ಬೆಂಗಳೂರು: ಯಡಿಯೂರಪ್ಪನವರ ಹೆಸರಿನಲ್ಲಿ ಒಂದು ಅಕ್ಷರ ಬದಲಾವಣೆ ಮಾಡಿಕೊಂಡಿದ್ದಾರೆ ಎಂಬ ವಿಷಯ ಕುತೂಹಲ ಮೂಡಿಸಿದೆ.
ಈವರೆಗೂ ಅವರ ಹೆಸರು yeddyurappa ಎಂದಿದ್ದು, ಇದೀಗ ಸರ್ಕಾರ ರಚನೆಗೆ ಅವಕಾಶ ಕೋರಿ ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ yediyurappa ಎಂದು ನಮೂದಿಸಲಾಗಿದೆ. ಈ ಹಿಂದೆ ಸಹ ಸಿಎಂ ಆಗಿದ್ದ ವೇಳೆ ಅವರು ಒಂದು ಅಕ್ಷರ ಬದಲಿಸಿಕೊಂಡಿದ್ದರು.
ಸಂಖ್ಯಾಶಾಸ್ತ್ರ ಜ್ಯೋತಿಷಿಗಳ ಸಲಹೆಯಂತೆ ಯಡಿಯೂರಪ್ಪನವರು ‘D’ ಬದಲು ‘I’ ಬಳಸಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ. ರಾಜಭವನಕ್ಕೆ ನೀಡಿರುವ ಪತ್ರದಲ್ಲಿ ಯಡಿಯೂರಪ್ಪನವರ ಹೆಸರಿನಲ್ಲಿ ಒಂದು ಅಕ್ಷರ ಬದಲಾವಣೆ ಮಾಡಿಕೊಂಡಿರುವುದು ಕಂಡುಬಂದಿದ್ದು ಕುತೂಹಲಕ್ಕೆ ಕಾರಣವಾಗಿದೆ.