ETV Bharat / state

ಬೆಂಗಳೂರಿನಲ್ಲಿ 404 ಕಟ್ಟಡಗಳಿಗೆ ಕುಸಿಯುವ ಭೀತಿ.. ಸರ್ವೆಯಲ್ಲಿ ಪತ್ತೆಯಾದ ಶಿಥಿಲ ಕಟ್ಟಡಗಳ ವಿವರ ಇಲ್ಲಿದೆ ನೋಡಿ..

ಕಟ್ಟಡಗಳನ್ನು ಮೇಲ್ನೋಟಕ್ಕೆ ನೋಡಿ, ಅದು ನಿರ್ಮಾಣ ಆಗಿರುವ ವರ್ಷ ಆಧರಿಸಿ ಕುಸಿಯುವ ಕಟ್ಟಡ ಎಂದು ಗುರುತಿಸಲಾಗಿದೆ. ತಜ್ಞ ಇಂಜಿನಿಯರ್​ಗಳ ಮೂಲಕ ಸದೃಢತೆ ಬಗ್ಗೆ ಪರೀಕ್ಷೆ ನಡೆಸಿ, ನಂತರವಷ್ಟೇ ತೆರವು ಮಾಡಲು ಪಾಲಿಕೆ ಚಿಂತಿಸಿದೆ..

ಬೆಂಗಳೂರಿನಲ್ಲಿ 404 ಕಟ್ಟಡಗಳಿಗೆ ಕುಸಿಯುವ ಭೀತಿ

author img

By

Published : Oct 16, 2021, 4:41 PM IST

ಬೆಂಗಳೂರು : ನಗರದಲ್ಲಿ ಹಳೆಯ ಹಾಗೂ ಕಳಪೆ ಕಟ್ಟಡಗಳು ಕುಸಿಯುತ್ತಿರುವ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹದಿನೈದು ದಿನದಲ್ಲಿ ಎಲ್ಲಾ ಎಂಟು ವಲಯಗಳ ಶಿಥಿಲ ಕಟ್ಟಡಗಳನ್ನು ಸರ್ವೆ ಮಾಡುವಂತೆ ಕಂದಾಯ ಸಚಿವರು ಹಾಗೂ ಮುಖ್ಯ ಆಯುಕ್ತರು ಸಭೆ ನಡೆಸಿ, ವಲಯ ಆಯುಕ್ತರಿಗೆ ಆದೇಶಿಸಿದ್ದರು. ಇದರ ಪ್ರಾಥಮಿಕ ಸರ್ವೆ ವರದಿ ಸಲ್ಲಿಕೆಯಾಗಿದೆ. ನಗರದಲ್ಲಿ ಒಟ್ಟು 404 ಕಟ್ಟಡಗಳು ಅಪಾಯದಲ್ಲಿವೆ ಎಂಬುದು ಬಹಿರಂಗವಾಗಿದೆ.

2019ರಲ್ಲಿ ನಡೆಸಿದ್ದ ಸರ್ವೆಯಲ್ಲಿ 185 ಕಟ್ಟಡಗಳು ಶಿಥಿಲಗೊಂಡಿದ್ದು ವರದಿಯಾಗಿತ್ತು. ಇದೀಗ ಪ್ರಾಥಮಿಕ ಸರ್ವೆಯಲ್ಲಿ ಇಷ್ಟು ಕಟ್ಟಡಗಳನ್ನು ಗುರುತಿಸಲಾಗಿದೆ. ಆ ಕಟ್ಟಡಗಳ ಸದೃಢತೆ ಬಗ್ಗೆ ಕೂಲಂಕಷ ಪರೀಕ್ಷೆ ನಡೆಸುವುದು ಇನ್ನೂ ಬಾಕಿ ಇದೆ ಏಂದು ಸರ್ವೆ ನಡೆಸಿದ ಇಂಜಿನಿಯರ್ ಒಬ್ಬರು ತಿಳಿಸಿದ್ದಾರೆ.

ಕಟ್ಟಡಗಳನ್ನು ಮೇಲ್ನೋಟಕ್ಕೆ ನೋಡಿ, ಅದು ನಿರ್ಮಾಣ ಆಗಿರುವ ವರ್ಷ ಆಧರಿಸಿ ಕುಸಿಯುವ ಕಟ್ಟಡ ಎಂದು ಗುರುತಿಸಲಾಗಿದೆ. ತಜ್ಞ ಇಂಜಿನಿಯರ್​ಗಳ ಮೂಲಕ ಸದೃಢತೆ ಬಗ್ಗೆ ಪರೀಕ್ಷೆ ನಡೆಸಿ, ನಂತರವಷ್ಟೇ ತೆರವು ಮಾಡಲು ಪಾಲಿಕೆ ಚಿಂತಿಸಿದೆ.

ಸರ್ವೆಯಲ್ಲಿ ಪತ್ತೆಯಾಗಿರುವ ಶಿಥಿಲ ಕಟ್ಟಡಗಳ ವಿವರ:

ವಲಯ2018ರ ಸರ್ವೆಹೊಸ ಸರ್ವೆ
ದಕ್ಷಿಣ33103
ಪಶ್ಚಿಮ3495
ಪೂರ್ವ4667
ಮಹದೇವಪುರ324
ರಾಜ ರಾಜೇಶ್ವರಿ ನಗರ111
ಬೊಮ್ಮನಹಳ್ಳಿ09
ಯಲಹಂಕ6084
ದಾಸರಹಳ್ಳಿ 84
ಒಟ್ಟು185404

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.