ETV Bharat / state

ಶಾಸಕರ ರಾಜೀನಾಮೆ ವಿಚಾರ ಸಿದ್ದರಾಮಯ್ಯಗೆ ಮೊದಲೇ ತಿಳಿದಿತ್ತಾ!?

ಸರ್ಕಾರ ಉಳಿಸಿಕೊಳ್ಳಲಾಗದ ಹತಾಶೆಗೆ ತಲುಪಿರುವ ಕಾಂಗ್ರೆಸ್ ನಾಯಕರು ಅನಿವಾರ್ಯವಾಗಿ ಪ್ರತಿಪಕ್ಷದಲ್ಲಿ ಕೂರಲು ಸಿದ್ಧರಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ನಿಟ್ಟಿನಲ್ಲಿಯೇ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ನಗರದಲ್ಲಿಯೇ ಇರಲಿ ಎನ್ನುವ ಉದ್ದೇಶಕ್ಕೆ ಸಿದ್ದರಾಮಯ್ಯ ಸೂಚನೆ ನೀಡಿದ್ದರು ಎನ್ನಲಾಗಿದೆ.

ಸಿದ್ದರಾಮಯ್ಯ
author img

By

Published : Jul 6, 2019, 6:46 PM IST

ಬೆಂಗಳೂರು: ಇಂದು ಶಾಸಕರು ರಾಜೀನಾಮೆ ನೀಡುವ ವಿಚಾರ ಮಾಜಿ ಸಿಎಂ ಸಿದ್ದರಾಮಯ್ಯಗೆ ಮೊದಲೇ ತಿಳಿದಿತ್ತು ಎನ್ನುವ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಶಾಸಕರ ರಾಜೀನಾಮೆ ಬಗ್ಗೆ ನಿನ್ನೆಯೇ ಕಾಂಗ್ರೆಸ್ ನಾಯಕರಿಗೆ ಮಾಹಿತಿ ಇತ್ತು. ನಿನ್ನೆ ರಾತ್ರಿ ವಿಮಾನದಲ್ಲಿ ಬೀದರ್​ಗೆ ತೆರಳಬೇಕಿದ್ದ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರನ್ನು ಸಿದ್ದರಾಮಯ್ಯ ಇದೇ ಕಾರಣ ನೀಡಿ ಉಳಿಸಿಕೊಂಡಿದ್ದರು ಎನ್ನಲಾಗಿದೆ.

ಇಂದು ಬೆಂಗಳೂರಲ್ಲಿಯೇ ಉಳಿದುಕೊಳ್ಳುವಂತೆ ಖಂಡ್ರೆಗೆ ಸೂಚನೆ ನೀಡಿದ್ದ ಸಿದ್ದರಾಮಯ್ಯಗೆ ಹೇಗೆ ಈ ವಿಚಾರ ತಿಳಿದಿತ್ತು? ಇದನ್ನು ತಡೆಯಲು ಅವರು ಯಾಕೆ ಪ್ರಯತ್ನಿಸಿಲ್ಲ ಎನ್ನುವುದು ಕುತೂಹಲ ಮೂಡಿಸಿದೆ. ಶಾಸಕರ ರಾಜೀನಾಮೆ ಬಗ್ಗೆ ಅನುಮಾನ ಬಂದ ಹಿನ್ನೆಲೆ ಸಿದ್ದು ಸೂಚನೆ ನೀಡಿದ್ದರು ಎನ್ನಲಾಗುತ್ತಿದೆ.

ರಾಜೀನಾಮೆ ಸಂಖ್ಯೆ 22 ಕ್ಕೇರುವ ಸಾಧ್ಯತೆ!

ಈಗ ನೀಡಿರುವ 11 ಶಾಸಕರು ಸೇರಿದಂತೆ ಒಟ್ಟು 22 ಮಂದಿ ರಾಜೀನಾಮೆ ನೀಡಲಿದ್ದಾರೆ ಎಂಬ ಖಚಿತ ಮಾಹಿತಿ ಕಾಂಗ್ರೆಸ್ ಪಕ್ಷಕ್ಕೆ ಲಭಿಸಿದೆ ಎನ್ನಲಾಗಿದೆ.

Intro:newsBody:ಶಾಸಕರ ರಾಜಿನಾಮೆ ವಿಚಾರ ಸಿದ್ದರಾಮಯ್ಯಗೆ ಮೊದಲೇ ತಿಳಿದಿತ್ತಾ?! 22ಕ್ಕೆ ಏರಲಿದೆ ರಾಜೀನಾಮೆ ಸಾಧ್ಯತೆ

ಬೆಂಗಳೂರು: ಇಂದು ಶಾಸಕರು ರಾಜೀನಾಮೆ ನೀಡುವ ವಿಚಾರ ಮಾಜಿ ಸಿಎಂ ಸಿದ್ದರಾಮಯ್ಯಗೆ ಮೊದಲೇ ತಿಳಿದಿತ್ತು ಎಂಬ ಮಾಹಿತಿ ಲಭಿಸಿದೆ.
ಶಾಸಕರ ರಾಜೀನಾಮೆ ಬಗ್ಗೆ ನಿನ್ನೆಯೇ ಕಾಂಗ್ರೆಸ್ ನಾಯಕರಿಗೆ ಮಾಹಿತಿ ಇತ್ತು. ನಿನ್ನೆ ರಾತ್ರಿ ವಿಮಾನದಲ್ಲಿ ಬೀದರ್ ಗೆ ತೆರಳಬೇಕಿದ್ದ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಅವರನ್ನ ಸಿದ್ದರಾಮಯ್ಯ ಇದೇ ಕಾರಣ ನೀಡಿ ಪಡೆದಿದ್ದರು ಎನ್ನಲಾಗಿದೆ.
ಈಶ್ವರ್ ಖಂಡ್ರೆಗೆ ಪ್ರಯಾಣ ಕ್ಯಾನ್ಸಲ್ ಮಾಡುವಂತೆ ಸೂಚಿಸಿದ್ದ ಸಿದ್ದರಾಮಯ್ಯಗೆ ಶಾಸಕರ ರಾಜೀನಾಮೆ ವಿಚಾರ ಹೇಗೆ ತಿಳಿದಿತ್ತು. ಇಂದು ಬೆಂಗಳೂರಲ್ಲಿಯೇ ಉಳಿದುಕೊಳ್ಳುವಂತೆ ಖಂಡ್ರೆಗೆ ಸೂಚನೆ ನೀಡಿದ್ದ ಸಿದ್ದರಾಮಯ್ಯ ಗೆ ಹೇಗೆ ಈ ವಿಚಾರ ತಿಳಿದಿತ್ತು, ಇದನ್ನು ತಡೆಯಲು ಅವರು ಯಾಕೆ ಪ್ರಯತ್ನಿಸಿಲ್ಲ ಎನ್ನುವುದು ಕುತೂಹಲ ಮೂಡಿಸಿದೆ.
ಶಾಸಕರ ರಾಜೀನಾಮೆ ಬಗ್ಗೆ ಅನುಮಾನ ಬಂದ ಹಿನ್ನೆಲೆ ಸಿದ್ದು ಸೂಚನೆ ನೀಡಿದ್ದರು ಎನ್ನುವುದು ಸಾಬೀತಾಗಿದೆ.
22 ಮಂದಿ ರಾಜೀನಾಮೆ
ಕಾಂಗ್ರೆಸ್ ಮೂಲಗಳು ಶಾಸಕರ ರಾಜೀನಾಮೆ ಯತ್ನವನ್ನ ತಡೆಯಲು ಸಾಕಷ್ಟು ಪ್ರಯತ್ನಿಸಿದ್ದರು. ಆದರೆ ವಿಫಲವಾದ ಹಿನ್ನೆಲೆ ಕೈ ಬಿಟ್ಟಿದ್ದರು ಎಂದು ಹೇಳಲಾಗುತ್ತಿದ್ದು. ಈಗ ನೀಡಿರುವ 11 ಶಾಸಕರು ಸೇರಿದಂತೆ ಒಟ್ಟು 22 ಮಂದಿ ರಾಜೀನಾಮೆ ನೀಡಲಿದ್ದಾರೆ ಎಂಬ ಖಚಿತ ಮಾಹಿತಿ ಕಾಂಗ್ರೆಸ್ ಪಕ್ಷಕ್ಕೆ ಲಭಿಸಿದೆ ಎನ್ನಲಾಗಿದೆ.
ಸರ್ಕಾರ ಉಳಿಸಿಕೊಳ್ಳಲಾಗದ ಹತಾಶೆಗೆ ತಲುಪಿರುವ ಕಾಂಗ್ರೆಸ್ ನಾಯಕರು ಅನಿವಾರ್ಯವಾಗಿ ಪ್ರತಿಪಕ್ಷದಲ್ಲಿ ಕೂರಲು ಸಿದ್ದರಾಗುತ್ತಿದ್ದಾರೆ ಎಂಬ ಮಾಹಿತಿಯಿದ್ದು ಈ ನಿಟ್ಟಿನಲ್ಲಿಯೇ ಕಾರ್ಯಾಧ್ಯಕ್ಷರಾದ ಈಶ್ವರ್ ಕಂಡ್ರೆ ಆದರೂ ನಗರದಲ್ಲಿ ಈ ಸಂದರ್ಭ ಇರಲಿ ಎನ್ನುವ ಉದ್ದೇಶಕ್ಕೆ ಸಿದ್ದರಾಮಯ್ಯ ಸೂಚನೆ ನೀಡಿದ್ದರು ಎನ್ನಲಾಗಿದೆ.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.