ಬೆಂಗಳೂರು: ವೈವಾಹಿಕ ಜೀವನಕ್ಕೆ ಇತಿಶ್ರೀ ಹಾಡುವ ವಿಚ್ಛೇದನ ಪ್ರಕರಣಗಳು ದಿನೇ-ದಿನೆ ಏರಿಕೆಯಾಗುತ್ತಿವೆ. ಆದರೂ ಅತಿ ಕಡಿಮೆ ವಿಚ್ಛೇದನ ಪ್ರಮಾಣವನ್ನು ಉಳಿಸಿಕೊಂಡಿರುವ ದೇಶ ನಮ್ಮದಾಗಿದೆ.
ವಿಚ್ಛೇದನ ಪ್ರಕರಣಗಳ ಪ್ರಮಾಣ 1988ಕ್ಕೆ ಹೋಲಿಸಿದರೆ 1,000 ವಿವಾಹಗಳಿಗೆ 0.50 ರಷ್ಟಿದ್ದು 2019ರಲ್ಲಿ 1,000ಕ್ಕೆ 13ರಷ್ಟಾಗಿದೆ. ಶ್ರೀಮಂತರು ಮತ್ತು ವಿದ್ಯಾವಂತರಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಅವಿದ್ಯಾವಂತರು, ಕಡಿಮೆ ಓದಿದವರಲ್ಲಿ ಆಯ್ಕೆಯ ಕೊರತೆಯು ಅವರನ್ನು ದಾಂಪತ್ಯದಲ್ಲಿ ಮುಂದುವರೆಯುವಂತೆ ಮಾಡುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ವಿಶ್ವದಲ್ಲೇ ಅತಿ ಕಡಿಮೆ ವಿಚ್ಛೇದನ ಪ್ರಮಾಣವನ್ನು ದೇಶ ಇನ್ನೂ ಉಳಿಸಿಕೊಂಡಿದೆ. ಅರ್ಥಶಾಸ್ತ್ರಜ್ಞ ಸೂರಜ್ ಜಾಕೋಬ್ ಮತ್ತು ಮಾನವಶಾಸ್ತ್ರಜ್ಞ ಶ್ರೀಪರ್ಣ ಚಟ್ಟೋಪಾಧ್ಯಾಯರು ನಡೆಸಿದ ಅಧ್ಯಯನವು, ಒಟ್ಟು ಜನಸಂಖ್ಯೆಯ ಶೇಕಡ 0.11 ರಷ್ಟು ವಿಚ್ಛೇದನ ಪಡೆದರೆ, ಬೇರ್ಪಟ್ಟ ಜನರ ಸಂಖ್ಯೆ ಶೇಕಡ 0.29 ರಷ್ಟಿದೆ.
ದುರುದ್ದೇಶಪೂರಿತ ವಿವಾಹಗಳಲ್ಲಿ, 15 ರಿಂದ 24 ವರ್ಷದೊಳಗಿನ ಪರಿಶಿಷ್ಟ ಜಾತಿಗಳಿಗೆ ಸೇರಿದ ಮಹಿಳೆಯರು ಶಾಲಾ ಶಿಕ್ಷಣವನ್ನು ಹೊಂದಿರದ ಕುಟುಂಬಗಳಲ್ಲಿ ವಾಸಿಸುವ ಪುರುಷರನ್ನು ಮದುವೆಯಾಗುತ್ತಾರೆ ಎಂದು ಇತ್ತೀಚಿನ ರಾಷ್ಟ್ರೀಯ ಅಪರಾಧ ಬ್ಯೂರೋ ಮಾಹಿತಿ ತೋರಿಸುತ್ತದೆ.
ಖ್ಯಾತ ವಕೀಲ ಶ್ಯಾಮ್ ಸುಂದರ್ ಅವರು ಈ ಕುರಿತು 'ಈಟಿವಿ ಭಾರತ'ದ ಜೊತೆ ಮಾತನಾಡಿದ್ದು, 30 ವರ್ಷಗಳ ಹಿಂದೆ ನಗರದಲ್ಲಿ ನಾವು ಕುಟುಂಬ ವಿವಾದ ಪ್ರಕರಣಗಳಿಗೆ ಒಂದೇ ಸಭಾಂಗಣವನ್ನು ಹೊಂದಿದ್ದೆವು. ಆದರೆ ಈಗ ಕುಟುಂಬ ವಿವಾದ ನ್ಯಾಯಾಲಯದಲ್ಲಿ ಒಂದು ದೊಡ್ಡ ಸಂಕೀರ್ಣವಿದೆ ಎಂದು ಹೇಳಿದರು.
ಓದಿ: ದಾಂಪತ್ಯ ಜೀವನಕ್ಕೂ ಮಾರಕ ಆಧುನಿಕತೆ: ಪತಿ-ಪತ್ನಿಯರ ವಿಚ್ಛೇದನ ಪ್ರಕರಣಗಳೂ ಏರಿಕೆ
ಗ್ರಾಮೀಣ ಪ್ರದೇಶಗಳಲ್ಲಿ ಕೂಡು ಕುಟುಂಬಗಳು ವಿಚ್ಛೇದನ ಪಡೆಯುವುದನ್ನು ತಡೆಯುತ್ತಿವೆ. ವಕೀಲನಾಗಿ ನಾನು ಗ್ರಾಮೀಣ ಪ್ರದೇಶಗಳಲ್ಲಿರುವ ಅನೇಕ ಕುಟುಂಬ ವಿವಾದಗಳಿಗೆ ಸಾಕ್ಷಿಯಾಗಿದ್ದೇನೆ. ಹಳ್ಳಿಗಳಲ್ಲಿನ ಮಹಿಳೆಯರು ಕೌಟುಂಬಿಕ ಹಿಂಸಾಚಾರದ ವಿರುದ್ಧ ಮೌನವಾಗಿರುವಂತೆ, ಅಲ್ಲಿನ ವಾತಾವರಣ ಮಾಡುತ್ತವೆ ಎಂದು ಅಭಿಪ್ರಾಯಪಟ್ಟರು.
ಭಾರತದಲ್ಲಿ ಸಮಾಜ ವ್ಯವಸ್ಥೆಯು ಸಂಬಂಧವನ್ನು ಸಮನ್ವಯಗೊಳಿಸಲು ಪ್ರಯತ್ನಿಸುತ್ತದೆ. ಕಾನೂನಿನಲ್ಲಿಯೂ ಸಹ ಮದುವೆಯನ್ನು ಉಳಿಸುವ ಪ್ರಯತ್ನ ಇದೆ. ಸಲಹೆಗಾರರು ಗಂಡ-ಹೆಂಡತಿಯ ಜೊತೆ ಪುನರಾವರ್ತಿತ ಸಂಭಾಷಣೆ ಮೂಲಕ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಾರೆ. ಪುನಃ ಇಬ್ಬರನ್ನು ಒಂದು ಮಾಡಲು ಪ್ರಯತ್ನಿಸುತ್ತಾರೆ.