ETV Bharat / state

ಕೆಎಸ್​ಆರ್​ಟಿಸಿ ನೌಕರರಿಗೆ ವೇತನ ನೀಡದಿರುವುದು ಸರ್ಕಾರದ ವೈಫಲ್ಯ: ದಿನೇಶ್ ಗುಂಡೂರಾವ್

ಕೋವಿಡ್ ನೆಪ ಹೇಳುವುದನ್ನು ಬಿಟ್ಟು ಸಾರಿಗೆ ಇಲಾಖೆ, ಸಂಪನ್ಮೂಲ ಕ್ರೋಢೀಕರಣಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಿತ್ತು. ಈಗ ಹಣಕಾಸು ಇಲಾಖೆ ಕಡೆ ಬೊಟ್ಟು ತೋರಿಸಿದರೆ ಸಾರಿಗೆ ನೌಕರರ ಜೀವನ ನಡೆಯುವುದ್ದೇಗೆ? ಎಂದು ಕೇಳಿದ್ದಾರೆ.

Dinesh Gundurao tweeted against the government
ಸರ್ಕಾರದ ವಿರುದ್ಧ ದಿನೇಶ್ ಗುಂಡುರಾವ್ ಟ್ವೀಟ್
author img

By

Published : Nov 15, 2020, 11:24 AM IST

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರಿಗೆ ವೇತನ ನೀಡದಿರುವುದು ಸರ್ಕಾರದ ಆಡಳಿತ ವೈಫಲ್ಯ ತೋರಿಸುತ್ತದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟಿದ್ದಾರೆ.

ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಕೆಎಸ್​​ಆರ್​​ಟಿಸಿಯ 4 ನಿಗಮಗಳ ನೌಕರರಿಗೆ ವೇತನ ಕೊಡದಿರುವುದು ಸಾರಿಗೆ ಇಲಾಖೆ ಮತ್ತು ಸರ್ಕಾರದ ಆಡಳಿತ ವೈಫಲ್ಯದ ಕೈಗನ್ನಡಿ ಎಂದು ಟೀಕಿಸಿದ್ದಾರೆ.

ಸ್ವತಃ ಉಪಮುಖ್ಯಮಂತ್ರಿ ಕೈಯಲ್ಲೇ ಸಾರಿಗೆ ಇಲಾಖೆಯಿದ್ದರೂ ಸುಮಾರು 1.35 ಲಕ್ಷ ನೌಕರರಿಗೆ ಸಂಬಳ ಆಗಿಲ್ಲ. ಸಂಬಳ ಇಲ್ಲದೆ ದೀಪಾವಳಿಯಂತಹ ಸಡಗರದ ಹಬ್ಬವನ್ನೂ ಸಾರಿಗೆ ನೌಕರರು ಆಚರಿಸದಂತಾಗಿದೆ. ಸರ್ಕಾರ ಈ ಕೂಡಲೇ ಗಮನ ಹರಿಸಬೇಕು. ಸಾರಿಗೆ ನೌಕರರ ಸಂಬಳ ಆಗದಿರುವದಕ್ಕೆ ಸಚಿವ ಸವದಿ ಕೋವಿಡ್ ನೆಪ ಹೇಳಿದ್ದಾರೆ. ಆದ್ರೆ ಕೋವಿಡ್ ಬಿಸಿ ಕೇವಲ ಸಾರಿಗೆ ಇಲಾಖೆಗೆ ಮಾತ್ರ ತಟ್ಟಿಲ್ಲ ಎಂದು ದಿನೇಶ್​ ಗುಂಡೂರಾವ್​ ಹೇಳಿದ್ದಾರೆ.

  • 2
    ಸಾರಿಗೆ ನೌಕರರ ಸಂಬಳ ಆಗದಿರುವದಕ್ಕೆ ಸಚಿವ ಸವದಿ ಕೋವಿಡ್ ನೆಪ ಹೇಳಿದ್ದಾರೆ. ಕೋವಿಡ್ ಬಿಸಿ ಕೇವಲ ಸಾರಿಗೆ ಇಲಾಖೆಗೆ ಮಾತ್ರ ತಟ್ಟಿಲ್ಲ.
    ಕೋವಿಡ್ ನೆಪ ಹೇಳುವುದು ಬಿಟ್ಟು ಸಾರಿಗೆ ಇಲಾಖೆ,ಸಂಪನ್ಮೂಲ ಕ್ರೋಡೀಕರಣಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಿತ್ತು.ಈಗ ಹಣಕಾಸು ಇಲಾಖೆ ಕಡೆ ಬೊಟ್ಟು ತೋರಿಸಿದರೆ ಸಾರಿಗೆ ನೌಕರರ ಜೀವನ ನಡೆಯುವುದ್ದೇಗೆ?

    — Dinesh Gundu Rao/ದಿನೇಶ್ ಗುಂಡೂರಾವ್ (@dineshgrao) November 15, 2020 " class="align-text-top noRightClick twitterSection" data=" ">

ಕೋವಿಡ್ ನೆಪ ಹೇಳುವುದು ಬಿಟ್ಟು ಸಾರಿಗೆ ಇಲಾಖೆ, ಸಂಪನ್ಮೂಲ ಕ್ರೋಢೀಕರಣಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಿತ್ತು. ಈಗ ಹಣಕಾಸು ಇಲಾಖೆ ಕಡೆ ಬೊಟ್ಟು ತೋರಿಸಿದರೆ ಸಾರಿಗೆ ನೌಕರರ ಜೀವನ ನಡೆಯುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ಎರಡೇ ದಿನದಲ್ಲಿ ಸಜ್ಜಾಗುವುದು ಹೇಗೆ? ರಾಜ್ಯ ಸರ್ಕಾರ ಸ್ಪರ್ಧಾತ್ಮಕ ಪರೀಕ್ಷೆಗಳ ವೇಳಾಪಟ್ಟಿ ಹೊರಡಿಸುವುದರ ಕುರಿತು ಆತಂಕ ವ್ಯಕ್ತಪಡಿಸಿರುವ ಅವರು, ಐಎಎಸ್ ಮತ್ತು ಕೆಎಎಸ್ ಪರೀಕ್ಷೆಯ ವೇಳಾಪಟ್ಟಿಗಳು ಅಭ್ಯರ್ಥಿಗಳ ಆತಂಕ ಹೆಚ್ಚಿಸಿದೆ.

ಎರಡೇ ದಿನಗಳ ಅಂತರದಲ್ಲಿ ಐಎಎಸ್ ಮತ್ತು ಕೆಎಎಸ್ ಪರೀಕ್ಷೆ ಬರೆಯಲು ಹೇಗೆ ಸಾಧ್ಯ? ಈ ಎರಡೂ ಸ್ಪರ್ಧಾತ್ಮಕ ಪರೀಕ್ಷೆಗೆ ಭಿನ್ನ ಸಿದ್ದತೆ ನಡೆಸಬೇಕು. ಎರಡು ಪರೀಕ್ಷೆಗಳ ನಡುವೆ ಕನಿಷ್ಠ ಪಕ್ಷ 1 ತಿಂಗಳ ಅಂತರವಿರಬೇಕು. ಹೀಗಾಗಿ ಕೆಪಿಎಸ್​​ಸಿ ಪರೀಕ್ಷಾ ದಿನಾಂಕ ಪರಿಷ್ಕರಣೆ ಮಾಡುವುದು ಸೂಕ್ತ ಎಂದು ದಿನೇಶ್​ ಗುಂಡೂರಾವ್​ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.