ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೋಮವಾರ ಮಹಾರಾಷ್ಟ್ರಕ್ಕೆ ಭೇಟಿಕೊಟ್ಟಿದ್ದರು. ಬೆಳಗ್ಗೆ ಬೆಂಗಳೂರಿನಿಂದ ತೆರಳಿದ್ದ ಡಿಕೆಶಿ ಮುಂಬಯಿಯಲ್ಲಿ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಬಾಳಾಸಾಹೇಬ್ ತೋರಟ್ ಅವರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಎರಡು ರಾಜ್ಯಗಳ ಪ್ರಸ್ತುತ ರಾಜಕೀಯ ವಿಚಾರ ಕುರಿತು ಸಮಾಲೋಚನೆ ನಡೆಸಿದ್ದಾಗಿ ಮಾಹಿತಿ ಇದೆ.
ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದು ಕಾಂಗ್ರೆಸ್ ಕೂಡ ಒಂದು ಪ್ರಮುಖ ಭಾಗವಾಗಿ ಸರ್ಕಾರದಲ್ಲಿ ಭಾಗಿಯಾಗಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಭಾಗದ ಸಮಸ್ಯೆಗಳು ಹಾಗೂ ನೀರಿನ ಸಮಸ್ಯೆಗಳಿಗೆ ಕಳೆದ ಕೆಲ ವರ್ಷಗಳಿಂದ ಸಾಕಷ್ಟು ಹೋರಾಟ ನಡೆದಿದೆ. ಬೆಳಗಾವಿ ಭಾಗದಲ್ಲಿ ನಿರಂತರವಾಗಿ ಕನ್ನಡಿಗರು ಹಾಗೂ ಮರಾಠಿಗರ ನಡುವೆ ಕಿತ್ತಾಟ ನಡೆಯುತ್ತಲೇ ಇರುತ್ತದೆ. ಅಲ್ಲದೆ ಮಹಾರಾಷ್ಟ್ರ ಸರ್ಕಾರದ ಪ್ರಮುಖ ಸಚಿವರು ಕರ್ನಾಟಕದ ವಿವಿಧ ಜಿಲ್ಲೆಗಳು ನಮ್ಮ ಭಾಗ ಎಂದು ಹೇಳಿಕೊಂಡಿವೆ. ಇಂತಹ ಹೇಳಿಕೆಗಳು ಉಭಯ ರಾಜ್ಯಗಳ ನಡುವಿನ ಬಾಂಧವ್ಯವನ್ನು ಕಡಿಮೆಮಾಡುತ್ತದೆ.
ಇದನ್ನೂ ಓದಿ : ಮೈಲಾರ ಲಿಂಗೇಶ್ವರನಿಗೆ ಬೆಳ್ಳಿ ಹೆಲಿಕಾಪ್ಟರ್ ಅರ್ಪಿಸಿದ ಟ್ರಬಲ್ ಶೂಟರ್
ಹಿನ್ನೆಲೆ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್ ಪಕ್ಷದ ಜವಾಬ್ದಾರಿಯೂ ಸಾಕಷ್ಟು ಇದ್ದು, ಸೌಹಾರ್ದತೆ ಕಾಪಾಡಿಕೊಳ್ಳುವಂತೆ ಸರ್ಕಾರದ ಗಮನಕ್ಕೆ ತಂದರೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಮೇಲಿನ ವಿಶ್ವಾಸ ಹೆಚ್ಚಲಿದೆ. 2023ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಕಾರ್ಯತಂತ್ರ ನಡೆಯುತ್ತಿರುವ ನಾವು ಒಂದು ಸಹಕಾರ ನಿಮ್ಮಿಂದ ಲಭಿಸಿದರೆ ಮುಂದೆ ಅಧಿಕಾರಕ್ಕೆ ಬರುವುದು ಸುಲಭವಾಗಲಿದೆ ಎಂಬ ಮಾತನ್ನು ಡಿಕೆಶಿ ಇದೇ ಸಂದರ್ಭ ಆಡಿದ್ದಾರೆ ಎಂಬ ಮಾಹಿತಿ ಇದೆ. ಬಾಳಾಸಾಹೇಬ್ ಕೂಡ ಇದಕ್ಕೆ ಪೂರಕವಾಗಿ ಸ್ಪಂದಿಸಿದ್ದು ತಾವು ಸಂಬಂಧಿಸಿದವರ ಜೊತೆ ಸಮಾಲೋಚಿಸುವುದಾಗಿ ಭರವಸೆ ನೀಡಿದ್ದಾರೆ.
ಅದೇ ರೀತಿ ಕರ್ನಾಟಕದ ಜನ ಕೂಡ ಗಡಿಭಾಗದಲ್ಲಿ ಅನಗತ್ಯ ತಂಟೆ ತೆಗೆಯದಂತೆ ಮನವರಿಕೆ ಮಾಡುವಂತೆಯೂ ಸೂಚಿಸಿದ್ದಾರೆ.
ಟ್ಟಾರೆ ಮುಂಬರುವ ದಿನಗಳಲ್ಲಿ ಮಹಾರಾಷ್ಟ್ರ ಹಾಗೂ ಕರ್ನಾಟಕದ ನಡುವಿನ ಅಂತರ ಕಡಿಮೆಯಾಗಿ ಸೌಹಾರ್ದತೆ ಏರ್ಪಡಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಉಭಯ ನಾಯಕರು ಸುದೀರ್ಘ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಇದೆ.