ಬೆಂಗಳೂರು: ಡಿಜೆ ಹಳ್ಳಿ, ಮತ್ತು ಕೆಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಫೇಸ್ ಬುಕ್ ಪೊಸ್ಟ್ ಮಾಡಿದ್ದ ನವೀನ್ ಹೆಸರಲ್ಲಿ ಮತ್ತೊಂದು ನಕಲಿ ಫೇಸ್ಬುಕ್ ಅಕೌಂಟ್ ಕ್ರಿಯೆಟ್ ಆಗಿದೆ.
ಹೌದು, ನವೀನ್ ಫೇಸ್ಬುಕ್ ನಕಲು ಮಾಡಿದ್ದು, ಸದ್ಯ ಜಾಮೀನು ಮೇಲೆ ಹೊರಗಡೆ ಇರುವ ನವೀನ್ ಗಮನಕ್ಕೆ ಈ ವಿಚಾರ ಬಂದಿದೆ. ನಕಲಿ ಫೇಸ್ಬುಕ್ ಖಾತೆ ನೋಡಿ ಅಘಾತಗೊಂಡ ನವೀನ್ ಈ ಬಗ್ಗೆ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ.
ಇದೀಗ ನನ್ನ ಹೆಸರಲ್ಲಿ ಯಾವುದೇ ಫೇಸ್ಬುಕ್ ಖಾತೆ ಇಲ್ಲ. ಆದರೆ, ನನ್ನ ಹೆಸರಲ್ಲಿ ನನ್ನ ಫೋಟೋ ಬಳಕೆ ಮಾಡಿ ಪೇಜ್ ಕ್ರಿಯೇಟ್ ಮಾಡಲಾಗಿದೆ. ಹಾಗೆಯೇ ನನ್ನ ಸಂಬಂಧಿಕರಿಗೆ ಮತ್ತು ಸ್ನೇಹಿತರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಲಾಗಿದೆ. ಇದು ನನ್ನ ಫೇಸ್ಬುಕ್ ಖಾತೆ ಅಲ್ಲ. ಹೀಗಾಗಿ ಈ ಬಗ್ಗೆ ಸೈಬರ್ ಠಾಣೆಗೆ ದೂರು ನೀಡಲು ತೆರಳುವುದಾಗಿ ನವೀನ್ ವಿಡಿಯೋವೊಂದರ ಮೂಲಕ ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ ಕಳೆದ ಆಗಸ್ಟ್ 11 ರಂದು ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ 11 ರಂದು ರಾತ್ರಿ ನಡೆದಿತ್ತು. ನವೀನ್ ಅನ್ಯ ಕೋಮಿನ ಗುರುಗಳ ಬಗ್ಗೆ ಪೊಸ್ಟ್ ಮಾಡಿದ್ದ ಕಾರಣ ದೊಡ್ಡ ಗಲಭೆ ಸೃಷ್ಟಿಯಾಗಿತ್ತು. ಘಟನೆಯಲ್ಲಿ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಹಚ್ಚಲಾಗಿತ್ತು. ಪೋಸ್ಟ್ ಸಂಬಂಧ ನವೀನ್ ಜೈಲು ಸೇರಿದ್ದು, ಬೇಲ್ ಮೇಲೆ ಹೊರ ಬಂದಿದ್ದಾರೆ.
ಆಗಸ್ಟ್ 12 ರಿಂದಲೇ ನವೀನ್ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ ಆ್ಯಕ್ಟಿವ್ ಆಗಿದ್ದು, ನಕಲಿ ಫೇಸ್ಬುಕ್ ಆ್ಯಕ್ಟಿವ್ ಇರೋದನ್ನ ತಿಳಿದು ಆಘಾತಕ್ಕೆ ಒಳಗಾಗಿರುವುದಾಗಿ ಅವರು ತಿಳಿಸಿದ್ದಾರೆ.