ETV Bharat / state

ಸಾರಿಗೆ ಸಿಬ್ಬಂದಿಗೆ ತಪ್ಪದ ಸಂಕಷ್ಟ: ಮೇಲ್ಮನವಿ ಪ್ರಾಧಿಕಾರದ ಮೆಟ್ಟಿಲೇರಿದ ವಜಾಗೊಂಡ ನೌಕರರು - ವಜಾಗೊಂಡ ಸಾರಿಗೆ ನೌಕರರ ಸಂಕಷ್ಟ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೆಎಸ್​ಆರ್​​ಟಿಸಿ, ಬಿಎಂಟಿಸಿ, ಎನ್​​ಡಬ್ಲ್ಯೂಆರ್​​ಟಿಸಿ, ಎನ್ಇಆರ್​​ಟಿಸಿ ನಿಗಮದ ಸಾವಿರಾರು ನೌಕರರು ಮುಷ್ಕರ ನಡೆಸಿದ್ದರು. ಇದರಲ್ಲಿ ಭಾಗಿಯಾಗಿದ್ದ ಸುಮಾರು 1,970 ಮಂದಿ ನೌಕರರನ್ನು ವಜಾ ಮಾಡಲಾಗಿದೆ. ಈ ನೌಕರರು ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಹಾಕಿದ್ದು, ಪ್ರಾಧಿಕಾರ ಅನುಮತಿ ನೀಡಿದರಷ್ಟೇ ಕೆಲಸಕ್ಕೆ ಹಾಜರಾಗಬೇಕಾದ ಸ್ಥಿತಿ ಎದುರಾಗಿದೆ.

Dismissed KSRTC and BMTC transport employees stepped up to appellate authority
ಮೇಲ್ಮನವಿ ಪ್ರಾಧಿಕಾರದ ಮೆಟ್ಟಿಲೇರಿದ ವಜಾಗೊಂಡ ನೌಕರರು
author img

By

Published : Jul 22, 2021, 10:49 PM IST

ಬೆಂಗಳೂರು: ಸಾರಿಗೆ ನೌಕರರಿಗೆ ಒಂದಲ್ಲ ಒಂದು ರೀತಿಯಲ್ಲಿ ಸಂಕಷ್ಟ ತಪ್ಪುತ್ತಿಲ್ಲ. ಮುಷ್ಕರದಲ್ಲಿ ಭಾಗವಹಿಸಿದ್ದ 1,970 ಮಂದಿ ನೌಕರರನ್ನು ವಜಾ ಮಾಡಲಾಗಿದ್ದು, ಅವರು ಅತಂತ್ರ ಸ್ಥಿತಿ ಎದುರಿಸುತ್ತಿದ್ದಾರೆ ಎನ್ನುವ ಮಾಹಿತಿ ಹೊರ ಬಿದ್ದಿದೆ.

ಆರನೇ ವೇತನ ಜಾರಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೆಎಸ್​ಆರ್​​ಟಿಸಿ, ಬಿಎಂಟಿಸಿ, ಎನ್​​ಡಬ್ಲ್ಯೂಆರ್​​ಟಿಸಿ, ಎನ್ಇಆರ್​​ಟಿಸಿ ನಿಗಮದ ಸಾವಿರಾರು ನೌಕರರು ಏ.8 ರಿಂದ ಏ. 20 ರವರೆಗೆ ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರ ನಡೆಸಿದ್ದರು. ಸರ್ಕಾರ ಎಷ್ಟೇ ಮನವೊಲಿಸಿದರೂ ಜಗ್ಗದೆ ಮುಷ್ಕರ ನಡೆಸಿದ್ದರು. ಈ ವೇಳೆ ತರಬೇತಿ ಹಾಗೂ ಕಾಯಂ ನೌಕರರನ್ನು ಅಮಾನತು, ವಜಾ ಮಾಡಲಾಗಿತ್ತು.

ಏಪ್ರಿಲ್ 27 ರಿಂದ ಜನತಾ ಕರ್ಫ್ಯೂ ಜಾರಿಯಾಗಿದ್ದು, ಜೂನ್ ಅಂತ್ಯವರೆಗೂ ಸಂಚಾರ ನಡೆಸಲಿಲ್ಲ. ಅನ್​​ಲಾಕ್ ಬಳಿಕ ಹಂತ ಹಂತವಾಗಿ ಸಂಚಾರ ಆರಂಭವಾಗಿದ್ದು, ವಜಾಗೊಂಡ ನೌಕರರು ಇದೀಗ ಮೇಲ್ಮನವಿ ಪ್ರಾಧಿಕಾರದ ಮೆಟ್ಟಿಲೇರಿದ್ದಾರೆ.

ಮುಷ್ಕರ ಹಿನ್ನೆಲೆಯಲ್ಲಿ 2,941 ನೌಕರರು ಅಮಾನತುಗೊಂಡಿದ್ದು, ಇದರಲ್ಲಿ ಶೇ. 90 ರಷ್ಟು ನೌಕರರಿಗೆ ಕರ್ತವ್ಯಕ್ಕೆ ಹಾಜರಾಗಲು ಅನುಮತಿ ನೀಡಲಾಗಿದೆ. ಆದರೆ ವಜಾಗೊಂಡ ನೌಕರರು ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಹಾಕಿದ್ದಾರೆ. ಪ್ರಾಧಿಕಾರ ಅನುಮತಿ ನೀಡಿದರಷ್ಟೇ ಕೆಲಸಕ್ಕೆ ಹಾಜರಾಗಬೇಕಾದ ಸ್ಥಿತಿ ಎದುರಾಗಿದೆ.

ತರಬೇತಿ ಹಾಗೂ ಪ್ರೊಬೇಷನರಿ ನೌಕರರಿಗೆ ಮತ್ತಷ್ಟು ಸಂಕಷ್ಟ:

ಕಾನೂನು ಹೋರಾಟ ಮಾಡಿದರೆ ಕಾಯಂ ನೌಕರರು ಕರ್ತವ್ಯಕ್ಕೆ ಹಾಜರಾಗುವ ಸಾಧ್ಯತೆ ಇದೆ. ಆದರೆ ತರಬೇತಿ ಹಾಗೂ ಪ್ರೊಬೇಷನರಿ ಅವಧಿಯಲ್ಲಿ ಕೆಲಸ ನಿರ್ವಹಣೆ ಮಾಡುವ ನೌಕರರಿಗೆ ಕಾನೂನು ತೊಡಕುಗಳು ಹೆಚ್ಚಿವೆ. ಕಾನೂ‌ನು ಹೋರಾಟ ನಡೆಸಿದರೂ ಅವರು ಪುನಃ ಕರ್ತವ್ಯ ಕ್ಕೆ ಹಾಜರಾಗುವುದು ಕಷ್ಟವಿದೆ. ಮೇಲ್ಮನವಿ ಪ್ರಾಧಿಕಾರದಲ್ಲಿ ಅರ್ಜಿ ತಿರಸ್ಕೃತ ಗೊಂಡರೂ ಹೈ ಕೋರ್ಟ್​​ಗೆ ಹೋಗಬೇಕಾಗುತ್ತದೆ. ಎಷ್ಟಾದರೂ ಕಾನೂನು ಹೋರಾಟ ಮಾಡಿದರೂ ಅವಕಾಶಗಳು ಕಡಿಮೆ ಇದೆ ಎನ್ನಲಾಗಿದೆ.

ಸಾವಿರ ಕೋಟಿ ರೂ.ಗೂ ಅಧಿಕ ನಷ್ಟ:

ಮುಷ್ಕರದ ವೇಳೆ ಕೆಎಸ್ಆರ್​ಟಿಸಿ, ಬಿಎಂಟಿಸಿ ಸೇರಿ ನಾಲ್ಕೂ ನಿಗಮಗಳಿಗೆ ಪ್ರತಿದಿನ 17 ಕೋಟಿ ರೂ. ಆದಾಯ ನಷ್ಟ ಉಂಟಾಗಿದೆ. ಏ. 8 ರಿಂದ ಜೂನ್ ಅಂತ್ಯದ ವರೆಗೆ ಸಾವಿರಾರು ಕೋಟಿ ರೂ. ನಷ್ಟ ಸಂಭವಿಸಿದೆ.

ಮುಷ್ಕರದ ವೇಳೆ ಶಿಸ್ತು ಉಲ್ಲಂಘಿಸಿದವರನ್ನು ಅಮಾನತು, ವಜಾ:

ಮುಷ್ಕರದ ವೇಳೆ ಶಿಸ್ತು ಉಲ್ಲಂಘಿಸಿದವರನ್ನು ಅಮಾನತು, ವಜಾ ಮಾಡಲಾಗಿತ್ತು. ಅಮಾನತುಗೊಂಡ ಶೇ. 90 ರಷ್ಟು ನೌಕರರಿಗೆ ಕರ್ತವ್ಯಕ್ಕೆ ಹಾಜರಾಗಲು ಅನುಮತಿ ನೀಡಲಾಗಿದೆ. ವಜಾ ಗೊಂಡವರು ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಹಾಕಿದ್ದು, ಎರಡು ತಿಂಗಳಲ್ಲಿ ವಿಲೇ ಮಾಡಲು ಹೈ ಕೋರ್ಟ್​​ ಸೂಚಿಸಿದೆ. ಅದರಂತೆ ಪ್ರಾಧಿಕಾರ ಕ್ರಮ ಕೈಗೊಳ್ಳಲಿದೆ ಎಂದು ಕೆಎಸ್ಆರ್​​ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಮಾಹಿತಿ ನೀಡಿದ್ದಾರೆ.

ನಿಗಮ - ಅಮಾನತು - ವಜಾ

  • ಕೆಎಸ್ಆರ್​​ಟಿಸಿ- 44- 425
  • ಬಿಎಂಟಿಸಿ - 2813 - 1199
  • ಎನ್​ಡಬ್ಲ್ಯೂಆರ್​​ಟಿಸಿ- 41 - 270
  • ಎನ್ಇಆರ್​​ಟಿಸಿ- 43 - 76
  • ಒಟ್ಟು - 2941 - 1970

ETV Bharat Logo

Copyright © 2025 Ushodaya Enterprises Pvt. Ltd., All Rights Reserved.