ETV Bharat / state

ಏಳೇ ದಿನಕ್ಕೆ ಕೋವಿಡ್ ಸೋಂಕಿತರ ಡಿಸ್ಚಾರ್ಜ್: ಸಭೆ ಕರೆಯುತ್ತೇನೆ ಎಂದ ಡಾ. ಸುಧಾಕರ್​ - ಆತಂಕಕ್ಕೆ ಕಾರಣವಾದ ಸೋಂಕಿತರ ಡಿಸ್ಚಾರ್ಜ್​

ಕೊರೊನಾ ಸೋಂಕಿತರ ಡಿಸ್ಚಾರ್ಜ್ ವಿಷಯದಲ್ಲಿ ಉಂಟಾಗಿರುವ ಗೊಂದಲಕ್ಕೆ ಸಂಬಂಧಪಟ್ಟಂತೆ ಟ್ವೀಟ್​ ಮಾಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್​, ಅಧಿಕಾರಿಗಳ ಸಭೆ ಕರೆದು ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ.

Discharge of Covid patients in Seven Days
ಕೋವಿಡ್ ಸೋಂಕಿತರನ್ನ ಏಳೇ ದಿನಕ್ಕೆ ಡಿಸ್ಚಾರ್ಜ್
author img

By

Published : Jul 29, 2020, 11:18 AM IST

ಬೆಂಗಳೂರು : ದಿನೇ ದಿನೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಮಧ್ಯೆ, ಸೋಂಕಿತರನ್ನು ಏಳೇ ದಿನಕ್ಕೆ ಡಿಸ್ಚಾರ್ಜ್​ ಮಾಡುತ್ತಿರುವುದು ಇದೀಗ ಮತ್ತೊಂದು ಆತಂಕಕ್ಕೆ ಕಾರಣವಾಗಿದೆ.

ಮಾರ್ಗಸೂಚಿ ಪ್ರಕಾರ ಕೊರೊನಾ ಸೋಂಕಿತರಿಗೆ 10 ದಿನಗಳ ಕಾಲ ಚಿಕಿತ್ಸೆ ನೀಡಿ, ನೆಗೆಟಿವ್ ಬಂದರೆ ಡಿಸ್ಚಾರ್ಜ್ ಮಾಡಬಹುದು. ಆದರೆ, ನಗರದ ಕೆಲ ಆಸ್ಪತ್ರೆಗಳಲ್ಲಿ ಏಳೇ ದಿನಕ್ಕೆ ಡಿಸ್ಚಾರ್ಜ್​ ಮಾಡಲಾಗುತ್ತಿದೆ. ಈ ಕುರಿತು ಟ್ವೀಟ್​ ಮಾಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್​, "ಕೋವಿಡ್‌ ಸೋಂಕಿತರನ್ನು 7 ದಿನಕ್ಕೆ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಗುತ್ತಿದೆ ಎನ್ನುವ ಸುದ್ದಿ ನನ್ನ ಗಮನಕ್ಕೆ ಬಂದಿದೆ. ಇಂದು ಅಧಿಕಾರಿಗಳ ಸಭೆ ಕರೆದು ಚರ್ಚೆ ಮಾಡುತ್ತೇನೆ" ಎಂದು ತಿಳಿಸಿದ್ದಾರೆ.

ಇನ್ನೊಂದು ಟ್ವೀಟ್​ ಮಾಡಿರುವ ಅವರು, "ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗೋ ವೇಳೆ ಕೈಗೆ ಸೀಲ್‌ ಹಾಕ್ತಿಲ್ಲ. ಹೋಂ ಐಸೋಲೇಷನ್‌ಗೆ ಹೋಗೋರಿಗೆ ಕೈಗೆ ಸೀಲ್‌ ಹಾಕದೇ ಕಳುಹಿಸಲಾಗ್ತಿದೆ. ಕೋವಿಡ್‌ ಟೆಸ್ಟ್‌ ಮಾಡದೇ ಹೋಂ ಐಸೋಲೇಷನ್‌ ಮಾಡಲಾಗುತ್ತಿದೆ. ಹೋಂ ಐಸೋಲೇಷನ್‌ನಲ್ಲಿರೋರಿಗೆ ಕೋವಿಡ್‌ ಟೆಸ್ಟ್‌ ಮಾಡುವುದಿಲ್ಲ" ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.