ETV Bharat / state

ಜಮೀರ್ ಮೇಲಿನ ಇಡಿ ದಾಳಿಯಿಂದ ಡಿಕೆಶಿ ಒಳಗೊಳಗೆ ಖುಷಿಯಾಗಿದ್ದಾರೆ: ರವಿಕುಮಾರ್ - ಜಮೀರ್ ಮೇಲಿನ ಇಡಿ ದಾಳಿಯಿಂದ ಡಿಕೆಶಿ ಒಳಗೊಳಗೆ ಖುಷಿಯಾಗಿದ್ದಾರೆ

ಇಂದು ಏಕಾಏಕಿ ಇಡಿ ಅಧಿಕಾರಿಗಳು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಜಮೀರ್ ಅಹಮದ್ ಖಾನ್ ನಿವಾಸ, ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಈ ಸಂಬಂಧ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಪ್ರತಿಕ್ರಿಯಿಸಿದ್ದು, ಇದರಿಂದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ಗೆ ಖುಷಿಯಾಗಿದೆ ಎಂದಿದ್ದಾರೆ.

Ravikumar
ರವಿಕುಮಾರ್
author img

By

Published : Aug 5, 2021, 3:09 PM IST

ಬೆಂಗಳೂರು: ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಜಮೀರ್ ಅಹಮದ್ ಖಾನ್ ನಿವಾಸ, ಕಚೇರಿಗಳ ಮೇಲೆ ಇಡಿ(ಜಾರಿ ನಿರ್ದೇಶನಾಲಯ) ಇಂದು ದಾಳಿ ನಡೆಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಇಡಿ ಅಧಿಕಾರಿಗಳ ದಾಳಿಯಿಂದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಒಳಗೊಳಗೆ ಬಹಳ ಖುಷಿಯಾಗಿದ್ದಾರೆ. ಸಿದ್ದರಾಮಯ್ಯನವರಿಗೆ ಗೊತ್ತಾಗಬಾರದು ಎಂದು ಬಿಜೆಪಿ ವಿರುದ್ಧ ಆರೋಪ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಓದಿ: ಜಮೀರ್ ನಿವಾಸದ ಮೇಲೆ ಇಡಿ ದಾಳಿ: ಕಾಂಗ್ರೆಸ್ ನಾಯಕರಲ್ಲಿ ಮತ್ತೆ ಆತಂಕ

ಡಿ ಕೆ ಶಿವಕುಮಾರ್ ಡಬಲ್ ಸ್ಟ್ಯಾಂಡ್ ರೀತಿ ಮಾತನಾಡುತ್ತಾರೆ. ಡಿಕೆಶಿ, ಸಿದ್ದು ಕಾಲದಲ್ಲಿ ಏನೇನು ಆಗಿದೆ ಎಂದು ಸವಿಸ್ತಾರವಾಗಿ ಮಾಧ್ಯಮಗಳಲ್ಲಿ ತೋರಿಸಿದ್ದಾರೆ. ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾಗಾಂಧಿ, ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ, ಡಿಕೆಶಿ ಮೇಲೆ ಕೇಸ್​ಗಳಿವೆ. ಶಿವಕುಮಾರ್​ ಅವರು ಬಿಜೆಪಿ ವಿರುದ್ಧ ಕೈ ಮಾಡಿ ತೋರಿಸಿದ್ದು, ಒಂದು ಬೆರಳು ಬಿಜೆಪಿ ಕಡೆ ತೋರಿಸಿದ್ರೆ, ನಾಲ್ಕು ಬೆರಳು ಅವರ ಕಡೆ ತೋರಿಸುತ್ತವೆ ಎಂದು ಟಾಂಗ್ ನೀಡಿದರು.

ಓದಿ: ಜಮೀರ್ ಅಹಮದ್ ಮನೆ, ಕಚೇರಿಗಳ ಮೇಲಿನ ಇಡಿ ದಾಳಿ ರಾಜಕೀಯ‌ ಪ್ರೇರಿತ: ಅಲ್ತಾಫ್ ಖಾನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.