ಬೆಂಗಳೂರು : ಹಲೋ ಕಂದಾಯ ಸಚಿವರೆ ಎಂದು ಸಹಾಯವಾಣಿಗೆ ಕರೆ ಮಾಡಿದ 72 ಗಂಟೆಯಲ್ಲಿ ಪಿಂಚಣಿದಾರರಿಗೆ ಮನೆ ಬಾಗಿಲಿಗೆ ಮಂಜೂರಾತಿ ಪತ್ರ ತಲುಪಿಸಬೇಕು ಎಂಬ ವಿನೂತನ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಎಂದು ಕಂದಾಯ ಸಚಿವ ಆರ್.ಅಶೋಕ್ ಘೋಷಿಸಿದ್ದಾರೆ.
ವಿಧಾನ ಪರಿಷತ್ನಲ್ಲಿ ಬಿಜೆಪಿ ಸದಸ್ಯ ತುಳಸಿ ಮುನಿರಾಜು ಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿ, ರಾಜ್ಯದಲ್ಲಿ ವೃದ್ಧಾಪ್ಯ ವೇತನ, ವಿಧವಾ ವೇತನ, ವಿಕಲಚೇತನರಿಗೆ ನೀಡುವ ನೆರವು ಸೇರಿದಂತೆ ಮಾಸಾಶನ ಯೋಜನೆಗಳು ತಲುಪಿಲ್ಲ ಎಂಬ ದೂರು ಸಾಮಾನ್ಯವಾಗಿವೆ. ರಾಜ್ಯದಲ್ಲಿ ಆರಂಭಿಸಲಾದ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆತಿದೆ.
ಅಲ್ಲಿ ದೊರೆತ ಅನುಭವದಿಂದ ಮನೆ ಬಾಗಿಲಿಗೆ ದಾಖಲೆಗಳನ್ನು ತಲುಪಿಸುವ ಯೋಜನೆ ರೂಪಿಸಲಾಗಿತ್ತು. ಮನೆ ಬಾಗಿಲಿಗೆ ಪಿಂಚಣಿ ಸೌಲಭ್ಯವನ್ನು ಮನೆ ಬಾಗಿಲಿಗೆ ತಲುಪಿಸಲು ಕ್ರಮಕೈಗೊಳ್ಳಲಾಗಿದೆ. ಇದಕ್ಕಾಗಿ ಹೊಸ ತಂತ್ರಾಂಶ ರೂಪಿಸಲಾಗುವುದು ಎಂದರು.
ಇದನ್ನೂ ಓದಿ: ದುಷ್ಕರ್ಮಿಯಿಂದ ಶಾಸಕ ರೇಣುಕಾಚಾರ್ಯಗೆ ಕೊಲೆ ಬೆದರಿಕೆ..!
ಕಂದಾಯ ಇಲಾಖೆಯಲ್ಲಿ ಅರ್ಹ ಫಲಾನುಭವಿಗಳ ವಯೋಮಿತಿ ದಾಖಲೆ, ಆದಾಯ ಮಾಹಿತಿ ಸೇರಿ ಎಲ್ಲವೂ ಲಭ್ಯ ಇವೆ. ಆಧಾರ ಸಂಖ್ಯೆ ಬಳಕೆ ಮಾಡಿಕೊಂಡು ಫಲಾನುಭವಿಯ ಮಾಹಿತಿಯನ್ನು ನಾವೇ ಧಕ್ಕಿಸಿಕೊಳ್ಳಬಹುದು. ಯೋಜನೆ ಲಾಭ ಪಡೆಯದಿದ್ದರೆ ಹೊಸದಾಗಿ ಸ್ಥಾಪಿತ ಸಹಾಯವಾಣಿಗೆ ಕರೆ ಮಾಡಿದರೆ ಸಾಕು 72 ಗಂಟೆಯಲ್ಲಿ ಮಾಶಾಸನ ಮಂಜೂರಾದ ಆದೇಶ ಪ್ರತಿಯನ್ನು ಮನೆಯ ಬಾಗಿಲಿಗೆ ತಲುಪಿಸಲಾಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ 60 ಲಕ್ಷ ರೈತರಿಗೆ ಮನೆ ಬಾಗಿಲಿಗೆ ಜಾತಿ, ಆದಾಯ, ಪಹಣಿ ಮತ್ತು ಅಟ್ಲಾಸ್ ದಾಖಲೆಗಲನ್ನು ಉಚಿತವಾಗಿ ತಲುಪಿಸಲಾಗಿದೆ. ನಾವು ನೀಡುವ ದಾಖಲೆಗಳ ವಾಯಿದೆ ಒಂದು ವರ್ಷದವರೆಗೂ ಇರಲಿದೆ. ಮುಂದಿನ ವರ್ಷ ಮತ್ತೆ ದಾಖಲೆಗಳನ್ನು ನೀಡುವ ಚಿಂತನೆ ಇದೆ. ಈ ವರ್ಷಕ್ಕೆ ಈ ವರ್ಷ ಹೆಚ್ಚು ಖರ್ಚಾಗಿಲ್ಲ. ಬಹುತೇಕ 15 ಕೋಟಿ ಖರ್ಚಾಗಿದೆ. ಮನೆ ಬಾಗಿಲಿಗೆ ದಾಖಲೆ ನೀಡುವುದರಿಂದ ಆಸ್ತಿ ಯಾರ ಹೆಸರಿನಲ್ಲಿದೆ ಎಂಬ ಬಗ್ಗೆ ತಳ ಸಮುದಾಯಗಳಲ್ಲಿ ಅರಿವು ಮೂಡಲಿದೆ ಎಂದು ವಿವರಿಸಿದರು.
ಸಿ ಎಂ ಇಬ್ರಾಹಿಂ ಮದ್ಯ ಪ್ರವೇಶಿಸಿ, ಜಾತಿ ಪ್ರಮಾಣ ಪತ್ರ ಒಮ್ಮೆ ನೀಡಿದರೆ ಮುಂದಿನ ವರ್ಷಕ್ಕೆ ಬೇರೆ ಪ್ರಮಾಣ ಪತ್ರ ಪಡೆಯಬೇಕು ಎಂಬುದು ಸರಿಯಲ್ಲ. ಜಾತಿ ಬದಲಾಗುತ್ತದೆಯೇ ಎಂದಾಗ, ಒಂದು ವರ್ಷದ ವಾಯಿದೆ ಪಹಣಿಗೆ ಮಾತ್ರ ಅನ್ವಯವಾಗಲಿದೆ, ಜಾತಿ ಪ್ರಮಾಣದ ವಾಯಿದೆ ಶಾಶ್ವತವಾಗಿರುತ್ತದೆ. ಒಂದು ವೇಳೆ ಧರ್ಮ ಬದಲಾದಾಗ ಮಾತ್ರ ಮರು ಪರಿಶೀಲನೆ ನಡೆಸಬೇಕಾಗುತ್ತದೆ ಎಂದರು.