ಬೆಂಗಳೂರು: ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಬಿಸಿಲಿನ ತಾಪಮಾನದಿಂದ ನೀರಿಗಾಗಿ ಪ್ರಾಣಿ-ಪಕ್ಷಿಗಳ ಪರದಾಟ ತಪ್ಪಿಸುವ ಸಲುವಾಗಿ ಸ್ವಯಂ ಜಾಗೃತಿ ಎಂಬ ಸ್ವಯಂ ಸೇವಕರ ನೀರಿನ ಪಾಟ್ ವಿತರಿಸಿತು.
ಪ್ರಾಣಿ-ಪಕ್ಷಿಗಳ ನೀರಿನ ದಾಹ ನೀಗಿಸುವ ಉದ್ದೇಶದಿಂದ ಬೆಂಗಳೂರಿನ ನಾಗರಬಾವಿ ಬಳಿಯ ಕಲ್ಯಾಣ್ ನಗರದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ನೀರಿನ ಪಾಟ್ ವಿತರಿಸಲಾಯಿತು. ಪರಿಸರ ಸಂರಕ್ಷಣೆಯಲ್ಲಿ ಸಾರ್ವಜನಿಕರು ಕೈ ಜೋಡಿಸುವಂತೆ ಸ್ವಯಂ ಜಾಗೃತಿ ತಂಡ ಮನವಿ ಮಾಡಿತು.
ಬದಲಾವಣೆಗಾಗಿ, ಬದಲಾವಣೆಗೋಸ್ಕರ ಎಂಬ ಧ್ಯೇಯದೊಂದಿಗೆ ಮಾಡಲಾದ ಈ ಕಾರ್ಯಕ್ರಮದಲ್ಲಿ ಇತಿಹಾಸ ಪರಿಚಾರಕರಾದ ಅರೆನಹಳ್ಳಿ ಧರ್ಮೇಂದ್ರ ಕುಮಾರ್, ಚಂದ್ರ ಲೇಔಟ್ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಹಾಗೂ ಅನ್ನಪೂರ್ಣೇಶ್ವರಿ ನಗರ ಠಾಣೆಯ ಸಬ್ ಇನ್ಸ್ಪೆಕ್ಟರ್ ಶಾಂತಪ್ಪ ಜಡೆಮ್ಮನವರ್ ಭಾಗವಹಿಸಿದ್ದರು. ಸ್ವಯಂ ಜಾಗೃತಿ ತಂಡದ ಅಧ್ಯಕ್ಷರಾದ ಸಿ.ಅಜಯ್ ಕುಮಾರ್ ಹಾಗೂ ತಂಡದವರು ಉಪಸ್ಥಿತರಿದ್ದರು.