ETV Bharat / state

ಬ್ಲಾಕ್ ಸಮಸ್ಯೆಗಳ ಬಗ್ಗೆ ಚರ್ಚಿಸಲು ನಾಳೆಯಿಂದ ಡಿಕೆಶಿ ರಾಜ್ಯ ಪ್ರವಾಸ - ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಇಂದು ಮಂಗಳೂರಿಗೆ ತೆರಳಿರುವ ಡಿಕೆಶಿ ಜ. 7ರಂದು ವಾಪಸಾಗಲಿದ್ದಾರೆ. ಜ. 8ರಂದು ಬೆಂಗಳೂರಿನಲ್ಲಿ ಸಭೆ ನಡೆಸಿ, ನಂತರ ಹುಬ್ಬಳ್ಳಿ, ಬೆಳಗಾವಿ ವಿಭಾಗದ ಸಭೆ ಜ. 11ನೇ ತಾರೀಖು ನಡೆಯಲಿದೆ. ಜ. 18ರಂದು ಕಲಬುರಗಿಯಲ್ಲಿ ಸಭೆ ನಡೆಯಲಿದೆ. ಅಲ್ಲಿ ಆಯ್ದ ಕೆಲ ಅಗತ್ಯ ನಾಯಕರನ್ನು ಭೇಟಿ ಮಾಡಿ ಡಿಕೆಶಿ ಚರ್ಚಿಸಲಿದ್ದಾರೆ.

Dk shivakumar state tour tomorrow to discuss block issues
ನಾಳೆಯಿಂದ ಡಿಕೆಶಿ ರಾಜ್ಯ ಪ್ರವಾಸ
author img

By

Published : Jan 5, 2021, 10:35 PM IST

ಬೆಂಗಳೂರು: 2021 ಹೋರಾಟದ ವರ್ಷ, ಪಕ್ಷ ಸಂಘಟನೆ ವರ್ಷ ಎಂದು ಘೋಷಣೆ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಲ್ಲಾ ಬ್ಲಾಕ್ ಅಧ್ಯಕ್ಷರು, ಅವರ ಕ್ಷೇತ್ರಗಳ ಸಮಸ್ಯೆಗಳ ಬಗ್ಗೆ ಚರ್ಚಿಸಲು ನಾಳೆಯಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆ.

Dk shivakumar state tour tomorrow to discuss block issues
ನಾಳೆಯಿಂದ ಡಿಕೆಶಿ ರಾಜ್ಯ ಪ್ರವಾಸ

ಈ ನಿಟ್ಟಿನಲ್ಲಿ ಇಂದು ಸಂಜೆ ಬೆಂಗಳೂರಿನಿಂದ ತೆರಳಿರುವ ಅವರು ಮಂಗಳೂರು ತಲುಪಿದ್ದಾರೆ. ಕಾರ್ಯಕರ್ತರ ಧ್ವನಿ ನಾಯಕರ ಧ್ವನಿಯಾಗಬೇಕು. ಈ ನಿಟ್ಟಿನಲ್ಲಿ ನಾಳೆ ಮಂಗಳೂರಿನಲ್ಲಿ ಮೈಸೂರು ವಿಭಾಗದ ಜಿಲ್ಲೆಗಳ ಪಕ್ಷ ನಾಯಕರು, ಬ್ಲಾಕ್ ಅಧ್ಯಕ್ಷರ ಸಭೆ ಕರೆದಿದಿದ್ದಾರೆ. ಇದು ಪಕ್ಷದ ಆಂತರಿಕ ಸಭೆಯಾಗಿದ್ದು, ಸಾರ್ವಜನಿಕ ಸಭೆಯಲ್ಲ ಎಂದು ತಿಳಿಸಲಾಗಿದೆ.

ಓದಿ: ಕೊರೊನಾ ಲಸಿಕೆ ವಿತರಣೆಗೆ ರಾಜ್ಯ ಸಂಪೂರ್ಣ ಸಿದ್ಧ: ಸಚಿವ ಸುಧಾಕರ್

ಇಂದು ಮಂಗಳೂರಿಗೆ ತೆರಳಿರುವ ಡಿಕೆಶಿ ಜ. 7ರಂದು ವಾಪಸಾಗಲಿದ್ದಾರೆ. ಜ. 8ರಂದು ಬೆಂಗಳೂರಿನಲ್ಲಿ ಸಭೆ ನಡೆಸಿ, ನಂತರ ಹುಬ್ಬಳ್ಳಿ, ಬೆಳಗಾವಿ ವಿಭಾಗದ ಸಭೆ ಜ. 11ನೇ ತಾರೀಖು ನಡೆಯಲಿದೆ. ಜ. 18ರಂದು ಕಲಬುರಗಿಯಲ್ಲಿ ಸಭೆ ನಡೆಯಲಿದೆ. ಅಲ್ಲಿ ಆಯ್ದ ಕೆಲ ಅಗತ್ಯ ನಾಯಕರನ್ನು ಭೇಟಿ ಮಾಡಿ ಡಿಕೆಶಿ ಚರ್ಚಿಸಲಿದ್ದಾರೆ.

ವಿವರ ನೀಡಿದ ಡಿಕೆಶಿ:

ಇಂದು ಈ ಬಗ್ಗೆ ತಮ್ಮ ಸದಾಶಿವನಗರ ನಿವಾಸದಲ್ಲಿ ವಿವರ ನೀಡಿರುವ ಡಿ.ಕೆ.ಶಿವಕುಮಾರ್, ಇದೇ ಮಾರ್ಚ್​ನಿಂದ ಇಡೀ ರಾಜ್ಯದಲ್ಲಿ ಪ್ರವಾಸ ಮಾಡುತ್ತೇನೆ. ರಾಜ್ಯದ ಸಮಸ್ಯೆ ಬೇರೆ, ಸ್ಥಳೀಯ ಸಮಸ್ಯೆ ಬೇರೆ. ಉದಾಹರಣೆಗೆ ಬೆಂಗಳೂರಿನಲ್ಲಿ ಮನೆ ಕಟ್ಟುವ ಯೋಜನೆಗೆ ಅನುಮತಿ ನೀಡಲು ಸರ್ಕಾರ ಮೂರರಷ್ಟು ಶುಲ್ಕ ವಿಧಿಸಿದೆ.

ಅವರೇ ಲಾಕ್​​ಡೌನ್, ಸೀಲ್ ಡೌನ್ ಮಾಡಿ ವ್ಯಾಪಾರಿಗಳಿಗೆ ಆದಾಯ ಇಲ್ಲದಂತೆ ಮಾಡಿದರು. ಹೀಗಾಗಿ ಅವರು ತೆರಿಗೆ ಮನ್ನಾ ಮಾಡುವ ಬದಲು ಹೆಚ್ಚು ಮಾಡುತ್ತಿದ್ದಾರೆ. ಹೀಗೆ ಸ್ಧಳೀಯವಾಗಿ ಅನೇಕ ಸಮಸ್ಯೆಗಳಿವೆ. ಸರ್ಕಾರದ ತೀರ್ಮಾನ, ದೌರ್ಜನ್ಯದ ವಿರುದ್ಧ ಹೋರಾಟ ಮಾಡುತ್ತೇವೆ ಎಂದಿದ್ದಾರೆ.

ಚುನಾವಣೆ ಗೆಲ್ಲಲು ತಂತ್ರ:

ಅನುಭವ ಮಂಟಪ ಶಂಕುಸ್ಥಾಪನೆ ಚುನಾವಣೆ ತಂತ್ರ. ಬಸವ ಕಲ್ಯಾಣ ಉಪಚುನಾವಣೆ ಗೆಲ್ಲಲು ಈ ರೀತಿ ಮಾಡಿದ್ದಾರೆ. ಆದರೆ ಈ ಯೋಜನೆ ತೀರ್ಮಾನ ಮಾಡಿದ್ದು ನಮ್ಮ ಪಕ್ಷ. ಅವರು ರಾಜಕೀಯಕ್ಕಾಗಿ ಮಾಡುತ್ತಿದ್ದಾರೆ, ಮಾಡಿಕೊಳ್ಳಲಿ. ಬಿಜೆಪಿ ಅಸಮಾಧಾನದ ಬಗ್ಗೆ ಮಾಧ್ಯಮದವರಿಗೆ ಗೊತ್ತಿರುವಾಗ ಅದರ ಬಗ್ಗೆ ನಾನ್ಯಾಕೆ ಮಾತನಾಡಲಿ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.