ETV Bharat / state

ಡಿಕೆಶಿ ಹೇಳಿಕೆ ಭಯೋತ್ಪಾದನಾ ಚಟುವಟಿಕೆಗೆ ಪ್ರೇರಣೆ: ನಳಿನ್ ಕುಮಾರ್ ಕಟೀಲ್ - ಕಾಂಗ್ರೆಸ್​​ನಿಂದ ರಾಷ್ಟ್ರ ವಿರೋಧಿ ಕೃತ್ಯ

ಕಾಶ್ಮೀರದಲ್ಲಿ ಆರಂಭವಾದ ಭಯೋತ್ಪಾದನೆ ದೇಶದ ಪ್ರತಿ ಊರಿಗೆ ಹಬ್ಬಿದೆ. ಕಾಂಗ್ರೆಸ್ ಪಕ್ಷದಿಂದಲೇ ಈ ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆ ಆರಂಭವಾಗಿದೆ. ಈ ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗೆ ಪ್ರೇರಣೆ ನೀಡಿರುವುದೇ ಕಾಂಗ್ರೆಸ್ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

BJP State President Nalin Kumar Kateel
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
author img

By

Published : Dec 16, 2022, 12:26 PM IST

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೀಡಿರುವ ಹೇಳಿಕೆ ಭಯೋತ್ಪಾದನಾ ಚಟುವಟಿಕೆಗೆ ಪ್ರೇರಣೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಕಾಂಗ್ರೆಸ್​ನಿಂದ ಭಯೋತ್ಪಾದನಾ ಚಟುವಟಿಕೆ ಆರಂಭ: ಮಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದಲೇ ಈ ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆ ಆರಂಭವಾಗಿದೆ. ಈ ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗೆ ಪ್ರೇರಣೆ ನೀಡಿದ್ದೆ ಕಾಂಗ್ರೆಸ್. ಬಿಂದ್ರನವಾಲೆಯನ್ನು ಸೃಷ್ಟಿ ಮಾಡಿದ್ದೆ ಇಂದಿರಾಗಾಂಧಿ. ಕಾಶ್ಮೀರದಲ್ಲಿ ಆರಂಭವಾದ ಭಯೋತ್ಪಾದನೆ ದೇಶದ ಪ್ರತಿ ಊರಿಗೆ ಹಬ್ಬಿದೆ. ಆ ಕಾರಣದಿಂದ ಕಾಶ್ಮೀರದಲ್ಲಿ ಇದ್ದ ಬಾಂಬ್ ಸ್ಫೋಟಗಳು ದೇಶದ ಹಲವೆಡೆ ಯುಪಿಎ ಅವಧಿಯಲ್ಲಿ ಸ್ಫೋಟಗೊಂಡಿದೆ ಎಂದರು.

ಉಗ್ರರ ಎನ್ ಕೌಂಟರ್ ಆದಾಗ ಕಾಂಗ್ರೆಸ್​​ ರಾಷ್ಟ್ರೀಯ ಅಧ್ಯಕ್ಷರು ಕಣ್ಣೀರು ಹಾಕಿದ್ದರು. ಕಸಬ್​ಗೆ ಬಿರಿಯಾನಿ ನೀಡಿ ಅತಿಥಿ ಸತ್ಕಾರ ಮಾಡಿದ್ದಾರೆ. ಇದೇ ಮಾನಸಿಕತೆಯ ಕಾಂಗ್ರೆಸ್ ರಾಜ್ಯಾಧ್ಯಕ್ಷರಿಂದ ಈ ಹೇಳಿಕೆ ಬಂದಿದೆ ಎಂದು ಹೇಳಿದರು.

ಕಾಂಗ್ರೆಸ್​​ನಿಂದ ರಾಷ್ಟ್ರ ವಿರೋಧಿ ಕೃತ್ಯ: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಭಯೋತ್ಪಾದನೆ ಅಲ್ಲ ಎಂದು ಬಿಂಬಿಸಿ ಹೇಳಿಕೆ ನೀಡಿದ್ದಾರೆ. ಪೊಲೀಸರ ಕಾರ್ಯವನ್ನು ಪ್ರಶ್ನೆ ಮಾಡಲು ಕಾಂಗ್ರೆಸ್ ಕೈ ಹಾಕಿದೆ. ಹಿಂದಿನಿಂದಲೂ ಕಾಂಗ್ರೆಸ್ ಭಯೋತ್ಪಾದನೆಗೆ ಪ್ರೇರಣೆ ನೀಡುತ್ತಿದೆ. ರಾಷ್ಟ್ರ ವಿರೋಧಿ ಕೃತ್ಯದಲ್ಲೂ ತೊಡಗಿದೆ ಎಂದು ಆರೋಪಿಸಿದರು.

ಕಾಂಗ್ರೆಸ್​ನದ್ದು ಭಯೋತ್ಪಾದನಾ ಮಾನಸಿಕತೆ: ಕಾಂಗ್ರೆಸ್ ರಾಜ್ಯಾಧ್ಯಕ್ಷರ ಹೇಳಿಕೆ ಭಯೋತ್ಪಾದಕ ಚಟುವಟಿಕೆಗೆ ಪ್ರೇರಣೆಯಾಗಿದೆ. ಕಾಶ್ಮೀರದ ಕಾಂಗ್ರೆಸ್​​ ಮುಖಂಡರು ಅಧಿಕಾರಕ್ಕೆ ಬಂದರೆ ಜೈಲಿನಲ್ಲಿರುವ ಉಗ್ರರಿಗೆ ಒಂದು ಕೋಟಿ ರೂ ಮತ್ತು ಉದ್ಯೋಗ ನೀಡುವ ಹೇಳಿಕೆ ನೀಡುತ್ತಾರೆ. ಕಾಂಗ್ರೆಸ್ ಆಡಳಿತದ ಕಾಲಘಟ್ಟದಲ್ಲಿ 2000 ಪಿಎಫ್ಐ ಕಾರ್ಯಕರ್ತರ ಕೇಸುಗಳನ್ನು ವಾಪಸ್​ ಪಡೆಯಲಾಗಿದೆ. ಶಾರೀಕ್ ಹಿಂದೆ ಗೋಡೆಬರಹ ಬರೆದಿದ್ದಾಗ ಆತನ ಪರ ಹೇಳಿಕೆಯನ್ನು ನೀಡಿದ್ದರು. ಕಾಂಗ್ರೆಸ್​ನದು ಭಯೋತ್ಪಾದನಾ ಮಾನಸಿಕತೆಯಾಗಿದೆ. ಅವರು ಅಧಿಕಾರಗೋಸ್ಕರ ಹೀನ ಕೃತ್ಯಕ್ಕೆ ಇಳಿದಿದ್ದಾರೆ ಎಂದರು.

ಇದು ಡಿಕೆಶಿಯ ಮಾನಸಿಕತೆಯನ್ನು ತೋರಿಸುತ್ತದೆ. ಅವರು ಅಧಿಕಾರಕ್ಕೆ ಬಂದರೆ ಭಯೋತ್ಪಾದನೆಗೆ ಪ್ರೇರಣೆ ನೀಡುತ್ತಾರೆ. ಡಿಕೆಶಿ ಹೇಳಿಕೆಯನ್ನು ಖಂಡಿಸುತ್ತೇನೆ. ಕುಕ್ಕರ್ ಬಾಂಬ್ ಸ್ಫೋಟದ ತನಿಖೆಯನ್ನು ಎನ್​ಐಎ ಮಾಡುತ್ತಿದೆ. ಅದನ್ನು ಪ್ರಶ್ನಿಸುತ್ತಾ ಚಿಲ್ಲರೆ ರಾಜಕೀಯ ಮಾಡುತ್ತಿದೆ ಎಂದು ಹೇಳಿದರು.

ಭಯೋತ್ಪಾದನೆಗೆ ಕಾಂಗ್ರೆಸ್​ ಪ್ರೇರಣೆ: ಕೆಜೆ ಹಳ್ಳಿ ಪ್ರಕರಣದಲ್ಲಿ ಕಾಂಗ್ರೆಸ್ ಇತ್ತು. ಕಾಂಗ್ರೆಸ್​ನ ಮಾಜಿ ಮೇಯರ್ ಮತ್ತು ಪಿಎಫ್ಐ ಸೇರಿಕೊಂಡು ಗಲಭೆ ಸೃಷ್ಟಿಸಿದ್ದಾರೆ. ಅಖಂಡ ಶ್ರೀನಿವಾಸ ಮನೆಗೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ಭಯೋತ್ಪಾದನೆಗೆ ಇವರು ಬೆಂಬಲ ನೀಡುತ್ತಿದ್ದಾರೆ.

ವೋಟರ್ ಐಡಿ ಪ್ರಕರಣವನ್ನು ಮುಚ್ಚಿ ಹಾಕಿದ್ದು ಕಾಂಗ್ರೆಸ್. ಕಾಂಗ್ರೆಸ್ ಅವಧಿಯ ಪಿಎಸ್ಐ ಹಗರಣ, ಶಿಕ್ಷಕರ ನೇಮಕಾತಿ ಮತ್ತಿತರ ಭ್ರಷ್ಟಾಚಾರ ಬಗ್ಗೆ ತನಿಖೆಯನ್ನು ಸರ್ಕಾರ ಮಾಡುತ್ತಿದೆ. ಸರಕಾರ ಅದನ್ನು ಮುಚ್ಚಿಹಾಕುವ ಕೆಲಸ ಮಾಡುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಡಿಕೆಶಿಯದ್ದು ಹೇಡಿತನದ ಹೇಳಿಕೆ, ಜನರಲ್ಲಿ ಕ್ಷಮೆ ಕೇಳಬೇಕು: ಸಚಿವ ಅಶೋಕ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.