ಬೆಂಗಳೂರು : ದರ್ಶನ್ ಅವರೇ ತಾನೊಬ್ಬ ಮೂರು ಬಿಟ್ಟವನು ಎಂದು ಹೇಳಿಕೊಂಡಿದ್ದಾರೆ. ಮೂರು ಬಿಟ್ಟವರ ಬಳಿ ಏನು ಮಾತನಾಡುವುದು ಎಂದು ನಟ ದರ್ಶನ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಕೊಚ್ಚೆಗೆ ಕಲ್ಲು ಎಸೆಯಲು ನನಗೆ ಇಷ್ಟವಿಲ್ಲ, ನಾನೇನಿದ್ರೂ ಲೀಗಲ್ ಆಗಿ ಫೈಟ್ ಮಾಡುತ್ತೇನೆ ಎಂದಿದ್ದಾರೆ.
ಹೀ ನೀಡ್ ಎ ಹೆಲ್ಪ್.. ಯಾಕೆಂದ್ರೆ, ಒಂದೆರಡಲ್ಲ, ಸಾಕಷ್ಟು ಉದಾಹರಣೆಗಳು ನನ್ನ ಬಳಿ ಇದೆ. ಅವರೇ ಹೇಳಿದ್ದಾರೆ ಮೂರು ಬಿಟ್ಟವನು ಅಂತಾ.. ಜೊತೆಗೆ ಡಿಸ್ಟರ್ಬ್ ಆಗಿದ್ದಾರೆ ಎಂದರು. ನಾನು ದರ್ಶನ್ಗೆ ಹೇಳೋದು ಮಲ್ಟಿಪಲ್ ಆಫೆಂಡರ್ ಅದಾಗ ನೀವು ಸಜೇಷನ್, ಟ್ರೀಟ್ಮೆಂಟ್ ಅಥವಾ ಸಹಾಯ ತಗೋಬೇಕು. ಮೆಂಟಲಿ ಡಿಸ್ಟರ್ಬ್ ಆದಾಗ ಟ್ರೀಟ್ಮೆಂಟ್ ತಗೊಳೋದು ವಾಸಿ ಎಂದರು.