ಬೆಂಗಳೂರು : ಪ್ರತಿ ವಿಚಾರಕ್ಕೂ ಗುಜರಾತ್ ಮಾಡಲ್ ಅನ್ನೋದು ಬೇಡ. ಗುಜರಾತ್ ಮಾಡಲ್ ಯಾವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಕ್ರೋಶ ಹೊರ ಹಾಕಿದ್ದಾರೆ.
ಜಗದೀಶ್ ಶೆಟ್ಟರ್ ಗುಜರಾತ್ ಪ್ರವಾಸ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಗುಜರಾತ್ಗೆ ಎಷ್ಟು ವ್ಯಾಕ್ಸಿನ್ ಕೊಟ್ಟಿದ್ದಾರೆ. ನಮಗೆ ಎಷ್ಟು ಕೊಟ್ಟಿದ್ದಾರೆ. ನಮಗೆ ಅದರಲ್ಲಿ ಶೇ.50ರಷ್ಟು ವ್ಯಾಕ್ಸಿನ್ ಕೊಟ್ಟಿಲ್ಲ. ಮೊದಲು ಇದರ ಬಗ್ಗೆ ಸಿಎಂ ಅವರು ಪ್ರಧಾನಿ ಬಳಿ ಮಾತನಾಡಲಿ ಎಂದು ವಾಗ್ದಾಳಿ ನಡೆಸಿದರು.
ಬೆಂಗಳೂರು ಕಾಂಗ್ರೆಸ್ ಶಾಸಕರು ಮತ್ತು ನಾಯಕರ ಸಭೆ ಕರೆದಿರುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಬೆಂಗಳೂರು ವಿಚಾರಗಳ ಬಗ್ಗೆ ಚರ್ಚೆ ಮಾಡಲು ಸಭೆ ನಡೆಸುತ್ತಿದ್ದೇವೆ. ಕೊರೊನಾದಿಂದ ಸತ್ತವರಿಗೆ ಪರಿಹಾರ ಸಿಕ್ತಿಲ್ಲ. ಅವರಿಗೆ ದಾಖಲೆ ಸಿಕ್ತಿಲ್ಲ.
ಕೊರೊನಾದಿಂದ ಸಂಕಷ್ಟ ಎದುರಿಸಿದವರಿಗೆ ಪರಿಹಾರ ಕೊಡ್ತಿಲ್ಲ. ಆನ್ಲೈನ್ ನೋಂದಣಿ ರೈತರಿಗೆ ಬಡವರಿಗೆ ಗೊತ್ತಿದ್ದೀಯಾ? ಸರ್ಕಾರದ ಪರಿಹಾರ ಜನರಿಗೆ ತಲುಪಿಸುವ ಕೆಲಸ ಮಾಡಬೇಕು. 1.5 ಕೋಟಿ ಜನ ಇದ್ದಾರೆ. ಹೀಗಾಗಿ, ಜನರಿಗೆ ಯಾವ ರೀತಿ ಸ್ಪಂದಿಸಬೇಕು. ಸರ್ಕಾರದ ವೈಪಲ್ಯಗಳ ಬಗ್ಗೆ ಚರ್ಚೆ ಮಾಡಲು ಈ ಸಭೆ ಕರೆದಿದ್ದೇವೆ ಎಂದರು.
ಇದನ್ನೂ ಓದಿ: ಪ್ರತಿ ದಿನ 5 ಲಕ್ಷದಂತೆ ತಿಂಗಳಿಗೆ 1.5 ಕೋಟಿ ಡೋಸ್ ಲಸಿಕೆ ಒದಗಿಸಲು ಪಿಎಂಗೆ ಸಿಎಂ ಮನವಿ