ETV Bharat / state

ಪ್ರಹ್ಲಾದ್​ ಜೋಶಿ ಯಾರ ಕಿವಿಗೆ ಹೂ ಮುಡಿಸುತ್ತಿದ್ದಾರೆ?: ದಿನೇಶ್ ಗುಂಡೂರಾವ್ ಪ್ರಶ್ನೆ - ಎಸ್​ಡಿಪಿಐ ಕುರಿತ ಪ್ರಹ್ಲಾದ್​ ಜೋಶಿ ಹೇಳಿಕೆಗೆ ದಿನೇಶ್ ಗುಂಡೂರಾವ್ ಟ್ವೀಟ್​

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಗಾಳಿಯಲ್ಲಿ ಗುಂಡು ಹಾರಿಸುವ ಬದಲು ಎಸ್​ಡಿಪಿಐ, ಓವೈಸಿಯ ಎಐಎಂಐಎಂ ಹಾಗೂ ನಾಗಪುರ ನಡುವಿನ ಕನೆಕ್ಷನ್ ಏನು ಎಂಬುದನ್ನು ತಿಳಿಸಲಿ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.

ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್
author img

By

Published : May 29, 2022, 5:34 PM IST

Updated : May 29, 2022, 5:39 PM IST

ಬೆಂಗಳೂರು: ಎಸ್​ಡಿಪಿಐ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೀಡಿರುವ ಹೇಳಿಕೆಗೆ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ. ಟ್ವೀಟ್ ಮೂಲಕ ತಮ್ಮ ಕಿಡಿಕಾರಿರುವ ಅವರು, ಎಸ್​ಡಿಪಿಐ ಕಾಂಗ್ರೆಸ್ ಕೂಸು ಎಂದಿರುವ ಪ್ರಹ್ಲಾದ್​ ಜೋಶಿ ಯಾರ ಕಿವಿಗೆ ಹೂ ಮುಡಿಸುತ್ತಿದ್ದಾರೆ?. ಮುಸ್ಲಿಮರನ್ನು ಪ್ರಚೋದಿಸಿ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲ ಮಾಡಿಕೊಡುತ್ತಿರುವ ಎಸ್​ಡಿಪಿಐ ಕಾಂಗ್ರೆಸ್ ಕೂಸಾಗಲು ಸಾಧ್ಯವೆ? ಎಸ್​ಡಿಪಿಐ ಮತ್ತು ಓವೈಸಿಯ ಎಐಎಂಐಎಂ ಪಕ್ಷ ಬಿಜೆಪಿಯ ಬಿ ಟೀಂ ಅನ್ನೋದು ದೇಶಕ್ಕೆ ಗೊತ್ತಿದೆ‌. ಈ ಬಗ್ಗೆ ಜೋಶಿಯವರು ಎದೆ ತಟ್ಟಿ ಹೇಳುತ್ತಾರೆಯೇ? ಎಂದು ಕೇಳಿದ್ದಾರೆ.

  • 1
    SDPI ಕಾಂಗ್ರೆಸ್ ಕೂಸು ಎಂದಿರುವ ಪ್ರಲ್ಹಾದ್ ಜೋಶಿ ಯಾರ ಕಿವಿಗೆ ಹೂ ಮುಡಿಸುತ್ತಿದ್ದಾರೆ?
    ಮುಸ್ಲಿಮರನ್ನು ಪ್ರಚೋದಿಸಿ ಚುನಾವಣೆಯಲ್ಲಿ BJPಗೆ ಅನುಕೂಲ ಮಾಡಿಕೊಡುತ್ತಿರುವ SDPI ಕಾಂಗ್ರೆಸ್ ಕೂಸಾಗಲು ಸಾಧ್ಯವೆ?
    SDPI ಮತ್ತು ಓವೈಸಿಯ AIMIM ಪಕ್ಷ BJPಯ ಬೀ ಟೀಂ ಎಂದು ದೇಶಕ್ಕೆ ಗೊತ್ತಿದೆ‌.
    ಈ ಬಗ್ಗೆ ಜೋಶಿಯವರು ಎದೆ ತಟ್ಟಿ ಹೇಳುತ್ತಾರೆಯೇ?

    — Dinesh Gundu Rao/ದಿನೇಶ್ ಗುಂಡೂರಾವ್ (@dineshgrao) May 29, 2022 " class="align-text-top noRightClick twitterSection" data=" ">

ಸಚಿವ ಪ್ರಹ್ಲಾದ್ ಜೋಶಿಯವರು ಗಾಳಿಯಲ್ಲಿ ಗುಂಡು ಹಾರಿಸುವ ಬದಲು ಎಸ್​ಡಿಪಿಐ, ಓವೈಸಿಯ ಎಐಎಂಐಎಂ ಹಾಗೂ ನಾಗಪುರ ನಡುವಿನ ಕನೆಕ್ಷನ್ ಏನು ಎಂಬುದನ್ನು ತಿಳಿಸಲಿ. ಆರ್​ಎಸ್ಎಸ್​ ಕೃಪಾ ಪೋಷಿತ ನಾಟಕ ಮಂಡಳಿಯಲ್ಲಿ‌ ಎಸ್​ಡಿಪಿಐ ಪಾತ್ರವೇನು? ಓವೈಸಿಯ ರೋಲ್ ಏನು ಎಂಬುದು ದೇಶಕ್ಕೆ ತಿಳಿಯಲಿ. ಈ ಸಂಘಟನೆಗಳಿಗೆ ನಾಗಪುರದ ಕನೆಕ್ಷನ್ ಇಲ್ಲದಿದ್ದರೆ ಈ ಕೂಡಲೇ ಎಸ್​ಡಿಪಿಐ ಅನ್ನು ನಿಷೇಧಿಸಲಿ ಎಂದು ಆಗ್ರಹಿಸಿದ್ದಾರೆ.

  • 2
    ಪ್ರಲ್ಹಾದ್ ಜೋಶಿಯವರು ಗಾಳಿಯಲ್ಲಿ ಗುಂಡು ಹಾರಿಸುವ ಬದಲು SDPI, ಓವೈಸಿಯ AIMIM ಹಾಗೂw ನಾಗಪುರ ನಡುವಿನ ಕನೆಕ್ಷನ್ ಏನು ಎಂಬುದನ್ನು ತಿಳಿಸಲಿ.
    RSS ಕೃಪಾ ಪೋಷಿತ ನಾಟಕ ಮಂಡಳಿಯಲ್ಲಿ‌ SDPI ಪಾತ್ರವೇನು? ಓವೈಸಿಯ ರೋಲ್ ಏನು ಎಂದು ದೇಶಕ್ಕೆ ತಿಳಿಯಲಿ.
    ಈ ಸಂಘಟನೆಗಳಿಗೆ ನಾಗಪುರದ ಕನೆಕ್ಷನ್ ಇಲ್ಲದಿದ್ದರೆ ಈ ಕೂಡಲೇ SDPIನ್ನು ನಿಷೇಧಿಸಲಿ.

ಎಸ್​ಡಿಪಿಐನ ರಾಜಕೀಯ ಲಾಭ ಪಡೆಯುತ್ತಿರುವ ಬಿಜೆಪಿಯವರು‌ ಎಸ್​ಡಿಪಿಐ ಸಂಘಟನೆ ಕಾಂಗ್ರೆಸ್ ಕೂಸು ಎಂದು ಆರೋಪಿಸುವುದ್ಯಾಕೆ?. ಎಸ್​ಡಿಪಿಐ ಸಂಘಟನೆಯ ಬಗ್ಗೆ ಕಾಂಗ್ರೆಸ್‌ಗೆ ಯಾವ ಸಾಫ್ಟ್ ಕಾರ್ನರ್ ಇಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯ ಸರ್ಕಾರವೇ ಇದೆ. ಎಸ್​ಡಿಪಿಐ ಸಂಘಟನೆಯನ್ನು ನಿಷೇಧಿಸದಂತೆ ಬಿಜೆಪಿಯವರ ಕೈಕಟ್ಟಿ ಹಾಕಿರುವವರರು ಯಾರು? ತಾಕತ್ತಿದ್ದರೆ ನಿಷೇಧಿಸಲಿ ಎಂದು ಸವಾಲು ಹಾಕಿದ್ದಾರೆ.

  • 3
    SDPIನಿಂದ ರಾಜಕೀಯ ಲಾಭ ಪಡೆಯುತ್ತಿರುವ BJP ಯವರು‌ SDPI ಸಂಘಟನೆ ಕಾಂಗ್ರೆಸ್ ಕೂಸು ಎಂದು ಹಲುಬುವುದ್ಯಾಕೆ?
    SDPI ಸಂಘಟನೆಯ ಬಗ್ಗೆ ಕಾಂಗ್ರೆಸ್‌ಗೆ ಯಾವ ಸಾಫ್ಟ್ ಕಾರ್ನರ್ ಇಲ್ಲ.
    ಕೇಂದ್ರ ಹಾಗೂ ರಾಜ್ಯದಲ್ಲಿ BJPಯ ಸರ್ಕಾರವೇ ಇದೆ.
    SDPI ಸಂಘಟನೆಯನ್ನು ನಿಷೇಧಿಸದಂತೆ BJPಯವರ ಕೈ ಕಟ್ಟಿ ಹಾಕಿರುವವರ‌್ಯಾರು? ತಾಕತ್ತಿದ್ದರೆ ನಿಷೇಧಿಸಲಿ.

ಎಸ್​ಡಿಪಿಐ ಸಂಘಟನೆ ಬಿಜೆಪಿಯ ಪಾಲಿಗೆ ಕಲ್ಪವೃಕ್ಷ ಇದ್ದಂತೆ. ಎಸ್​ಡಿಪಿಐ ಸಂಘಟನೆ ನಿಷೇಧವಾಗುವುದು ಬಿಜೆಪಿಯವರಿಗೂ ಸುತಾರಾಂ ಇಷ್ಟವಿಲ್ಲ. ಈ ಸತ್ಯ ಜೋಶಿಯವರಿಗೂ ಗೊತ್ತಿದೆ. ಆದರೂ ಜೋಶಿಯವರು ಜನರ ಕಣ್ಣಿಗೆ ಮಣ್ಣೆರೆಚಲು ಎಸ್​ಡಿಪಿಐನೊಂದಿಗೆ ಕಾಂಗ್ರೆಸ್‌‌ಗೆ ಸಂಬಂಧ ಕಲ್ಪಿಸುತ್ತಾರೆ. ಅಷ್ಟಕ್ಕೂ ಎಸ್​ಡಿಪಿಐ ಸಂಘಟನೆಯಿಂದ ಕಾಂಗ್ರೆಸ್‌ಗೆ ಏನು ಲಾಭ ಜೋಶಿಯವರೆ? ಎಂದು ಪ್ರಶ್ನೆ ಕೇಳಿದ್ದಾರೆ.

  • 4
    SDPI ಸಂಘಟನೆ BJPಯ ಪಾಲಿಗೆ ಕಲ್ಪವೃಕ್ಷ ಇದ್ದಂತೆ.
    SDPI ಸಂಘಟನೆ ನಿಷೇಧವಾಗುವುದು BJP ಯವರಿಗೂ ಸುತಾರಾಂ ಇಷ್ಟವಿಲ್ಲ.
    ಈ ಸತ್ಯ ಜೋಶಿಯವರಿಗೂ ಗೊತ್ತಿದೆ. ಆದರೂ ಜೋಶಿಯವರು ಜನರ ಕಣ್ಣಿಗೆ ಮಣ್ಣೆರಚಲು SDPIನೊಂದಿಗೆ ಕಾಂಗ್ರೆಸ್‌‌ಗೆ ಸಂಬಂಧ ಕಲ್ಪಿಸುತ್ತಾರೆ.
    ಅಷ್ಟಕ್ಕೂ SDPI ಸಂಘಟನೆಯಿಂದ ಕಾಂಗ್ರೆಸ್‌ಗೆ ಏನು ಲಾಭ ಜೋಶಿಯವರೆ?

ಓದಿ: ಸಿದ್ದರಾಮಯ್ಯನವರ ಮಾನಸಿಕ ಸ್ಥಿತಿಗತಿ ಸರಿ ಇಲ್ಲ: ಸಚಿವ ಕಾರಜೋಳ

Last Updated : May 29, 2022, 5:39 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.