ETV Bharat / state

ಬೇರೆ ಪಕ್ಷದಿಂದ ಬಂದು ಗುಂಪು ಕಟ್ಟಿ ಪಕ್ಷ ಹಾಳು ಮಾಡಬೇಡಿ : ಡಿ ಕೆ ಶಿವಕುಮಾರ್ ಕಿವಿಮಾತು

author img

By

Published : Jun 25, 2021, 3:20 PM IST

ಹಾಸನ ಜಿಲ್ಲೆಯಲ್ಲಿ ಪಕ್ಷಕ್ಕೆ ಉತ್ತಮ ವಾತಾವರಣ ಇದೆ. ನಾನು ಎಲ್ಲಾ ಮುಖಂಡರ ಜೊತೆ ಮಾತನಾಡುತ್ತಿದ್ದೇನೆ. ನಮ್ಮ ಪಕ್ಷದ ಸಿದ್ದಾಂತ, ಸೋನಿಯಾ ಗಾಂಧಿಯವರ ನಾಯಕತ್ವ ಒಪ್ಪಿ ಪಕ್ಷಕ್ಕೆ ಬರುವವರಿಗೆ ಸ್ವಾಗತ. ಕಂಡೀಷನ್ ಮೇಲೆ ಬರುವವರ ಲಿಸ್ಟ್ ಕೊಡಿ ಎಂದಿದ್ದಾರೆ..

DK Shivakumar
ಡಿಕೆ ಶಿವಕುಮಾರ್

ಬೆಂಗಳೂರು : ಬೇರೆ ಪಕ್ಷದಿಂದ ಬಂದು, ಗುಂಪು ಕಟ್ಟಿ ಪಕ್ಷ ಹಾಳು ಮಾಡಬೇಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಬೇಲೂರು ವಿಧಾನಸಭಾ ಕ್ಷೇತ್ರದ ಹಲವು ಸ್ಥಳೀಯ ಬಿಜೆಪಿ-ಜೆಡಿಎಸ್ ನಾಯಕರನ್ನ ಕಾಂಗ್ರೆಸ್‌ಗೆ ಸೇರ್ಪಡೆಗೊಳಿಸಿ ಬಳಿಕ ಮಾತನಾಡಿದ ಅವರು, ಬೇರೆ ಪಕ್ಷದಿಂದ ಬಂದು ಗುಂಪು ಮಾಡಿ, ಪಕ್ಷ ಹಾಳು ಮಾಡಬೇಡಿ. ಪಕ್ಷ ಪೂಜೆ ಮಾಡಿ, ವ್ಯಕ್ತಿ ಪೂಜೆ ಮಾಡಬೇಡಿ. ಯಾವುದೇ ಕಾರಣಕ್ಕೂ ಗೊಂದಲ ಆಗಬಾರದು ಎಂದಿದ್ದಾರೆ.

ಬೇರೆ ಪಕ್ಷದಿಂದ ಬಂದು ಗುಂಪು ಕಟ್ಟಿ ಪಕ್ಷ ಹಾಳು ಮಾಡಬೇಡಿ : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕಿವಿಮಾತು

ಜೆಡಿಎಸ್-ಬಿಜೆಪಿಯ ಎಷ್ಟು ನಾಯಕರು ನನ್ನ ಸಂಪರ್ಕದಲ್ಲಿ ಇದ್ದಾರೆ ಎಂದು ನಾನು ಹೇಳಲ್ಲ. ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರೋದಿಲ್ಲ ಎಂದು ಬಿಜೆಪಿ ಶಾಸಕರು, ಸಚಿವರಿಗೆ ಮನವರಿಕೆ ಆಗಿದೆ. ಹಾಸನ ಜಿಲ್ಲೆಯಲ್ಲಿ ಪಕ್ಷಕ್ಕೆ ಉತ್ತಮ ವಾತಾವರಣ ಇದೆ.

ನಾನು ಎಲ್ಲಾ ಮುಖಂಡರ ಜೊತೆ ಮಾತನಾಡುತ್ತಿದ್ದೇನೆ. ನಮ್ಮ ಪಕ್ಷದ ಸಿದ್ದಾಂತ, ಸೋನಿಯಾ ಗಾಂಧಿಯವರ ನಾಯಕತ್ವ ಒಪ್ಪಿ ಪಕ್ಷಕ್ಕೆ ಬರುವವರಿಗೆ ಸ್ವಾಗತ. ಕಂಡೀಷನ್ ಮೇಲೆ ಬರುವವರ ಲಿಸ್ಟ್ ಕೊಡಿ ಎಂದಿದ್ದಾರೆ.

ರಾಷ್ಟ್ರಧ್ವಜ ನನ್ನ ಧರ್ಮ ಅಂತ ರಾಹುಲ್ ಗಾಂಧಿ ಹೇಳಿದ್ದಾರೆ. ಒಗ್ಗಟ್ಟಿನಿಂದ ಕೆಲಸ ಮಾಡಿ, ಬೇಲೂರು ಸೀಟು ನಮಗೆ ಸಿಗುವ ವಾತಾವರಣ ಇದೆ. ಪಕ್ಷ ಪೂಜೆ ಮಾಡಿ, ವ್ಯಕ್ತಿ ಪೂಜೆ ಮಾಡಬೇಡಿ ಎಂದು ಕಾಂಗ್ರೆಸ್​​ ಸೇರ್ಪಡೆಗೊಂಡ ನೂತನ ಸದಸ್ಯರಿಗೆ ಕಿವಿಮಾತು ಹೇಳಿದ್ದಾರೆ.

ಓದಿ: ಸಿದ್ದು ಮುಂದಿನ ಸಿಎಂ ಅನ್ನೋದಕ್ಕೆ ಇದು ಟೂ ಅರ್ಲಿ, ಸಿಎಂ ಸ್ಥಾನ ಪತ್ರಾವಳಿ ಅಲ್ಲ: ವಿಶ್ವನಾಥ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.