ETV Bharat / state

ಸಂಗಮೇಶ್ ಅಮಾನತು ಆದೇಶ ವಾಪಸ್ ಪಡೆಯಬೇಕು: ಡಿಕೆಶಿ

ಶಾಸಕ ಸಂಗಮೇಶ್​​​ಗೆ ರಕ್ಷಣೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಆದರೆ ಇಡೀ ಕಾಂಗ್ರೆಸ್ ಪಕ್ಷ ಸಂಗಮೇಶ್ ಜೊತೆ ನಿಲ್ಲಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು. ಸಂಗಮೇಶ್​ ಅವರು ಅಶಿಸ್ತಿನಿಂದ ವರ್ತಿಸಿದ್ದಾರೆ ಎಂದು ಅವರಿಗೆ ಒಂದು ವಾರ ಕಾಲ ಸದನದಿಂದ ಸ್ಪೀಕರ್​ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಈ ಆದೇಶವನ್ನು ವಾಪಸ್​ ಪಡೆಯುವಂತೆ ಡಿಕೆಶಿ ಒತ್ತಾಯಿಸಿದ್ದಾರೆ.

dk-shivakumar-talk-
ಡಿ.ಕೆ. ಶಿವಕುಮಾರ್
author img

By

Published : Mar 4, 2021, 7:09 PM IST

ಬೆಂಗಳೂರು: ಭದ್ರಾವತಿ ಶಾಸಕ ಸಂಗಮೇಶ್ ಅವರ ವರ್ತನೆಯನ್ನು ನಾವು ಸಮರ್ಥಿಸಿಕೊಳ್ಳಲ್ಲ. ಆದರೆ ಅವರನ್ನು ಸದನದಿಂದ ಒಂದು ವಾರ ಕಾಲ ಅಮಾನತು ಮಾಡಿದ್ದು ಸರಿಯಲ್ಲ, ಇಡೀ ಪಕ್ಷ ಸಂಗಮೇಶ್ ಜೊತೆ ಇರಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಓದಿ: ಸಿಎಂ ಸೇರಿದಂತೆ ಯಾರಿಗೆ ಪ್ರಶ್ನೆ ಇರುತ್ತೋ ಅವರೇ ಉತ್ತರಿಸಬೇಕು: ಸಭಾಪತಿ ಹೊರಟ್ಟಿ

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಗಮೇಶ್ ಕುಟುಂಬದ ಮೇಲೆ 307 ಸೇರಿದಂತೆ ಇತರ ಕೇಸು ಹಾಕಿಸಿ ಬಂಧಿಸಲು ಸರ್ಕಾರ ಹೊರಟಿದೆ. ಇದನ್ನು ಪ್ರಸ್ತಾಪಿಸಲು ಸ್ಪೀಕರ್ ಅವಕಾಶ ನೀಡಲಿಲ್ಲ, ಆಗ ಸಂಗಮೇಶ ಶರ್ಟ್ ತೆಗೆದು ಅಸಮಾಧಾನ ಹೊರಹಾಕಿದರು. ಅವರು ಬಟ್ಟೆ ಬಿಚ್ಚಿದ್ದು ಸರಿಯಲ್ಲ. ಆದರೆ ಅವರ ಮನಸ್ಥಿತಿ ಯಾವ ಮಟ್ಟಕ್ಕೆ ಹೋಗಿದೆ ಎಂದು ಅರ್ಥ ಮಾಡಿಕೊಳ್ಳಬೇಕು. ಕೂಡಲೇ ಅವರ ಅಮಾನತು ಆದೇಶ ವಾಪಸ್ ಪಡೆದು ಅವರ ಕುಟುಂಬಕ್ಕೆ ರಕ್ಷಣೆ ನೀಡಬೇಕಿದೆ. ಜೊತೆಗೆ ಪೊಲೀಸ್ ಠಾಣೆಗಳಲ್ಲಿನ ದೂರುಗಳನ್ನೂ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ಶಾಸಕ ಸಂಗಮೇಶ್​​​ಗೆ ರಕ್ಷಣೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಆದರೆ ಇಡೀ ಕಾಂಗ್ರೆಸ್ ಪಕ್ಷ ಸಂಗಮೇಶ್ ಜೊತೆ ನಿಲ್ಲಲಿದೆ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು. ಬಾಲಚಂದ್ರ ಜಾರಕಿಹೊಳಿ ಜೊತೆ ವಿಶೇಷ ಮಾತುಕತೆ ನಡೆಸಿಲ್ಲ, ಸಿಕ್ಕಾಗೆಲ್ಲಾ ಮಾತನಾಡುತ್ತೇವೆ. ಅದರಂತೆ ಇವತ್ತು ಮೊಗಸಾಲೆಯಲ್ಲಿ ಸಿಕ್ಕಿದ್ದರು, ಮಾತನಾಡಿದ್ದೇವೆ ಅಷ್ಟೇ ಇದಕ್ಕೆ ವಿಶೇಷ ಅರ್ಥ ಬೇಡ ಎಂದರು.

ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗದ ಹಿಂದೆ ಪ್ರಭಾವಿ ಕಾಂಗ್ರೆಸ್ ನಾಯಕರ ಕೈವಾಡವಿದೆ ಎಂದು ಬಾಲಚಂದ್ರ ಜಾರಕಿಹೊಳಿ ಆರೋಪ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಅವರಿಗೆ ಏನೇನು ಮಾಹಿತಿ ಇದೆಯೋ ಜನರ ಮುಂದಿಡಲಿ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.