ETV Bharat / state

ಇಂದಿನಿಂದ ದೇಶದ ಮೂರು ವಿಮಾನ ನಿಲ್ದಾಣದಲ್ಲಿ ಡಿಜಿಯಾತ್ರ ಸೇವೆ ಪ್ರಾರಂಭ..

ಕಾಗದ ರಹಿತ, ತಡೆ ರಹಿತ ಸುಗಮ ಪ್ರಯಾಣಕ್ಕಾಗಿ ಇಂದಿನಿಂದ ದೇಶದ 3 ಏರ್​ಪೋರ್ಟ್​ಗಳಲ್ಲಿ ನೂತನ ತಂತ್ರಜ್ಞಾನದಿಂದ ಫೇಸ್ ರೆಕಗ್ನಿಷನ್ ವ್ಯವಸ್ಥೆ ಜಾರಿ ಮಾಡಿದೆ.

digiyatra services launched in indian airports
ಇಂದಿನಿಂದ ದೇಶದ ಮೂರು ವಿಮಾನ ನಿಲ್ದಾಣದಲ್ಲಿ ಡಿಜಿಯಾತ್ರ ಸೇವೆ ಪ್ರಾರಂಭ...
author img

By

Published : Dec 1, 2022, 10:30 PM IST

ದೇವನಹಳ್ಳಿ(ಬೆಂಗಳೂರು): ಮುಖವೇ ಬೋರ್ಡಿಂಗ್ ಪಾಸ್​​​ನಂತೆ ಬಳಸುವ ಹೊಸ ವ್ಯವಸ್ಥೆ ಇಂದಿನಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿಂದ ದೇಶದ ಮೂರು ಏರ್ ಪೋರ್ಟ್​ಗಳಲ್ಲಿ ಜಾರಿಯಾಗಿದೆ. ನೂತನ ತಂತ್ರಜ್ಞಾನದಿಂದ ಕಾಗದ ರಹಿತ, ತಡೆ ರಹಿತ ಸುಗಮಬವಾಗಿ ಪ್ರಯಾಣಿಸಬಹುದಾಗಿದೆ.

ಮುಖಚಹರೆಯನ್ನೇ ಬಯೋಮೆಟ್ರಿಕ್ ಗುರುತಾಗಿ ಬಳಸಿಕೊಳ್ಳಲು ಅಧಿಕೃತವಾಗಿ ಡಿಜಿಯಾತ್ರಾವನ್ನ ಕೇಂದ್ರ ಸರ್ಕಾರ ಆರಂಭಿಸಿದೆ, ದೆಹಲಿ ವಿಮಾನ ನಿಲ್ದಾಣದಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ‘ಡಿಜಿಯಾತ್ರಾ’ ಅನಾವರಣಗೊಳಿಸಿದರು.

ಪ್ರಯಾಣಿಕರು ಮೊದಲು ಡಿಜಿಯಾತ್ರಾ ಮೊಬೈಲ್ ಅಪ್ಲಿಕೇಷನ್ ಬಳಸಿಕೊಂಡು ಆಧಾರ್ ಸಂಖ್ಯೆ ಮತ್ತು ಸೆಲ್ಪಿ ಪೋಟೋವನ್ನು ನೊಂದಾಯಿಸಬೇಕು, ಬಳಿಕ ವಿಮಾನಯಾನ ಸಚಿವಾಲಯದ ವೆಬ್​ಸೈಟ್​ನಲ್ಲಿ ಗುರುತಿನ ದಾಖಲೆಯನ್ನು ನೀಡಿ ನೋಂದಾಯಿಸಿಕೊಳ್ಳಬೇಕು.

ಮುಖಚಹರೆಯೇ ಬೋರ್ಡಿಂಗ್ ಪಾಸ್ : ಮೊದಲ ಬಾರಿಗೆ ಏರ್​ಪೋರ್ಟ್​ಗೆ ಬಂದಾಗ ಮುಖ ಚಹರೆ ಸಂಗ್ರಹಿಸಲಾಗುತ್ತದೆ, ಬಳಿಕ ಯಾವುದೇ ಸಮಯದಲ್ಲಿ ಪ್ರಯಾಣಿಸಲು ಏರ್​ಪೋರ್ಟ್​ಗೆ ಬಂದಾಗ ಮುಖಚಹರೆಯೇ ಬೋರ್ಡಿಂಗ್ ಪಾಸ್ ಆಗುತ್ತದೆ.

ಸರದಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ: ಮುಖ ಚಹರೆಯೇ ಬೋರ್ಡಿಂಗ್ ಪಾಸ್ ಆಗಿರುವುದರಿಂದ ಪ್ರಯಾಣಿಕರು ಏರ್​ಪೋರ್ಟ್​ನ ಭದ್ರತಾ ತಪಾಸಣೆ ಮತ್ತು ಚೆಕ್ಕಿಂಗ್ ಪಾಯಿಂಟ್​ಗಳಲ್ಲಿ ಸರದಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯಬೇಕಿಲ್ಲ, ನೂತನ ತಂತ್ರಜ್ಞಾನ ಕಾಗದ ರಹಿತ ಮತ್ತು ತಡೆ ರಹಿತ ಸುಗಮ ಪ್ರಯಾಣದ ಅನುಭವ ನೀಡುತ್ತೆ.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣ, ವಾರಾಣಸಿ ವಿಮಾನ ನಿಲ್ದಾಣಗಳಲ್ಲಿ ಇಂದಿನಿಂದ ಡಿಜಿಯಾತ್ರಾ ಜಾರಿಗೆ ಬಂದಿದೆ.

ದೇಶಿಯ ಪ್ರಯಾಣಿಕರಿಗೆ ಲಭ್ಯ: 2023ರ ಮಾರ್ಚ್ ಅಂತ್ಯದ ವೇಳೆಗೆ ಹೈದರಾಬಾದ್. ಕೋಲ್ಕತ್ತಾ, ಪುಣೆ ಮತ್ತು ವಿಜಯವಾಡದಲ್ಲಿ ಜಾರಿಗೆ ಬರಲಿದೆ. ಸದ್ಯ ಈ ವ್ಯವಸ್ಥೆ ದೇಶೀಯ ಪ್ರಯಾಣಿಕರಿಗೆ ಮಾತ್ರ ಲಭ್ಯವಿದೆ ಎಂದು ಡಿಜಿಸಿಎ ಮೂಲಗಳು ತಿಳಿಸಿದೆ.

ಇದನ್ನೂ ಓದಿ: ಸ್ಕಿಲ್‌ ಕನೆಕ್ಟ್‌ ಪೋರ್ಟಲ್‌ಗೆ ಚಾಲನೆ, ಉದ್ಯೋಗ ಸೃಷ್ಟಿಗೆ 5 ಒಡಂಬಡಿಕೆ : ಸುಶಾಸನ ಮಾಸಾಚರಣೆಗೆ ಡಾ ಸಿ ಎನ್ ಅಶ್ವತ್ಥ್​ ನಾರಾಯಣ್ ಚಾಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.