ETV Bharat / state

ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ವೈದ್ಯರ ಹಿಂದೇಟು: ವಿಧಾನಸಭೆಯಲ್ಲಿ ನಡೆಯಿತು ಬಿಸಿ ಬಿಸಿ ಚರ್ಚೆ - ಸೂಕ್ತ ಕ್ರಮಕ್ಕೆ ಸಭಾಧ್ಯಕ್ಷರ ಸೂಚನೆ

ವೈದ್ಯರಲ್ಲಿ ಸೇವಾ ಮನೋಭಾವದ ಕೊರತೆ - ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಲು ವೈದ್ಯರ ಹಿಂದೇಟು - 100 ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಅನುಮೋದನೆ.. ಸಚಿವ ಡಾ.ಕೆ. ಸುಧಾಕರ್

discussion-on-doctors-are-reluctant-to-serve-in-rural-areas
ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ವೈದ್ಯರು ಹಿಂದೇಟು : ವಿಧಾನಸಭೆಯಲ್ಲಿ ಬಿಸಿ ಬಿಸಿ ಚರ್ಚೆ
author img

By

Published : Feb 23, 2023, 5:17 PM IST

Updated : Feb 23, 2023, 6:57 PM IST

ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ವೈದ್ಯರ ಹಿಂದೇಟು: ವಿಧಾನಸಭೆಯಲ್ಲಿ ನಡೆಯಿತು ಬಿಸಿ ಬಿಸಿ ಚರ್ಚೆ

ಬೆಂಗಳೂರು : ಗ್ರಾಮೀಣ ಭಾಗಗಳಲ್ಲಿ ವೈದ್ಯರು ಕರ್ತವ್ಯ ನಿರ್ವಹಿಸದೇ ನಗರ ಪ್ರದೇಶಗಳಿಗೆ ಹೆಚ್ಚು ಒಲವು ತೋರುತ್ತಿದ್ದಾರೆ ಎಂದು ವಿಧಾನಸಭೆಯಲ್ಲಿ ಪಕ್ಷ ಭೇದ ಮರೆತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಸದಸ್ಯ ಯಶವಂತರಾಯಗೌಡ ವಿಠ್ಠಲಗೌಡ ಪಾಟೀಲ್ ಪರವಾಗಿ ಸದಸ್ಯ ಡಾ. ಅಜಯ್ ಧರ್ಮಸಿಂಗ್ ಅವರು ಪ್ರಶ್ನೆ ಕೇಳಿದರು.

ಆಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ. ಸುಧಾಕರ್ ಪ್ರತಿಕ್ರಿಯಿಸಿ, ವಿಜಯಪುರ ಜಿಲ್ಲೆ ಇಂಡಿ ಪಟ್ಟಣದಲ್ಲಿ ತೆಗೆದುಕೊಂಡಿರುವ ಕ್ರಮಗಳ ಕುರಿತು ವಿವರಣೆ ನೀಡುತ್ತಿದ್ದರು. ಈ ವೇಳೆ, ಮಧ್ಯೆ ಪ್ರವೇಶ ಮಾಡಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ವೈದ್ಯರಲ್ಲಿ ಸೇವಾ ಮನೋಭಾವದ ಕೊರತೆಯಿಂದಾಗಿ ಗ್ರಾಮೀಣ ಭಾಗಕ್ಕೆ ಹೋಗಲು ಆಸಕ್ತಿ ತೋರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸೂಕ್ತ ಕ್ರಮಕ್ಕೆ ಸಭಾಧ್ಯಕ್ಷರ ಸೂಚನೆ: ವೈದ್ಯಕೀಯ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿ ಗ್ರಾಮೀಣ ಸೇವೆಗೆ ಹೋಗುವ ಭೂಮಿಕೆಯನ್ನು ಆಯಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ತಿಳಿ ಹೇಳಬೇಕು. ಆಗ ಮಾತ್ರ ಗ್ರಾಮೀಣ ಜನರಿಗೆ ಉತ್ತಮ ವೈದ್ಯರ ಸೇವೆ ದೊರೆಯುತ್ತದೆ ಹೊರತು ಕೇವಲ ಗ್ರಾಮೀಣ ಸೇವೆ ಮಾಡಲು ಆದೇಶ ಹೊರಡಿಸಿದರೆ ಪ್ರಯೋಜನವಾಗಲ್ಲ ಎಂದರು. ಕೇವಲ ನಗರ ಪ್ರದೇಶಗಳಲ್ಲೇ ವಾಸ್ತವ್ಯ ಹೂಡಲು ಬಯಸುತ್ತಾರೆ. ನೀವು ಕಾನೂನುಗಳನ್ನು ಜಾರಿ ಮಾಡಿರಬಹುದು. ಆದರೆ, ವೈದ್ಯರು ನಗರ ಬಿಟ್ಟು ಹೋಗುವುದಿಲ್ಲ ಎಂಬ ಮನಸ್ಥಿತಿಗೆ ಬಂದಿದ್ದಾರೆ. ಹೀಗಾದರೆ, ಆಸ್ಪತ್ರೆಗಳ ಸ್ಥಿತಿ ಏನಾಗಬೇಕು? ಮೊದಲು ಇದಕ್ಕೆ ಸೂಕ್ತವಾದ ಕ್ರಮವನ್ನು ತೆಗೆದುಕೊಳ್ಳಲೇಬೇಕು ಎಂದು ಸೂಚಿಸಿದರು.

ಇದಕ್ಕೆ ದನಿಗೂಡಿಸಿದ ಖರ್ಗೆ, ಅನ್ನದಾನಿ: ಶಾಸಕರಾದ ಅನ್ನದಾನಿ, ಪ್ರಿಯಾಂಕ ಖರ್ಗೆ ದನಿಗೂಡಿಸಿ ಗ್ರಾಮೀಣ ಭಾಗಗಳಿಗೆ ಹೋಗದ ವೈದ್ಯರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಮಳವಳ್ಳಿಯಲ್ಲಿ ಆಸ್ಪತ್ರೆ ಇದ್ದರೆ, ಬೆಂಗಳೂರು, ಇಲ್ಲವೇ ಮೈಸೂರಿನಿಂದ ಬಂದು ಕಾರ್ಯನಿವರ್ಹಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆಗ ಸಚಿವ ಸುಧಾಕರ್ ಅವರು, ವೈದ್ಯರು ಹಳ್ಳಿಗಳಿಗೆ ಹೋಗಿ ಕೆಲಸ ಮಾಡುವ ಮನಸ್ಥಿತಿ ಬೆಳಸಿಕೊಳ್ಳಬೇಕು.

ಇದೊಂದು ಗೌರವಯುತವಾದ ವೃತ್ತಿ. ಈ ಕಾರಣಕ್ಕಾಗಿ ಸರ್ಕಾರ ಕಠಿಣವಾದ ಕೌನ್ಸೆಲಿಂಗ್​ ವ್ಯವಸ್ಥೆ ಮಾಡಿದ್ದು, ಕಟ್ಟುನಿಟ್ಟಾಗಿ ಜಾರಿ ಮಾಡಲು ಹೋದಾಗ ಅನೇಕ ಟೀಕೆ, ಟಿಪ್ಪಣಿಗಳನ್ನು ಎದುರಿಸಬೇಕಾಯಿತು. ಆದರೂ ಕೌನ್ಸೆಲಿಂಗ್​​ ಮೂಲಕ ವೈದ್ಯರನ್ನು ನಿಯೋಜಿಸಲಾಯಿತು. ರಾಜಕೀಯ ವ್ಯವಸ್ಥೆ ಕಾರಣಕ್ಕೆ ಈ ರೀತಿ ನಡೆಯುತ್ತದೆ ಎಂದು ಪರೋಕ್ಷವಾಗಿ ವರ್ಗಾವಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಪಟ್ಟಣದಲ್ಲೇ ಕೆಲಸ ಮಾಡಬೇಕು ಎಂದರೆ ಹೇಗೆ? ಹೇಳಿ, ಇದೊಂದು ಗಂಭೀರ ವಿಚಾರ ವೈದ್ಯರ ಕಥೆಯೇ ಬೇರೆ ಇದೆ. ಯಾರೋ ಒಬ್ಬ ವೈದ್ಯರು ಬಂದರೆ ಸಾಕು ಎಂಬ ನಮ್ಮ ಪರಿಸ್ಥಿತಿ ನಮ್ಮದಾಗಿದೆ. ವೈದ್ಯರಿಗೆ ಸಮಾಜದಲ್ಲಿ ವಿಶೇಷ ಸ್ಥಾನಮಾನ ಇದೆ ಎಂದರು.

ಪ್ರತಿ ವರ್ಷ 10 ಸಾವಿರ ವೈದ್ಯರು ಬರ್ತಿದ್ದಾರೆ- ಸುಧಾಕರ್​: ಈ ವಿಚಾರವಾಗಿ ಮಾತನಾಡಿದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ವೈದ್ಯರಿಗೆ ಸಮಾಜದಲ್ಲಿ ವಿಶೇಷ ಸ್ಥಾನಮಾನ ಇದೆ. ವೈದ್ಯರನ್ನು ವೈದ್ಯೋ ನಾರಾಯಣ ಹರಿ ಎಂದು ಕರೆಯುತ್ತಾರೆ. ಇದೊಂದು ನೊಬಲ್ ಮತ್ತು ಮೌಲ್ಯಾಧಾರಿತ ವೃತ್ತಿ. ಅಂತಃಕರಣದಿಂದ ವೈದ್ಯರು ಕೆಲಸ ಮಾಡಬೇಕಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ 1 ಸಾವಿರ ಜನಸಂಖ್ಯೆಗೆ ಒಬ್ಬ ವೈದ್ಯರು ಇರಬೇಕು ಎಂಬುದಿದೆ. ಈಗ 10 ಸಾವಿರ ವೈದ್ಯರು ಪ್ರತಿ ವರ್ಷ ಬರುತ್ತಿದ್ದಾರೆ. ವೈದ್ಯಕೀಯ ಕಾಲೇಜುಗಳು ಹೆಚ್ಚಾಗಿವೆ. ಸ್ನಾತಕೋತ್ತರ ಕೇಂದ್ರಗಳು ಹೆಚ್ಚಾಗಿವೆ, ರಾಜ್ಯದ ಶೇ. 95 ರಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ನೇಮಕಾತಿ ಮಾಡಿದ್ದೇವೆ. 1480 ವೈದ್ಯರನ್ನು ನೇಮಕ ಮಾಡಿಕೊಂಡಿದ್ದೇವೆ. ಉಳಿದ ಶೇ. 5 ರಷ್ಟು ಕಡೆ ಆಯುಷ್ ವೈದ್ಯರನ್ನು ನೇಮಕ ಮಾಡಿದ್ದೇವೆ ಎಂದು ಹೇಳಿದರು.

ಈ ಹಿಂದೆ ಕೌನ್ಸೆಲಿಂಗ್​​​​ ವ್ಯವಸ್ಥೆಯ ಮೂಲಕ ವೈದ್ಯರ ವರ್ಗಾವಣೆ ಸಂದರ್ಭದಲ್ಲಿ ಗ್ರಾಮೀಣ ವೈದ್ಯರ ಕೊರತೆ ಇರಲಿಲ್ಲ. ಆದರೆ ನಾವೆಲ್ಲಾ ರಾಜಕೀಯ ವ್ಯವಸ್ಥೆಯಲ್ಲಿದ್ದೇವೆ ಏನು ಮಾಡುವುದು. ವೈದ್ಯರ ವರ್ಗಾವಣೆ ವಿಚಾರದಲ್ಲಿ ನಾವೆಲ್ಲ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು. ಆರೋಗ್ಯ ಸಚಿವನಾದ ಆರಂಭದಲ್ಲಿ ವರ್ಗಾವಣೆ ವಿಚಾರದಲ್ಲಿ ಬಿಗಿಯಾಗಿದ್ದೆ. ಆದರೆ, ಈ ರಾಜಕೀಯ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿಗಳ ಸಲಹೆ ಮೇರೆಗೆ ಕೆಲವರನ್ನು ವರ್ಗಾವಣೆ ಮಾಡಬೇಕಾಗಿ ಬಂತು. ಕೌನ್ಸೆಲಿಂಗ್​​​ ವ್ಯವಸ್ಥೆಯನ್ನು ಸಮರ್ಪಕವಾಗಿ ಪಾಲನೆ ಮಾಡಲು ಕಷ್ಟವಾಯಿತು. ಶಿಕ್ಷಣ ಇಲಾಖೆಯ ಮಾದರಿಯಲ್ಲೇ ಆರೋಗ್ಯ ಇಲಾಖೆಯಲ್ಲೂ ವರ್ಗಾವಣೆ ಕೌನ್ಸೆಲಿಂಗ್​​​ ಮಾಡುವ ಅಗತ್ಯವಿದೆ ಎಂದು ಈ ಕುರಿತ ಚರ್ಚೆಗೆ ತೆರೆ ಎಳೆದರು.

ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೆ: ರಾಜ್ಯದಲ್ಲಿ ನೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು, ಬಿಜೆಪಿ ಶಾಸಕ ಐಹೊಳೆ ಡಿ.ಮಹಾಲಿಂಗಪ್ಪ ಅವರ ಪ್ರಶ್ನೆಗೆ ಉತ್ತರಿಸಿದರು. ಜನತೆಯ ಬೇಡಿಕೆಯಂತೆ ನೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಿದ್ದು, ಈಗಾಗಲೇ 43 ಕೇಂದ್ರಗಳಿಗೆ ಅನುಮೋದನೆ ನೀಡಲಾಗಿದೆ. ಉಳಿದ 57 ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವುದು ಬಾಕಿ ಇದೆ ಎಂದರು. ಬೆಳಗಾವಿ ಜಿಲ್ಲೆ ಚಿಕ್ಕೋಡಿ ಹಾಗೂ ರಾಯಭಾಗ ತಾಲೂಕಿನಲ್ಲಿ ಎರಡು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ತಿಳಿಸಿದರು.

ಇದನ್ನೂ ಓದಿ : ಜಿಎಸ್​ಟಿ ಸಂಗ್ರಹದಲ್ಲಿ ರಾಜ್ಯಕ್ಕೆ 2ನೇ ಸ್ಥಾನ: ಮುಖ್ಯಮಂತ್ರಿ ಬೊಮ್ಮಾಯಿ

Last Updated : Feb 23, 2023, 6:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.