ಬೆಂಗಳೂರು : ಡಿ. ಕೆ ಶಿವಕುಮಾರ್ ಮಗಳಿಗೆ ಇಡಿ ನೋಟಿಸ್ ಜಾರಿಗೊಳಿಸಿರುವ ಹಿನ್ನೆಲೆ ಡಿಕೆಶಿ ಪತ್ನಿ ಉಷಾ, ಪುತ್ರಿ ಐಶ್ವರ್ಯ ಸೇರಿದಂತೆ ಕುಟುಂಬಸ್ಥರು ದೆಹಲಿಗೆ ಪ್ರಯಾಣ ಮಾಡಿದ್ದಾರೆ. ನಾಳೆ ದೆಹಲಿಯ ಇಡಿ ಕಚೇರಿಗೆ ಮುಂಜಾನೆ 11ಗಂಟೆಗೆ ಹಾಜರಾಗುವಂತೆ ಐಶ್ವರ್ಯಗೆ ನಿನ್ನೆ ಸಮನ್ಸ್ ಜಾರಿ ಮಾಡಿತ್ತು. ಈ ಹಿನ್ನೆಲೆ ಸದಾಶಿವನಗರ ನಿವಾಸದಿಂದ ದೆಹಲಿಗೆ ಹೊರಟಿದ್ದಾರೆ.
ಇನ್ನು ಡಿಕೆ ಮನೆಯ ಸುತ್ತ ನಿರಾವ ಮೌನ ಆವರಿಸಿದೆ. ಡಿಕೆ ಬಂಧನವಾದ ನಂತ್ರ ಡಿಕೆ ಮನೆಯ ಸುತ್ತ ಕಾರ್ಯಕರ್ತರು ಬರುವುದನ್ನ ನಿಲ್ಲಿಸಿದ್ದಾರೆ. ಮತ್ತೊಂದೆಡೆ ಇಂದು ಡಿಕೆ ಕುಟುಂಬಸ್ಥರು ದೆಹಲಿಗೆ ತೆರಳುವ ಮುನ್ನ ಡಿಕೆಶಿ ನಿವಾಸಕ್ಕೆ ನಂದಿಕೇಶ್ವರ ಶ್ರೀಗಳು ಭೇಟಿ ನೀಡಿ ಡಿಕೆಶಿ ಪತ್ನಿ ಉಷಾ ಹಾಗೂ ಮಕ್ಕಳಿಗೆ ಧೈರ್ಯ ತುಂಬಿದ್ದಾರೆ.