ಬೆಂಗಳೂರು: ಕೇಂದ್ರ ಸರ್ಕಾರದಿಂದ ನೆರೆ ಪರಿಹಾರ ತರುವ ವಿಚಾರದಲ್ಲಿ ಕಂದಾಯ ಸಚಿವ ಆರ್. ಅಶೋಕ್ ವಿಫಲವಾಗಿದ್ದಾರೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ದೂರಿದ್ದಾರೆ.
-
ಸಚಿವರೆ, ಕಳೆದ ಸೆಪ್ಟೆಂಬರ್‌ನಲ್ಲಿ ನಿಯಮ ಮೀರಿ ಕೇಂದ್ರದಿಂದ ನೆರೆ ಪರಿಹಾರ ಕೇಳುವುದಾಗಿ ಹೇಳಿದ್ದೀರಿ, ಆ ಪರಿಹಾರದ ಕಥೆ ಏನಾಯ್ತು?
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) October 16, 2020 " class="align-text-top noRightClick twitterSection" data="
ನೀವು ಕೇಳಿದ ಪರಿಹಾರವನ್ನು ಕೊಟ್ಟಿದೆಯೆ?
1 ತಿಂಗಳ ಬಳಿಕ ರಾಜ್ಯ ಮತ್ತೆ ಪ್ರವಾಹಕ್ಕೆ ಸಿಲುಕಿಕೊಂಡಿದೆ.
ಈಗ ಮತ್ತೆ ಗಾಳಿಯಲ್ಲಿ ಗುಂಡು ಹಾರಿಸಿ ದಿಕ್ಕು
ತಪ್ಪಿಸುವ ಯೋಜನೆ ಇದೆಯೆ? https://t.co/IdyFYe9Dr6
">ಸಚಿವರೆ, ಕಳೆದ ಸೆಪ್ಟೆಂಬರ್‌ನಲ್ಲಿ ನಿಯಮ ಮೀರಿ ಕೇಂದ್ರದಿಂದ ನೆರೆ ಪರಿಹಾರ ಕೇಳುವುದಾಗಿ ಹೇಳಿದ್ದೀರಿ, ಆ ಪರಿಹಾರದ ಕಥೆ ಏನಾಯ್ತು?
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) October 16, 2020
ನೀವು ಕೇಳಿದ ಪರಿಹಾರವನ್ನು ಕೊಟ್ಟಿದೆಯೆ?
1 ತಿಂಗಳ ಬಳಿಕ ರಾಜ್ಯ ಮತ್ತೆ ಪ್ರವಾಹಕ್ಕೆ ಸಿಲುಕಿಕೊಂಡಿದೆ.
ಈಗ ಮತ್ತೆ ಗಾಳಿಯಲ್ಲಿ ಗುಂಡು ಹಾರಿಸಿ ದಿಕ್ಕು
ತಪ್ಪಿಸುವ ಯೋಜನೆ ಇದೆಯೆ? https://t.co/IdyFYe9Dr6ಸಚಿವರೆ, ಕಳೆದ ಸೆಪ್ಟೆಂಬರ್‌ನಲ್ಲಿ ನಿಯಮ ಮೀರಿ ಕೇಂದ್ರದಿಂದ ನೆರೆ ಪರಿಹಾರ ಕೇಳುವುದಾಗಿ ಹೇಳಿದ್ದೀರಿ, ಆ ಪರಿಹಾರದ ಕಥೆ ಏನಾಯ್ತು?
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) October 16, 2020
ನೀವು ಕೇಳಿದ ಪರಿಹಾರವನ್ನು ಕೊಟ್ಟಿದೆಯೆ?
1 ತಿಂಗಳ ಬಳಿಕ ರಾಜ್ಯ ಮತ್ತೆ ಪ್ರವಾಹಕ್ಕೆ ಸಿಲುಕಿಕೊಂಡಿದೆ.
ಈಗ ಮತ್ತೆ ಗಾಳಿಯಲ್ಲಿ ಗುಂಡು ಹಾರಿಸಿ ದಿಕ್ಕು
ತಪ್ಪಿಸುವ ಯೋಜನೆ ಇದೆಯೆ? https://t.co/IdyFYe9Dr6
ಈ ಕುರಿತು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಅವರು, ಕಳೆದ ಸೆಪ್ಟೆಂಬರ್‌ನಲ್ಲಿ ನಿಯಮ ಮೀರಿ ಕೇಂದ್ರದಿಂದ ನೆರೆ ಪರಿಹಾರ ಕೇಳುವುದಾಗಿ ಹೇಳಿದ್ದೀರಿ. ಆ ಪರಿಹಾರದ ಕಥೆ ಏನಾಯ್ತು?, ನೀವು ಕೇಳಿದ ಪರಿಹಾರವನ್ನು ಕೇಂದ್ರ ಕೊಟ್ಟಿದೆಯೇ?, 1 ತಿಂಗಳ ಬಳಿಕ ರಾಜ್ಯ ಮತ್ತೆ ಪ್ರವಾಹಕ್ಕೆ ಸಿಲುಕಿಕೊಂಡಿದೆ. ಈಗ ಮತ್ತೆ ಗಾಳಿಯಲ್ಲಿ ಗುಂಡು ಹಾರಿಸಿ ದಿಕ್ಕು ತಪ್ಪಿಸುವ ಯೋಜನೆ ಇದೆಯೆ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ನೆರೆ ಸಮಸ್ಯೆ ಹೆಚ್ಚಾಗಿದ್ದು ಸರ್ಕಾರ ಇದನ್ನು ನಿಭಾಯಿಸುವಲ್ಲಿ ವಿಫಲವಾಗುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ನಾಯಕರು ನಿರಂತರವಾಗಿ ಆರೋಪಿಸುತ್ತಾ ಬಂದಿದ್ದಾರೆ. ನಿನ್ನೆ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ನೆರೆ ನಿಭಾಯಿಸುವ ವಿಚಾರದಲ್ಲಿ ಸರ್ಕಾರ ಸಂಪೂರ್ಣ ಎಡವಿದೆ. ನಾವು ಕೂಡ ನಮ್ಮ ಕಾರ್ಯಕರ್ತರಿಗೆ ಜನರ ಸಹಾಯಕ್ಕೆ ಧಾವಿಸಲು ಸೂಚಿಸಿದ್ದು ಪಕ್ಷದ ವತಿಯಿಂದ ಅಗತ್ಯ ಸಹಾಯ ಸಹಕಾರ ನೀಡುತ್ತೇವೆ ಎಂದು ಹೇಳಿದ್ದರು.