ETV Bharat / state

ಮಹಿಳೆಯೊಂದಿಗೆ ಶಾಸಕ ಲಿಂಬಾವಳಿ ವರ್ತನೆಗೆ ಡಿಕೆಶಿ ಕಿಡಿ - ಈಟಿವಿ ಭಾರತ ಕನ್ನಡ

ಅರವಿಂದ್ ಲಿಂಬಾವಳಿ ಮಹಿಳೆಗೆ ಅವಾಜ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರವಿಂದ್ ಲಿಂಬಾವಳಿ ಶಾಸಕರಾಗಿ ಮುಂದುವರೆಯಲು ಅರ್ಹರಲ್ಲ,ಜೊತೆಗೆ ಈ ಸರ್ಕಾರಕ್ಕೆ ಅಧಿಕಾರದಲ್ಲಿರಲು ಅರ್ಹತೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.

dk-shivakumar-statement-about-aravind-limbavali
ಮಹಿಳೆಯೊಂದಿಗೆ ಶಾಸಕ ಲಿಂಬಾವಳಿ ವರ್ತನೆಗೆ ಡಿಕೆಶಿ ಕಿಡಿ
author img

By

Published : Sep 3, 2022, 6:28 PM IST

ಬೆಂಗಳೂರು : ಯಾವುದೇ ಪಕ್ಷದವರಾಗಲಿ, ಜನರು ಆಯಾ ಕ್ಷೇತ್ರದ ಶಾಸಕರ ಬಳಿ ಹೋಗಿ ತಮಗಾಗಿರುವ ಅನ್ಯಾಯವನ್ನು ಕೇಳುತ್ತಾರೆ. ಮಹಿಳೆಯರು ಸಮಸ್ಯೆ ಹೇಳಿಕೊಳ್ಳಲು ಬಂದಾಗ ಅದನ್ನು ಕೇಳದಿರುವುದು ಸಮಂಜಸವಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿನ ಸದಾಶಿವನಗರದ ನಿವಾಸದಲ್ಲಿ ಮಾತನಾಡಿದ ಅವರು, ಸಚಿವ ಅರವಿಂದ್ ಲಿಂಬಾವಳಿ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದರು. ನಾನು ಕೂಡ ರಾಮನಗರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದಾಗ ಜನರು ಅವರ ಸಮಸ್ಯೆ, ದುಃಖವನ್ನು ಹೇಳಿಕೊಂಡರು. ಜನರ ಕಷ್ಟ ಕೇಳುವ ತಾಳ್ಮೆ ಇಲ್ಲವಾದರೆ ಅವರು ಶಾಸಕರಾಗಿರಲು ಅರ್ಹರಲ್ಲ ಎಂದು ಟೀಕಿಸಿದರು.

ಮಹಿಳೆಯೊಂದಿಗೆ ಶಾಸಕ ಲಿಂಬಾವಳಿ ವರ್ತನೆಗೆ ಡಿಕೆಶಿ ಕಿಡಿ

ಉದ್ಯೋಗ ಸೃಷ್ಟಿ ಮಾಡುವ ಮೂಲಕ ಸರ್ಕಾರಕ್ಕೆ ನೆರವು ನೀಡುತ್ತಿದ್ದ ಕಂಪನಿಗಳು ಇಂದು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಹೊರವಲಯ ರಿಂಗ್ ರೋಡ್ ಕಂಪನಿಗಳ ಸಂಘದವರು ಸರಕಾರಕ್ಕೆ ಪತ್ರ ಬರೆದು ತಮಗಾದ ತೊಂದರೆ, ನಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ. ಇದೇ ರೀತಿ ರಾಜ್ಯದ ಬಹುತೇಕ ಭಾಗಗಳಲ್ಲಿ ಆಗಿದೆ ಎಂದು ಹೇಳಿದರು.

ಅರವಿಂದ್ ಲಿಂಬಾವಳಿ ಶಾಸಕರಾಗಿ ಮುಂದುವರೆಯಲು ಅರ್ಹರಲ್ಲ. ಕೇವಲ ಅರವಿಂದ ಲಿಂಬಾವಳಿ ಮಾತ್ರವಲ್ಲ ಇಡೀ ಸರ್ಕಾರಕ್ಕೆ ಅಧಿಕಾರದಲ್ಲಿರಲು ಅರ್ಹತೆ ಇಲ್ಲ. ಇದು ಸರ್ಕಾರದ ಎಲ್ಲರ ವೈಫಲ್ಯ ಎಂದು ಟೀಕಿಸಿದರು.

ಬೆಂಗಳೂರಿನ ಬ್ರ್ಯಾಂಡ್ ಹಾಳಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ' ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಬೆಂಗಳೂರಿಗೆ ತಂದುಕೊಟ್ಟಿದ್ದ ಘನತೆಯನ್ನು ಈ ಸರ್ಕಾರ ಹಾಳು ಮಾಡಿದೆ. ಬೆಂಗಳೂರು ಸ್ಥಿತಿ ಗೋವಿಂದಾ ಗೋವಿಂದಾ ಗೋವಿಂದ' ಎನ್ನುವಂತಾಗಿದೆ ಎಂದು ತಿಳಿಸಿದರು.

ಇನ್ನು ದೆಹಲಿ ಭೇಟಿ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, ರಾಹುಲ್ ಗಾಂಧಿ ಅವರು ಹಿರಿಯ ನಾಯಕರ ಸಭೆ ಮಾಡುತ್ತಿದ್ದಾರೆ. ಪಕ್ಷದ ಕಾರ್ಯಕ್ರಮ ಇರುವುದರಿಂದ ಎಲ್ಲರನ್ನೂ ಕರೆದುಕೊಂಡು ಹೋಗುತ್ತಿಲ್ಲ. ಕೆಲವರನ್ನು ಮಾತ್ರ ಕರೆದುಕೊಂಡು ಹೋಗಲಾಗುತ್ತಿದೆ ತಿಳಿಸಿದರು.

ಇದನ್ನೂ ಓದಿ : ಮಹಿಳೆಗೆ ಆವಾಜ್ ಹಾಕಿದ ಪ್ರಕರಣ: ಕ್ಷಮೆ ಕೇಳಲು ಸಿದ್ಧ ಎಂದು ಅರವಿಂದ್ ಲಿಂಬಾವಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.