ETV Bharat / state

ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ನಾನಾ ಇಲಾಖೆ ವೇತನ ಪರಿಷ್ಕರಣೆ ಚರ್ಚೆ - ಪ್ರವಾಸೋದ್ಯಮದ ಬಗ್ಗೆ ಪರಿಷತ್​ನಲ್ಲಿ ಚರ್ಚೆ

ವಿಧಾನ ಪರಿಷತ್ ಕಲಾಪದಲ್ಲಿ ಇಂದು ಹಲವಾರು ವಿಚಾರಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಪ್ರವಾಸೋದ್ಯಮ, ಸಾರಿಗೆ, ನೇಕಾರರ ಸಾಲಮನ್ನಾ ಮುಂತಾದವುಗಳ ಬಗ್ಗೆ ಸಂಬಂಧಪಟ್ಟ ಸಚಿವರು ಸ್ಪಷ್ಟನೆ ನೀಡಿದರು.

legislative council
ವಿಧಾನ ಪರಿಷತ್​
author img

By

Published : Mar 20, 2020, 4:26 PM IST

ಬೆಂಗಳೂರು: ಚಿಕ್ಕಮಗಳೂರು ಪ್ರವಾಸೋದ್ಯಮ ಅಭಿವೃದ್ಧಿಗೆ ಕಳೆದ ವರ್ಷ 19 ಕಾಮಗಾರಿಗೆ 1,468 ಲಕ್ಷ ರೂಪಾಯಿ ಅನುದಾನ ಮೀಸಲಿಡಲಾಗಿತ್ತು ಎಂದು ವಿಧಾನ ಪರಿಷತ್​ನಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಸ್ಪಷ್ಟನೆ ನೀಡಿದರು. ಜೆಡಿಎಸ್​ ಸದಸ್ಯ ಭೋಜೇಗೌಡ ಪ್ರಶ್ನೋತ್ತರ ಅವಧಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು 19 ಕಾಮಗಾರಿಗಳಿಗೆ 901ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ. 28 ಸ್ಥಳಗಳಲ್ಲಿ ಯಾತ್ರಿನಿವಾಸಗಳು ಮಂಜೂರಾಗಿದ್ದು, ಅನುದಾನ ಬಿಡುಗಡೆ ಮಾಡಲಾಗಿದೆ. ಈಗಾಗಲೇ 12 ಯಾತ್ರಿ ನಿವಾಸಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ ಎಂದರು.

ಪ್ರವಾಸೋದ್ಯಮ ಅಭಿವೃದ್ಧಿಗಾಗಿ 500 ಕೋಟಿ ರೂಪಾಯಿಯನ್ನು ಬಜೆಟ್​ನಲ್ಲಿ ಬಿಡುಗಡೆ ಮಾಡಲಾಗಿದೆ. ಚಾಲ್ತಿಯಲ್ಲಿರುವ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಸಿಎಂ ಹೇಳಿದ್ದಾರೆ. ಇನ್ಫೋಸಿಸ್​ ಫೌಂಡೇಷನ್​ನ ಸುಧಾಮೂರ್ತಿ ನೇತೃತ್ವದಲ್ಲಿ ಟಾಸ್ಕ್​ ಫೋರ್ಸ್​ ರಚನೆ ಮಾಡಲಾಗಿದೆ ಎಂದ ಅವರು ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯವನ್ನೂ ಅಭಿವೃದ್ಧಿಪಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಭರವಸೆ ನೀಡಿದರು.

ಗ್ರಂಥಾಲಯ ಸಿಬ್ಬಂದಿಯ ವೇತನ ಪರಿಷ್ಕರಣೆ ಹಾಗೂ ಸೇವಾವಧಿ ಕುರಿತು ಷರಿಷತ್​ ಕಲಾಪದಲ್ಲಿ ಚರ್ಚೆಯಾಯಿತು. ಗ್ರಂಥಾಲಯ ಸಿಬ್ಬಂದಿಯನ್ನು ಆರ್​​ಡಿಪಿಆರ್​​ಗೆ ವರ್ಗಾವಣೆ ಮಾಡಲಾಗಿದೆ. ಆದರೂ ಯಾಕೆ ಕನಿಷ್ಠ ವೇತನ ಕೊಡುತ್ತಿಲ್ಲ? ಎಂಬ ಬಿಜೆಪಿ ಸದಸ್ಯ ಪ್ರಾಣೇಶ್​ ಪ್ರಶ್ನೆಯನ್ನು ಸುಬ್ರಮಣ್ಯ ಪ್ರಸ್ತಾಪಿಸಿದಾಗ ಪಕ್ಷಾತೀತವಾಗಿ ಸದಸ್ಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಗ್ರಂಥಪಾಲಕರ ವೇತನ ಪರಿಷ್ಕರಣೆ ಹಾಗೂ ‌ ಸೇವಾವಧಿ ವಿಸ್ತರಣೆ ಕುರಿತು ಅಗತ್ಯ ಕ್ರಮ ಕೈಗೊಳ್ಳಲು ಸಿಎಂ ಜೊತೆ ಚರ್ಚಿಸೋದಾಗಿ ಭರವಸೆ ನೀಡಿದರು.

ಸಾರಿಗೆ ಇಲಾಖೆಯ ಕೆಲ ಸಮಸ್ಯೆಗಳ ಬಗ್ಗೆ ಪರಿಷತ್​ನಲ್ಲಿ ಬೆಳಕು ಚೆಲ್ಲಲಾಯಿತು. ಬಸ್ ಚಾಲನೆ ವೇಳೆ ಮೊಬೈಲ್​ ಬಳಕೆಗೆ ನಿಷೇಧವಿದ್ದರೂ ಚಾಲಕರು ನಿಯಮ ಉಲ್ಲಂಘಿಸುತ್ತಿದ್ದಾರೆ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಎಚ್ಚರಿಕೆ ನೀಡಿದರು. ಬಸ್ ನಿಲ್ದಾಣಗಳಲ್ಲಿ ಸೋಲಾರ್ ಅಳವಡಿಕೆ ಕುರಿತು ಜೆಡಿಎಸ್​​ನ ಬಿ.ಎಂ.ಫಾರೂಕ್ ಪ್ರಸ್ತಾಪ‌ಕ್ಕೆ ಉತ್ತರಿಸಿದ ಸಾರಿಗೆ ಸಚಿವವರು ಹಣಕಾಸಿನ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಕೈಗೊಳ್ಳಲಾಗುತ್ತದೆ. ರಾಜ್ಯದ ಎಲ್ಲಾ ಬಸ್ ನಿಲ್ದಾಣಗಳಲ್ಲಿ ಸೋಲಾರ್ ಅಳವಡಿಸುವ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದರು.‌

ಖಾಸಗಿ ವಾಹನಗಳ ಮುಂದೆ ಹಲವರು ದೊಡ್ಡ ದೊಡ್ಡ ಬೋರ್ಡ್​ಗಳನ್ನು ಹಾಕಿಕೊಂಡು ಓಡಾಡುತ್ತಿದ್ದಾರೆ‌. ಅಧ್ಯಕ್ಷರು, ಸದಸ್ಯರು ಸೇರಿದಂತೆ ಸಂಘ- ಸಂಸ್ಥೆಗಳ ಹೆಸರಿನಲ್ಲಿ ಬೋರ್ಡ್ ಹಾಕಿಕೊಂಡು ಓಡಾಡುತ್ತಿದ್ದು, ಇದರಿಂದ ಶಾಸಕರ ಘನತೆ, ಗೌರವ ಕಡಿಮೆಯಾಗ್ತಿದೆ. ನಿಜವಾದ ಜನಪ್ರತಿನಿಧಿಗಳನ್ನೂ ಜನ ಅನುಮಾನದಿಂದ ನೋಡುವ ಸ್ಥಿತಿ ನಿರ್ಮಾಣ ಆಗಿದೆ ಎಂದು ಪರಿಷತ್​​​ನಲ್ಲಿ ಬಸವರಾಜ ಹೊರಟ್ಟಿ ಮತ್ತು ಟಿ.ಎ.ಶರವಣ ಪ್ರಸ್ತಾಪಿಸಿದರು. ಇದಕ್ಕೆ ಉತ್ತರ ನೀಡಿದ ಸಾರಿಗೆ ಸಚಿವರು ಈ ಬೋರ್ಡ್​​ಗಳ ನಿಯಂತ್ರಣಕ್ಕೆ ಈಗಾಗಲೇ ಕ್ರಮ ಕೈಗೊಳ್ಳುತ್ತಿದ್ದೇವೆ. ಮುಂದಿನ ದಿನಗಳನ್ನು ಇಂತಹ ಬೋರ್ಡ್​ಗಳನ್ನು ಸಂಪೂರ್ಣವಾಗಿ ನಿಷೇಧ ಮಾಡುತ್ತೇವೆ ಎಂದು ಭರವಸೆ ನೀಡಿದರು.

ನೇಕಾರರ ಸಮಸ್ಯೆ ಕುರಿತು ಕಾಂಗ್ರೆಸ್​​ನ ಹೆಚ್.ಎಂ.ರೇವಣ್ಣ ಪ್ರಶ್ನೆಗೆ ಉತ್ತರಿಸಿದ ಸಚಿವ ಶ್ರೀಮಂತ ಪಾಟೀಲ್, ನೇಕಾರರ ಸುಮಾರು 100 ಕೋಟಿ‌ ಸಾಲಮನ್ನಾ ಮಾಡಲಾಗಿದೆ. ಸಿಎಂ ಜೊತೆ ಚರ್ಚೆ ಮಾಡಿ ಸಿಸಿ ಸಾಲಮನ್ನಾಗೂ ಕ್ರಮ ತೆಗೆದುಕೊಳ್ಳುತ್ತೇವೆ. ರಾಜ್ಯದಲ್ಲಿ ನೂತನ ಜವಳಿ ನೀತಿ ಜಾರಿಗೆ ತಂದಿದ್ದೇವೆ. ಇದರ ಅಡಿಯಲ್ಲಿ ಟೆಕ್ಸ್ಟ್ ಟೈಲ್ ಪಾರ್ಕ್ ನಿರ್ಮಾಣ, ಕೈಗಾರಿಕೆಗಳನ್ನು ಆರಂಭಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ಆಂಧ್ರ, ತಮಿಳುನಾಡು, ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಬಗ್ಗೆ ಅಧ್ಯಯನ ಮಾಡಲಾಗುತ್ತದೆ ಎಂದು ಸ್ಪಷ್ಟನೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.