ETV Bharat / state

ಗಲಭೆ ಪ್ರಕರಣ: ಸಂಪತ್ ರಾಜ್ ಮುಂದಿರುವ ಅವಕಾಶಗಳೇನು? - ತಲೆಮರೆಸಿಕೊಂಡ ಕಾರ್ಪೊರೇಟರ್ ಜಾಕೀರ್ ಹುಸೇನ್

ಸಿಸಿಬಿ ಪೊಲೀಸರು ಈ ಪ್ರಕರಣದ ಬಗ್ಗೆ ಹಲವು ಸಾಕ್ಷಿಗಳನ್ನು ಸಂಗ್ರಹಿಸಿದ್ದು, ಸಂಪತ್​​ ರಾಜ್​​ ಮೇಲೆನ ಆರೋಪ ದೃಢವಾಗುವ ಸಾಧ್ಯತೆ ಇದೆ. ಹೀಗಾಗಿ ಸಂಪತ್ ರಾಜ್ ಸಿಸಿಬಿ ಪೊಲೀಸರ ಎದುರು ಬಂದು ಶರಣಾಗಬೇಕು ಅಥವಾ ನ್ಯಾಯಾಲಯದೆದುರು ಶರಣಾಗಬೇಕು ಅಥವಾ ನಿರೀಕ್ಷಣಾ ಜಾಮೀನು ಪಡೆದು ತನಿಖೆಗೆ ಸಹಕಾರ ನೀಡುವುದು ಅನಿವಾರ್ಯವಾಗಿದೆ ಎನ್ನಲಾಗುತ್ತಿದೆ.

DJ halli and KG halli riot case i
ಸಂಪತ್ ರಾಜ್
author img

By

Published : Oct 16, 2020, 8:59 AM IST

Updated : Oct 16, 2020, 9:10 AM IST

ಬೆಂಗಳೂರು: ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಮೇಯರ್ ಸಂಪತ್ ರಾಜ್​​ ಹಾಗೂ ಕಾರ್ಪೋರೇಟರ್ ಜಾಕೀರ್ ಹುಸೇನ್ ಸಿಸಿಬಿ ಪೊಲೀಸರ‌ ಎದುರು ಶರಣಾಗುವುದು ಅನಿವಾರ್ಯವಾಗಿದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಶರಣಾಗಲು ಇಬ್ಬರು ಆರೋಪಿಗಳಿಗೆ ಮೂರು ಅವಕಾಶಗಳಿವೆ.

ಸಿಸಿಬಿ ಪೊಲೀಸರು ಈ ಪ್ರಕರಣದ ಬಗ್ಗೆ ಹಲವು ಸಾಕ್ಷಿಗಳನ್ನು ಸಂಗ್ರಹಿಸಿದ್ದು, ಸಂಪತ್​​ ರಾಜ್​​ ಮೇಲೆನ ಆರೋಪ ದೃಢವಾಗುವ ಸಾಧ್ಯತೆ ಇದೆ. ಹೀಗಾಗಿ ಸಂಪತ್ ರಾಜ್ ಸಿಸಿಬಿ ಪೊಲೀಸರ ಎದುರು ಬಂದು ಶರಣಾಗಬೇಕು ಅಥವಾ ನ್ಯಾಯಾಲಯದೆದುರು ಶರಣಾಗಬೇಕು ಅಥವಾ ನಿರೀಕ್ಷಣಾ ಜಾಮೀನು ಪಡೆದು ತನಿಖೆಗೆ ಸಹಕಾರ ನೀಡುವುದು ಅನಿವಾರ್ಯವಾಗಿದೆ ಎನ್ನಲಾಗುತ್ತಿದೆ.

ಸದ್ಯ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲಿನ ದಾಳಿ ಪ್ರಕರಣದಲ್ಲಿ ಪಾತ್ರ ಇರುವ ಕಾರಣ ಮೊದಲು ಪ್ರಾಥಮಿಕ ವಿಚಾರಣೆ ನಡೆಸಲಾಯ್ತು. ನಂತರ ಎರಡನೇ ಬಾರಿ ವಿಚಾರಣೆಗೆ ಕರೆದಾಗ ತಾನು ಬಂಧನವಾಗುವ ಭಯದಲ್ಲಿ ಕೊರೊನಾ ಇದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದರು.

ಸಿಸಿಬಿ ಪೊಲೀಸರು ಸಂಪತ್ ರಾಜ್​ನನ್ನು ಬಂಧನ ಮಾಡಲು ಎಲ್ಲಾ ತಯಾರಿ ನಡೆಸಿದ್ದರು. ಆದರೆ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಇದೆಯೆಂದು ವೈದ್ಯರು ತಿಳಿಸಿರುವ ಕಾರಣ ಏಕಾಏಕಿ ಬಂಧಿಸಲು ಸಾಧ್ಯವಿಲ್ಲ ಎಂದು ಸಿಸಿಬಿ ತಿಳಿಸಿದೆ. ಆದರೆ ಜಾಕೀರ್ ತಲೆಮರೆಸಿಕೊಂಡಿದ್ದಾನೆ ಎಂದು ಸಿಸಿಬಿ ಮೂಲಗಳಿಂದ ತಿಳಿದು ಬಂದಿದೆ.

Last Updated : Oct 16, 2020, 9:10 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.