ETV Bharat / state

ಡಿ.ಜೆ ಹಳ್ಳಿ ಗಲಭೆ: ದೊಡ್ಡ ಅನಾಹುತ ತಪ್ಪಿಸಿದ್ದ ಪಶ್ಚಿಮ ವಿಭಾಗ ಪೊಲೀಸರು

author img

By

Published : Aug 24, 2020, 9:41 AM IST

ಡಿ.ಜೆ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಸ್ವತಃ ಬಂಧಿತ ಆರೋಪಿಗಳು ಪಶ್ಷಿಮ ವಿಭಾಗದ ವ್ಯಾಪ್ತಿಯಲ್ಲಿ ವಾಸ‌ ಮಾಡುವವರಿಗೆ ಗಲಭೆಯಲ್ಲಿ ಭಾಗಿಯಾಗುವುದಕ್ಕೆ ಕರೆ ನೀಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.

Bangalore
ಡಿ.ಜೆ ಹಳ್ಳಿ ಗಲಭೆಗೆ ಕರೆ: ದೊಡ್ಡ ಅನಾಹುತ ತಪ್ಪಿಸಿದ ಪಶ್ಚಿಮ ವಿಭಾಗ ಪೊಲೀಸರು

ಬೆಂಗಳೂರು: ಡಿ.ಜೆ ಹಳ್ಳಿ ಕೆ.ಜಿ ಹಳ್ಳಿ ಗಲಭೆ ಪ್ರಕರಣ ಇಡೀ ಬೆಂಗಳೂರನ್ನೇ ಆವರಿಸುತ್ತಿತ್ತು ಅನ್ನೋ ಸ್ಫೋಟಕ ವಿಚಾರ ಆರೋಪಿಗಳ ತನಿಖೆ ವೇಳೆ ತಿಳಿದು ಬಂದಿದೆ. ಬಂಧಿತ ಆರೋಪಿಗಳು ಈ ಮಾಹಿತಿಯನ್ನ ಬಿಚ್ವಿಟ್ಡಿದ್ದು, ಪೊಲೀಸರ ಮುಂಜಾಗ್ರತೆ ಕ್ರಮದಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

ಹೌದು.. ಡಿ.ಜೆ ಹಳ್ಖಿ ಗಲಭೆ ಸೃಷ್ಟಿಯಾಗುತ್ತಿದ್ದ ಹಾಗೆ ವಾಟ್ಸ್​​​ಆ್ಯಪ್​​, ಫೇಸ್​​​ಬುಕ್​ ಹಾಗೇ ಕರೆಗಳ ಮೂಲಕ ದೊಂಬಿ ಎಬ್ಬಿಸಲು ಬರುವಂತೆ ಬಂಧಿತರು ಕರೆ ನೀಡಿದ್ದರು‌. ಅದರಂತೆ ಪಶ್ಚಿಮ ವಿಭಾಗದಿಂದ ಹತ್ತಾರು ಓಮಿನಿ ಮೂಲಕ ಗಲಭೆ ನಡೆಯುವ ಸ್ಥಳಕ್ಕೆ ತೆರಳಲು ಯುವಕರು ಹೊರಟ್ಟಿದ್ದರು. ಇನ್ನು ಕೆ.ಜಿ ಹಳ್ಳಿ ಡಿ.ಜೆ ಹಳ್ಳಿ ಗಲಭೆ ಮಿತಿ ಮೀರುತ್ತಿದ್ದ ಹಾಗೆ ನಗರದಲ್ಲಿ ನಾಕಾ ಬಂದಿ ಹಾಕಲಾಗಿ ಟೈಟ್ ಸೆಕ್ಯೂರಿಟಿ ಮಾಡಲಾಗಿತ್ತು. ಡಿಸಿಪಿ ಹಾಗೂ ಸಿಬ್ಬಂದಿ ಮೆಜೆಸ್ಟಿಕ್, ಮಲ್ಲೇಶ್ವರಂ, ಜೆ.ಜೆ.ನಗರ ಕಾಮಾಕ್ಷಿಪಾಳ್ಯ ಹೀಗೆ ಎಲ್ಲ ಪ್ರಮುಖ ರಸ್ತೆಯಲ್ಲಿ ನಾಕಾಬಂದಿ ಹಾಕಿ ಪರಿಶೀಲನೆ ನಡೆಸಲು ಮುಂದಾಗಿದ್ದರು.

ಅಂದು 8 :20ಕ್ಕೆ ಕಾರ್ಯ ಪ್ರವೃತ್ತರಾದ ಪೊಲೀಸರು, ಪಶ್ಚಿಮದ ಸೂಕ್ಷ್ಮ ಪ್ರದೇಶಗಳಲ್ಲಿ ನಾಕಾಬಂದಿ ಹಾಕಿ ಯಾರೂ ಕಾರಣವಿಲ್ಲದೇ ಹೊರ ಹೋಗದಂತೆ ಹೊಯ್ಸಳ ಹಾಗೂ ಕೋಬ್ರಾಗಳು ಅಲರ್ಟ್ ಆಗಿದ್ದವು. ಈ ಮೂಲಕ ಡಿ.ಜೆ ಹಳ್ಳಿ ಬಳಿ ಮತ್ತಷ್ಟು ಅವಘಡ ಸಂಭವಿಸುವುದನ್ನ ಪಶ್ಚಿಮ ವಿಭಾಗ ಪೊಲೀಸರು ನಿಲ್ಲಿಸಿದ್ದಾರೆ. ಈ ‌ಹಿಂದೆ ಪಶ್ಚಿಮ ವಿಭಾಗ ವ್ಯಾಪ್ತಿಯ ಪಾದರಾಯನಪುರದಲ್ಲಿ ಕೊರೊನಾ ವಾರಿಯರ್ ಮೇಲೆ ಹಲ್ಲೆ ನಡೆದಿತ್ತು. ಅಲ್ಲಿಂದ ಪಶ್ಚಿಮ ವಿಭಾಗ ಪೂರ್ತಿ ಖಾಕಿ ಕಣ್ಗಾವಲಿನಲ್ಲಿತ್ತು. ಸದ್ಯ ಪಶ್ಚಿಮ ವಿಭಾಗದಿಂದ ಗಲಭೆಕೋರರು ಪೂರ್ವ ವಿಭಾಗದ ಡಿ.ಜೆ ಹಳ್ಳಿ ಬಳಿ ಹೋಗುವುದನ್ನ ತಪ್ಪಿಸಿದ್ದಾರೆ.

ಸದ್ಯ ಈ ವಿಚಾರವನ್ನ ಸ್ವತಃ ಬಂಧಿತ ಆರೋಪಿಗಳು ಪಶ್ಷಿಮ ವಿಭಾಗದ ವ್ಯಾಪ್ತಿಯಲ್ಲಿ ವಾಸ‌ ಮಾಡುವವರಿಗೆ ಗಲಭೆಯಲ್ಲಿ ಭಾಗಿಯಾಗುವುದಕ್ಕೆ ಕರೆ ನೀಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.