ETV Bharat / state

ಸ್ಯಾಂಡಲ್​​ವುಡ್​ನಲ್ಲಿ ಪಾರ್ಟಿಗಳು ನಡೀತಾನೇ ಇವೆ: ನಿರ್ದೇಶಕ ಇಂದ್ರಜಿತ್ ಲಂಕೇಶ್​ - ಸ್ಯಾಂಡಲ್​​ವುಡ್ ಡ್ರಗ್ಸ್​ ಕೇಸ್

ಕೆಲ ತಿಂಗಳಿಂದ ತಣ್ಣಗಾಗಿದ್ದ ಸ್ಯಾಂಡಲ್​​ವುಡ್ ಡ್ರಗ್ಸ್​ ಕೇಸ್ ಇದೀಗ ಮತ್ತೆ ಸದ್ದು ಮಾಡಿದೆ. ಈ ಸಂಬಂಧ ಮಾತನಾಡಿದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸ್ಯಾಂಡಲ್​ವುಡ್​​ನಲ್ಲಿ ಡ್ರಗ್ಸ್ ಮಾಫಿಯಾ ಇನ್ನೂ ನಿಂತಿಲ್ಲ ಎಂದಿದ್ದಾರೆ.

Director Indrajith Lankesh
ನಿರ್ದೇಶಕ ಇಂದ್ರಜಿತ್ ಲಂಕೇಶ್​
author img

By

Published : Sep 8, 2021, 12:18 PM IST

ಈ ಹಿಂದೆ ಸ್ಯಾಂಡಲ್​​​ವುಡ್​​​ನಲ್ಲಿ ಡ್ರಗ್ಸ್ ಮಾಫಿಯಾ ಇದೆ ಅಂತಾ ಹೇಳಿ ಬಿರುಗಾಳಿ ಎಬ್ಬಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್, ಈಗ ಮತ್ತೆ ಡ್ರಗ್ಸ್ ಜಾಲದ ಬಗ್ಗೆ ಧ್ವನಿ ಎತ್ತಿದ್ದಾರೆ.

ಡ್ರಗ್ಸ್ ಜಾಲದ ಚಾರ್ಜ್​​​ಶೀಟ್​​ನಲ್ಲಿ ನಟಿ ಹಾಗೂ ನಿರೂಪಕಿ ಅನುಶ್ರೀ ಹೆಸರು ಉಲ್ಲೇಖವಾಗಿದೆ ಎನ್ನಲಾದ ಸಂಬಂಧ ಲಂಕೇಶ್ ಇಂದು ಬೆಂಗಳೂರಿನ ತಮ್ಮ ನಿವಾಸದಲ್ಲಿ, ಮತ್ತೆ ಡ್ರಗ್ಸ್ ಮಾಫಿಯಾ ಬಗ್ಗೆ ಮತ್ತಷ್ಟು ವಿಚಾರಗಳನ್ನ ಬಿಚ್ಚಿಟ್ಟಿದ್ದಾರೆ.

ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಸ್ಕ್ಯಾಂಡಲ್ ಆಗಿದೆ. ನಾನು ಆಗ ಹೇಳಿದ್ದೆ, ಸಿನಿಮಾ ಇಂಡಸ್ಟ್ರಿಯಲ್ಲಿ ಡ್ರಗ್ಸ್​ ಮಾಫಿಯಾ ಇದೆ ಅಂತಾ. ಆದರೆ ಆ ಸಮಯದಲ್ಲಿ ಎಲ್ಲರೂ ನನ್ನ ಬಗ್ಗೆಯೇ ಆಡ್ಕೊಂಡ್ರು. ಈಗ ಅವರೆಲ್ಲಾ ಸುಮ್ಮನಾಗಿದ್ದಾರೆ. ಈಗ ಬೆಂಗಳೂರಿನಲ್ಲಿ ಮತ್ತೆ ಡ್ರಗ್ಸ್​ ಸಿಗ್ತಿದೆ. ತುಂಬಾ ನೋವಿನಿಂದ ಹೇಳ್ತಿನಿ, ಬೆಂಗಳೂರಲ್ಲಿ ಡ್ರಗ್ಸ್​ ಜಾಲ ಸಂಪೂರ್ಣ ಬಂದ್ ಆಗ್ಬೇಕಿದೆ ಎಂದಿದ್ದಾರೆ.

ರಾಜಕಾರಣಿಗಳ ಮಕ್ಕಳಿಗೆ ಡ್ರಗ್ಸ್​ ಸಪ್ಲೈ ಆಗ್ತಿರೋದು ನಿಜ. ಕೆಲವರಿಗೆ ಹೇರ್ ಫಾಲಿಕಲ್ ಟೆಸ್ಟ್ ಆಗಿಲ್ಲ. ಹಲವು ಹೆಸರುಗಳನ್ನ ಮುಚ್ಚೋ ಪ್ರಯತ್ನವಾಗಿದೆ. ಲ್ಯಾಬ್ ಟೆಸ್ಟ್ ಮಾಡಿದ್ರೆ ಸತ್ಯ ಬಯಲಾಗುತ್ತೆ ಎಂದರು.

ಸ್ಯಾಂಡಲ್​ವುಡ್​ನಲ್ಲಿ ಪಾರ್ಟಿ ಇನ್ನೂ ನಿಂತಿಲ್ಲ..

ಡ್ರಗ್ಸ್​ ಪೆಡ್ಲರ್ ಹೇಳಿಕೆಯನ್ನ ಸೀರಿಯಸ್ ಆಗಿ ತೆಗೆದುಕೊಳ್ಳಿ. ನನ್ನ ಬಗ್ಗೆ ಮಾತನಾಡಿದವರು ತೆಪ್ಪಗಿದ್ದಾರೆ. ಡ್ರಗ್ಸ್​ ಸೇವನೆ ಮಾಡ್ತಿರೋರು ಯೂತ್ಸ್. ಕೋಟಿ ಕೋಟಿ ವ್ಯಾಪಾರ ನಡೆಯುತ್ತೆ. ಡ್ರಗ್ಸ್​ ಸೇವನೆ ಮಾಡೋರು ಹಾಗೂ ಡ್ರಗ್ಸ್​ ಡೀಲಿಂಗ್ ಮಾಡೋರ ಮಧ್ಯೆ ವ್ಯತ್ಯಾಸವಿದೆ. ಮೆಡಿಕಲ್ ಸ್ಕ್ಯಾಮ್ ನನಗೆ ಕಾಣಿಸ್ತಿದೆ. ಪೆಡ್ಲರ್​​​​ಗಳು ಹಣವನ್ನ ಡಂಪ್ ಮಾಡ್ತಾರೆ. ಇಷ್ಟೆಲ್ಲ ನಡೆದ್ರು ಇನ್ನೂ ಸೆಲೆಬ್ರೆಟಿಗಳ ಪಾರ್ಟಿ ನಿಂತಿಲ್ಲ. ಸ್ಯಾಂಡಲ್​​ವುಡ್ ಪಾರ್ಟಿಗಳು ನಡೀತಾನೇ ಇವೆ ಅಂತಾ ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪಿಸಿದ್ದಾರೆ.

ಅನುಶ್ರೀಗೆ ಯೂರಿನ್, ಬ್ಲಡ್, ಹೇರ್ ಫಾಲಿಕ್ ಟೆಸ್ಟ್ ಮಾಡಬೇಕಿತ್ತು. ಆದರೆ ಮಾಡಿಲ್ಲ. ಅನುಶ್ರೀ ವಿಚಾರದಲ್ಲಿ ರಾಜಕೀಯ ಒತ್ತಡ ಇತ್ತು. ಮತ್ತೆ ಟೆಸ್ಟ್​​​ಗೆ ಒಳಪಡಿಸಬೇಕು ಎಂದಿದ್ದಾರೆ. ರಾಜಕಾರಣಿ ಹಾಗೂ ನಿರ್ದೇಶಕರು, ನಟರ ಮಕ್ಕಳು ಇನ್ನೂ ಹಲವರು ಪಾರ್ಟಿಗಳನ್ನು ಮಾಡುತ್ತಿದ್ದಾರೆ. ಕೊರೊನಾ 2ನೇ ಅಲೆ ನಂತರ ಪಾರ್ಟಿಗಳು ಹೆಚ್ಚಾಗುತ್ತಿವೆ. ಸಿಸಿಬಿ ಸ್ಟೇಟ್ ಮೆಂಟ್ ತಗೊಂಡವ್ರು ಈ ಪಾರ್ಟಿಯಲ್ಲಿ ಭಾಗಿಯಾಗುತ್ತಿದ್ದಾರೆ.

ಸಿಸಿಬಿಗೆ ಮತ್ತೆ ನಾನು ಮಾಹಿತಿ ನೀಡಬಲ್ಲೆ. 2ನೇ ಅಲೆ ನಂತರದ ಪಾರ್ಟಿ ಬಗ್ಗೆ ಮಾಹಿತಿ ಕೊಡಬಲ್ಲೆ. ಕಾನೂನಾತ್ಮಕವಾಗಿ ಡ್ರಗ್ಸ್​ ಪೆಡ್ಲರ್​​ಗೆ ಹೆಚ್ಚು ಶಿಕ್ಷೆ ಆಗಬೇಕು. ಡ್ರಗ್ಸ್​ ಸೇವನೆ ಮಾಡಿದವರಿಗೆ ಕಡಿಮೆ ಪ್ರಮಾಣದ ಶಿಕ್ಷೆ ಇದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.