ETV Bharat / state

ಅಪಾಯಕ್ಕೆ ಆಹ್ವಾನ ನೀಡುತ್ತಿವೆ ಶಿಥಿಲಗೊಂಡ ಕಟ್ಟಡಗಳು..!

author img

By

Published : Nov 7, 2020, 4:03 PM IST

ನಗರಗಳಲ್ಲಿರುವ ಹಳೆಯ ಹಾಗೂ ಶಿಥಿಲಗೊಂಡ ಕಟ್ಟಡಗಳು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದು, ಅಂತಹ ಕಟ್ಟಡಗಳು ಯಾವತ್ತಿಗೂ ಅಪಾಯಕಾರಿ. ಇಂತಹ ಕಟ್ಟಡಗಳು ‌ಕುಸಿತಗೊಂಡರೆ ನೂರಾರು ಜನ ಪ್ರಾಣ ಕಳೆದುಕೊಳ್ಳುತ್ತಾರೆ.

Dilapidated buildings in Cities
ಅಪಾಯಕ್ಕೆ ಆಹ್ವಾನ ನೀಡುತ್ತಿವೆ ಶಿಥಿಲಗೊಂಡ ಕಟ್ಟಡಗಳು

ಬೆಂಗಳೂರು: ರಾಜ್ಯದಲ್ಲಿ ಪ್ರಮುಖ ಮಹಾನಗರಗಳಲ್ಲಿ ಹಳೆಯ ಹಾಗೂ ಶಿಥಿಲಗೊಂಡ ಕಟ್ಟಡಗಳಲ್ಲಿ ಜನ ವಾಸಿಸುತ್ತಿರುವುದು ಸಾಮಾನ್ಯ. ಆದರೆ ಇಂಥ ಕಟ್ಟಡಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಅದರಲ್ಲೂ ಮಳೆಗಾಲದಲ್ಲಿ ಅತಿ ಮಳೆಯಿಂದ ನೀರು ಹಿಡಿದು ಹಳೆ ಕಟ್ಟಡಗಳು ಕುಸಿದು ಬಿದ್ದರೆ ಅಪಾರ ಪ್ರಾಣ ಹಾನಿ‌ ಸಂಭವಿಸುತ್ತದೆ.

ವರ್ಷಗಳು ಕಳೆದಂತೆ ಸಾಮಾನ್ಯವಾಗಿ ಕಟ್ಟಡಗಳು ಹಳೆಯದಾಗಿ ಶಿಥಿಲಾವಸ್ಥೆಗೆ ತಲುಪುತ್ತವೆ. ಇಂತಹ ಕಟ್ಟಡಗಳು ಯಾವತ್ತಿಗೂ ಅಪಾಯಕಾರಿ. ಈ ಕಟ್ಟಡಗಳನ್ನು ಗುರುತಿಸಿ ಕೆಡವಲು ಸಂಬಂಧಿಸಿದ ಪುರಸಭೆ, ನಗರಸಭೆ ಹಾಗೂ ಮಹಾನಗರ ಪಾಲಿಕೆಗಳು ಪ್ರತಿ ವರ್ಷವೂ ಸೂಚಿಸುತ್ತದೆ.

ಇನ್ನು ಗಣಿನಗರಿ ಬಳ್ಳಾರಿಯಲ್ಲಿ 2008-09 ರಲ್ಲಿ ನಿರ್ಮಾಣ ಹಂತದ ಕಟ್ಟಡವೊಂದು ಕುಸಿದು ಬಿದ್ದು, ಹತ್ತಾರು ಮಂದಿ ಸಾವನ್ನಪ್ಪಿದ್ದರು. ಅದನ್ನ ಹೊರತುಪಡಿಸಿ ಅಲ್ಲಿಂದ ಇಲ್ಲಿಯವರೆಗೂ ಯಾವುದೇ ನಿರ್ಮಾಣದ ಹಂತದ ಕಟ್ಟಡವಾಗಲಿ, ಶಿಥಿಲಗೊಂಡ ಕಟ್ಟಡವಾಗಲಿ ಕುಸಿದುಬಿದ್ದಿಲ್ಲ. ಮಹಾನಗರ ಪಾಲಿಕೆ ಸಿಬ್ಬಂದಿ ಪ್ರತಿಯೊಂದು ವಾರ್ಡಿಗೂ ತೆರಳಿ ಶಿಥಿಲಗೊಂಡ ಕಟ್ಟಡ ಅಥವಾ ನಿವೇಶನಗಳ ಬಗ್ಗೆ ಮಾಹಿತಿಯನ್ನ ಪಡೆಯುತ್ತಾರೆ. ಆ ರೀತಿ ಯಾವುದೇ ಕಟ್ಟಡ ಇರುವುದು ಕಂಡು ಬಂದರೆ ನೆಲಸಮಗೊಳಿಸುವ ಕಾರ್ಯ ಮಾಡಲಾಗುತ್ತದೆ.

ರಾಜ್ಯದಲ್ಲಿ ಹಲವಾರು ಕಟ್ಟಡಗಳು ಶಿಥಿಲಗೊಂಡಿದ್ದು, ಆಹುತಿಗಾಗಿ ಕಾಯುತ್ತಿವೆ.‌ ಆದರೆ, ಪಾಲಿಕೆ ಅಧಿಕಾರಿಗಳು ಕಾಟಾಚಾರಕ್ಕೆ ಸರ್ವೇ ನಡೆಸಿ ನೋಟಿಸ್‌ ನೀಡುತ್ತಾರೆ. ಆದರೆ, ಮನೆಗಳ ತೆರವು ಕಾರ್ಯಾಚರಣೆ ಮಾಡುವುದಿಲ್ಲ ಎಂಬ ಆರೋಪ ಸಾರ್ವಜನಿಕರದ್ದಾಗಿದೆ. ಕಟ್ಟಡ ‌ಕುಸಿತಗೊಂಡರೆ ನೂರಾರು ಜನ ಪ್ರಾಣ ಕಳೆದುಕೊಳ್ಳುತ್ತಾರೆ. ಅಕ್ಕಪಕ್ಕದ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಸಂಭವಿಸುತ್ತದೆ. ಇದಕ್ಕೂ ಮೊದಲೇ ಪಾಲಿಕೆ ಎಚ್ಚೆತ್ತು ಶಿಥಿಲವಾದ ಹಳೆಯ ಕಟ್ಟಡ ತೆರವುಗೊಳಿಸುವುದು ಅವಶ್ಯ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.