನಾನು ಮಾತನಾಡಲ್ಲ ಎಂದರು.

ಬಿಜೆಪಿಯವರಿಗೆ ಸಂಸ್ಕಾರವೇ ಇಲ್ಲ. ದೇವೇಗೌಡರು, ಹೆಚ್​ಡಿಕೆ, ಶಿವಕುಮಾರ್ ಯಾರೂ ಬೇಕಾಗಿಲ್ಲ. ರಾಜಕೀಯಕ್ಕಾಗಿ ಕಾರ್ಯಕ್ರಮ ಮಾಡಿದ್ದಾರೆ ಎಂದು ಸಚಿವ ಅಶ್ವತ್ಥ ನಾರಾಯಣ್ ವಿರುದ್ಧ ಪರೋಕ್ಷವಾಗಿ ಡಿಕೆಶಿ ಲೇವಡಿ ಮಾಡಿದರು. ಬಿಜೆಪಿಗೆ ಜನ ಬೆಂಬಲ ಇಲ್ಲ. ನಿನ್ನೆ ಕಾರ್ಯಕ್ರಮಕ್ಕೆ ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನ ಕರೆಸಿದ್ದಾರೆ. ಕೆಂಪೇಗೌಡರ ಕಾರ್ಯಕ್ರಮಕ್ಕೂ, ವಿದ್ಯಾರ್ಥಿಗಳಿಗೂ ಏನ್ ಸಂಬಂಧ. ಸಿಎಂ ಬೊಮ್ಮಾಯಿ ಇದಕ್ಕೆ ಉತ್ತರ ಕೊಡಬೇಕು ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷರು ಒತ್ತಾಯಿಸಿದರು.

ಇದನ್ನೂ ಓದಿ: ಬಿಜೆಪಿ ಸರ್ಕಾರದಿಂದ ಪ್ರಿಯಾಂಕ್ ಖರ್ಗೆ ಕೊಲೆಗೆ ಸಂಚು: ಕಾಂಗ್ರೆಸ್​​​ ನಾಯಕ ಗಂಭೀರ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.