ETV Bharat / state

15 ದಿನಗಳ ನಂತರ ನಿಮ್ಮ ಸರ್ಕಾರ ಇರಲ್ಲ, ನಿಮಗೆ ಕೊಡಬೇಕಾದ ಶಿಕ್ಷೆಯನ್ನು ಕಾಂಗ್ರೆಸ್ ಪಕ್ಷ ಕೊಡುತ್ತದೆ: ಡಿಕೆ ಶಿವಕುಮಾರ್​ - MLA SR Vishwanath

ಕಾಂಗ್ರೆಸ್ ಸಾರ್ವಜನಿಕ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್​ ಬಿಜೆಪಿ ವಿರುದ್ಧ ಭಾಷಣದ ಮೂಲಕ ಹರಿಹಾಯ್ದಿದ್ಧಾರೆ.

dk shivakumar
ಡಿಕೆ ಶಿವಕುಮಾರ್​
author img

By

Published : May 2, 2023, 2:00 PM IST

Updated : May 2, 2023, 2:43 PM IST

15 ದಿನಗಳ ನಂತರ ನಿಮ್ಮ ಸರ್ಕಾರ ಇರಲ್ಲ : ಡಿಕೆ ಶಿವಕುಮಾರ್​

ಯಲಹಂಕ(ಬೆಂಗಳೂರು) : ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೇಶವ ರಾಜಣ್ಣ ಪರವಾಗಿ ಪ್ರಚಾರ ನಡೆಸಲು ಯಲಹಂಕಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಂದಿದ್ದರು. ಇದೇ ವೇಳೆ ಸ್ಥಳೀಯ ಶಾಸಕರಾದ ಎಸ್.ಆರ್ ವಿಶ್ವನಾಥ್ ವಿರುದ್ಧ ವಾಗ್ಧಾಳಿ ನಡೆಸಿ, ಯಲಹಂಕದ ಭ್ರಷ್ಟ ಬಿಜೆಪಿ ಶಾಸಕನನ್ನು ತೊಲಗಿಸಲು ಜನ ಪಣ ತೊಟ್ಟಿದ್ದಾರೆಂಬ ಹೇಳಿಕೆ ನೀಡಿದ್ದಾರೆ.

ಯಲಹಂಕದ ಅಟ್ಟೂರಿನಲ್ಲಿ ಸಾರ್ವಜನಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಡಿ.ಕೆ.ಶಿವಕುಮಾರ್ ಭಾಗವಹಿಸಿದ್ದರು. ಈ ವೇಳೆ, ವೇದಿಕೆ ಭಾಷಣದಲ್ಲಿ ಮಾತನಾಡಿದ ಅವರು ಯಲಹಂಕದಲ್ಲಿ ವಿಶ್ವನಾಥ್ ರೆಡ್ಡಿ ಎಂಬ ಭೂತ ಇದೆಯೆಂದು ನೀವು ತಿಳಿದುಕೊಳ್ಳಬೇಡಿ, ಇಲ್ಲಿನ ಭ್ರಷ್ಟ ಬಿಜೆಪಿ ಶಾಸಕನನ್ನು ತೊಲಗಿಸಲು ಇಲ್ಲಿನ ಜನ ಪಣ ತೊಟ್ಟಿದ್ದಾರೆ.

ಇಲ್ಲಿನ ಶಾಸಕರು ಅಧಿಕಾರಿಗಳು ಮತ್ತು ಪೊಲೀಸರು ನಮ್ಮಕಾರ್ಯಕರ್ತರಿಗೆ ಕಿರುಕುಳ ಕೊಟ್ಟು ಬಿಜೆಪಿ ಬಾವುಟ ಕಟ್ಟುವಂತೆ ಹೇಳುತ್ತಿದ್ದಾರೆ. 15 ದಿನಗಳ ನಂತರ ನಿಮ್ಮ ಸರ್ಕಾರ ಇರಲ್ಲ, ನಿಮಗೆ ಕೊಡಬೇಕಾದ ಶಿಕ್ಷೆಯನ್ನು ಈ ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ಪಕ್ಷ ಕೊಡುತ್ತದೆ. ಅಧಿಕಾರಗಳೇ, ಪೊಲೀಸರೆ ನಿಮಗೆ ಖಾಕಿ ಬಟ್ಟೆ ಹಾಕಿಕೊಂಡು ಇರಲಿಕ್ಕೆ ಆಗದಿದ್ದರೆ, ನಿಮಗೆ ತಾಕತ್ತು ಇದ್ದರೆ ರಾಜೀನಾಮೆ ಕೊಟ್ಟು, ಬಿಜೆಪಿ ಬಾವುಟ ಹಾಕಿಕೊಂಡು ಕೆಲಸ ಮಾಡಿ ಎಂದು ಎಚ್ಚರಿಕೆ ಕೊಟ್ಟರು.

ನನಗೆ ಗೊತ್ತಿದೆ ಇದೇ ಅಧಿಕಾರಿಗಳಿಂದ ಕಾನೂನುಬದ್ಧ ಮತ್ತು ನ್ಯಾಯಬದ್ಧವಾಗಿ ಯಾವ ರೀತಿ ಚುನಾವಣೆ, ಆಡಳಿತ ಮಾಡಿಸಬೇಕೆಂದು. ಯಲಹಂಕವೇನು ಬಿಜೆಪಿಯ ಭಧ್ರಕೋಟೆಯ ಕ್ಷೇತ್ರವಲ್ಲ, ಬಿಜೆಪಿ ಪಕ್ಷ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಲ್ಲ. ಅಮಿತ್ ಶಾರವರೇ ಹೇಳಿದ್ದಾರೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ರಾಹುಲ್​ ಗಾಂಧಿಯವರು ಆರ್ಶಿವಾದ ಮಾಡಿದ್ಧಾರೆಂದು. ಆದರೆ, ಅವರು ನನ್ನನ್ನು ಮುಖ್ಯಮಂತ್ರಿ ಮಾಡುವ ಅವಶ್ಯಕತೆ ಇಲ್ಲ. ನೀವು ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಡಿಕೆ ಶಿವಕುಮಾರ್​ಗೆ ನೀವು ಅಧಿಕಾರ ಕೊಡಬೇಕು ಹೊರತು ಬಿಜೆಪಿ ಕೊಡುವ ಅಧಿಕಾರ ನನಗೆ ಬೇಡ ಎಂದರು.

ಬಾಗಲಕೋಟೆ:-ಸಮಾಜ ಸೇವೆ ದೃಷ್ಟಿಯಿಂದ ರಾಜಕೀಯಕ್ಕೆ ಬಂದಿದ್ದೇನೆ-ಡಾ.ದೇವರಾಜ ಪಾಟೀಲ: ವೈದ್ಯನಾಗಿ ಸಮಾಜ ಸೇವೆ ಮಾಡುವುದು ಸಿಮೀತವಾಗುತ್ತದೆ. ರಾಜಕೀಯವಾಗಿ ಸಮಾಜ ಸೇವೆ ಮಾಡುವುದು ಎಲ್ಲರಿಗೂ ಅನುಕೂಲವಾಗುತ್ತದೆ ಎಂಬ ದೃಷ್ಟಿಯಿಂದ ರಾಜಕೀಯಕ್ಕೆ ಬಂದಿದ್ದೇನೆ ಎಂದು ಬಾಗಲಕೋಟೆ ಜೆಡಿಎಸ್ ಪಕ್ಷದ ಅಭ್ಯರ್ಥಿ ಡಾ.ದೇವರಾಜ ಪಾಟೀಲ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಸಮಾಜ ಸೇವೆ ದೃಷ್ಟಿಯಿಂದ ರಾಜಕೀಯಕ್ಕೆ - ಡಾ.ದೇವರಾಜ ಪಾಟೀಲ

ಅವರು ಈ ಟಿ ವಿ ಭಾರತದೊಂದಿಗೆ ಮಾತನಾಡುತ್ತಾ, ಸುಮಾರು 20 ವರ್ಷಕ್ಕೂ ಅಧಿಕ ಕಾಲ ವೈದ್ಯಕೀಯ ಸೇವೆಯಲ್ಲಿ ಜನರು ನನನ್ನು ಬೆಳೆಸಿದ್ದಾರೆ. ಈಗ ಜನರ ಸೇವೆಗಾಗಿ ರಾಜಕೀಯಕ್ಕೆ‌ ಬಂದಿದ್ದೇನೆ. ಬಾಗಲಕೋಟೆ ಮತಕ್ಷೇತ್ರದಲ್ಲಿ ಇಬ್ಬರು ಹಳೆ‌ ಮುಖವನ್ನು ನೋಡಿ ಜನರು ಬೇಸತ್ತು ಹೋಗಿದ್ದು, ಬದಲಾವಣೆ ಬಯಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಕೆಲಸ ಕಾರ್ಯ ಮಾಡಿಕೊಂಡು ಪಕ್ಷವನ್ನು ಬೆಳೆಸಿದ್ದೇನೆ. ಆದರೆ, ಸೂಕ್ತ ಸ್ಥಾನಮಾನ ಸಿಗಲಾರದ ಹಿನ್ನೆಲೆ, ಜೆಡಿಎಸ್ ಪಕ್ಷಕ್ಕೆ ಬರುವುದು ಅನಿವಾರ್ಯವಾಯಿತು.

ಮುಳಗಡೆ ಆಗಿರುವ ಬಾಗಲಕೋಟೆ ನಗರದಲ್ಲಿ ಸಂತ್ರಸ್ತರ ಸಮಸ್ಯೆ ಸೇರಿದಂತೆ ಉದ್ಯೋಗ ಇಲ್ಲದೇ ತೊಂದರೆ‌ ಪರದಾಡುತ್ತಿದ್ದಾರೆ. ಈ‌ ಹಿನ್ನೆಲೆ ಕೇವಲ ರಸ್ತೆ ಮಾಡಿದರೆ ಅಭಿವೃದ್ಧಿ ಅಲ್ಲ, ಸಂತ್ರಸ್ತರ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ‌ ಕೆಲಸ ಕಾರ್ಯಗಳು ಮಾಡಬೇಕಾಗಿದೆ. ವೈದ್ಯಕೀಯ ವೃತ್ತಿ ಸೇರಿದಂತೆ ಹೆಚ್ಚಿನ ಶಿಕ್ಷಣಮಟ್ಟ ಆಗಿದ್ದರಿಂದ ಸಾಮಾಜದಲ್ಲಿ ಹಲವಾರು ಬದಲಾವಣೆ ಮಾಡುವ ಹೊಸ ಹೊಸ ಯೋಚನೆಯನ್ನು ಹೊಂದಿರುವುದಾಗಿ, ಪ್ರಚಾರ ಸಮಯದಲ್ಲಿ ಹೆಚ್ಚಿನ ಸಂದ್ಪನೆ ವ್ಯಕ್ತವಾಗಿದೆ.

ಯುವ ಸಮೂಹಕ್ಕೆ ಶಿಕ್ಷಣ ಸೇರಿದಂತೆ ಉದ್ಯೋಗ ನೀಡಬೇಕಾಗಿದೆ ಈ ನಿಟ್ಟಿನಲ್ಲಿ ಕೆಲಸ ಕಾರ್ಯಗಳು ಮಾಡಲಾಗುವುದು. ಮಾಜಿ ಮುಖ್ಯಮಂತ್ರಿ ‌ಕುಮಾರಸ್ವಾಮಿ ಅವರು, ರಾಜ್ಯದ ಅಭಿವೃದ್ಧಿ, ಬಡ ಜನತೆ ಪರವಾಗಿ ಕೆಲಸ ಮಾಡುತ್ತಿರುವುದರಿಂದ ಹಿಂದೆ ಮಾಡಿರುವ ಅವರ ಆಡಳಿತಕ್ಕೆ ಮೆಚ್ಚಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡು ಬದಲಾವಣೆ ಮಾಡುವ ಗುರಿ ಹೊಂದಲಾಗಿದೆ. ಈ ಭಾರಿ ಚುನಾವಣೆಯಲ್ಲಿ ಜಯಗಳಿಸುವುದು ಖಚಿತ ಎಂದು ಡಾ.ದೇವರಾಜ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ: ಒಂದೇ ಗ್ರಾಮದಲ್ಲಿ 2 ಸಾವಿರಕ್ಕೂ ಅಧಿಕ ಜನ ಬಿಜೆಪಿ ಸೇರ್ಪಡೆ, ಇತಿಹಾಸ ಸೃಷ್ಟಿಸಲಿದೆಯಾ ಬಿಜೆಪಿ?..

Last Updated : May 2, 2023, 2:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.