ETV Bharat / state

ಕೋವಿಡ್ ನಿಂದ ಗುಣಮುಖರಾದವರಲ್ಲಿ ಮಧುಮೇಹ ಉಲ್ಬಣ, ನಿಯಮಿತ ಪರೀಕ್ಷೆ ಅಗತ್ಯ: ಡಾ. ಸುದರ್ಶನ್ - Diabetes Increases in Cured Persons from Kovid- 19

ವ್ಯಕ್ತಿಯು ಕೋವಿಡ್ 19 ಸೋಂಕಿಗೆ ಒಳಗಾದ ನಂತರ ಮಧುಮೇಹವು ಉಲ್ಬಣಗೊಳ್ಳಬಹುದು ಎಂದು ಇತ್ತೀಚಿನ ವಿವಿಧ ಅಧ್ಯಯನಗಳು ತೋರಿಸಿವೆ ಎಂದು ಡಾ. ಎಸ್. ಸುದರ್ಶನ್ ಹೇಳಿದ್ದಾರೆ. ಮಧ್ಯಮ ಮತ್ತು ತೀವ್ರವಾದ ಕೋವಿಡ್​ಗೆ ಚಿಕಿತ್ಸೆ ನೀಡುವಾಗ ಸ್ಟೀರಾಯ್ಡ್​​ಗಳ ಬಳಕೆಯು ಇದಕ್ಕೆ ಕಾರಣವಾಗಿರಬಹುದು ಎಂದು ವೈದ್ಯರು ಹೇಳುತ್ತಾರೆ.

Regular Examination is necessary to Prevent the Next Wave: Dr. Sudarshan
ಡಾ. ಸುದರ್ಶನ್
author img

By

Published : Apr 17, 2022, 1:05 PM IST

ಬೆಂಗಳೂರು: ಸಾಮಾನ್ಯ ಜನಸಂಖ್ಯೆಗೆ ಹೋಲಿಸಿದರೆ, ಒಮ್ಮೆ ಎಸ್ಎಆರ್​​ಎಸ್ ಸಿಓವಿ-2 ವೈರಸ್ ಸೋಂಕಿಗೆ ಒಳಗಾದವರಲ್ಲಿ ಮಧುಮೇಹ ಹೊಂದಿರುವ ಜನರು ತುಲನಾತ್ಮಕವಾಗಿ ತೀವ್ರ ಸೋಂಕನ್ನು ಹೊಂದಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ವ್ಯಕ್ತಿಯು ಕೋವಿಡ್ 19 ಸೋಂಕಿಗೆ ಒಳಗಾದ ನಂತರ ಮಧುಮೇಹವು ಉಲ್ಬಣಗೊಳ್ಳಬಹುದು ಎಂದು ಇತ್ತೀಚಿನ ವಿವಿಧ ಅಧ್ಯಯನಗಳು ತೋರಿಸಿವೆಂದು ನಗರದ ಹೆಸರಾಂತ ಕನ್ಸಲ್ಟೆಂಟ್ ಫಿಜಿಷಿಯನ್ ಡಾ. ಎಸ್. ಸುದರ್ಶನ್ ಮಾಹಿತಿ ನೀಡಿದ್ದಾರೆ.

ಮಧ್ಯಮ ಮತ್ತು ತೀವ್ರವಾದ ಕೋವಿಡ್​ಗೆ ಚಿಕಿತ್ಸೆ ನೀಡುವಾಗ ಸ್ಟೀರಾಯ್ಡ್​​ಗಳ ಬಳಕೆಯು ಇದಕ್ಕೆ ಕಾರಣವಾಗಿರಬಹುದು. ಸ್ವತಃ ರೋಗವು ಮಧುಮೇಹ ನಿಯಂತ್ರಣವನ್ನು ಹದಗೆಡಿಸುವ ಕಾರಣದಿಂದಾಗಿಯೂ ಇರಬಹುದು. ಸಾಂಕ್ರಾಮಿಕ ರೋಗದ ಮುಂದಿನ ಅಲೆಯ ಕೋವಿಡ್ -19 ನಿಂದಾಗಿ ಉಂಟಾಗುವ ತೊಡಕುಗಳನ್ನು ತಪ್ಪಿಸಲು ಮಧುಮೇಹವನ್ನು ಚೆನ್ನಾಗಿ ನಿರ್ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಹೃದ್ರೋಗದ ಅಪಾಯ, ಮಾನಸಿಕ ಖಿನ್ನತೆ: ಒಂದಕ್ಕೊಂದು ಸಂಬಂಧವಿದೆಯೇ?

ರಕ್ತದಲ್ಲಿನ ಸಕ್ಕರೆ ಅಂಶವನ್ನು ನಾವು ಹೇಗೆ ಮತ್ತು ಯಾವಾಗ ಪರೀಕ್ಷಿಸಿಕೊಳ್ಳಬೇಕು?: ಮೊದಲ ಪ್ರಮುಖ ಕ್ರಮವೆಂದರೆ ಆರೋಗ್ಯ ತಪಾಸಣೆ. ಪ್ರಾಥಮಿಕ ಆರೈಕೆ ವೈದ್ಯರ ಚಿಕಿತ್ಸಾಲಯ/ತಪಾಸಣಾ ಕೇಂದ್ರದಲ್ಲಿ ಉತ್ತಮವಾಗಿ ಪರೀಕ್ಷೆ ಮಾಡಲಾಗುತ್ತದೆ. ಸಕ್ಕರೆ ಅಂಶಗಳನ್ನು ಪರೀಕ್ಷಿಸಲು ರಕ್ತ ಪರೀಕ್ಷೆ ಬಾಕಿಯಿದ್ದರೆ, ಅದನ್ನು ಸಕಾಲದಲ್ಲಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಏರಿಕೆಯಾದ ಸಕ್ಕರೆ ಅಂಶ, ಲಕ್ಷಣರಹಿತವಾಗಿರಬಹುದು. ಆದರೆ ಅದೇ ಸಮಯದಲ್ಲಿ ಆರೋಗ್ಯಕ್ಕೆ ಹಾನಿಕಾರಕ ಆಗಲೂಬಹುದು. ರಕ್ತದಲ್ಲಿನ ಸಕ್ಕರೆ ಅಂಶವನ್ನು ಪರೀಕ್ಷಿಸುವ ಆವರ್ತನವು ಮಧುಮೇಹದ ಸ್ಥಿತಿಯನ್ನು ಅವಲಂಬಿಸಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ರಕ್ತದಲ್ಲಿನ ಸಕ್ಕರೆಯನ್ನು 2 ತಿಂಗಳಿಗೊಮ್ಮೆ ಅಥವಾ ವಾರಕ್ಕೊಮ್ಮೆ ಪರೀಕ್ಷಿಸಬೇಕಾಗಬಹುದು. ಕೆಲವೊಮ್ಮೆ ಅನೇಕ ಬಾರಿ ವಿಶೇಷವಾಗಿ ಅನೇಕ ಇನ್ಸುಲಿನ್ ಚುಚ್ಚುಮದ್ದುಗಳನ್ನು ತೆಗೆದುಕೊಳ್ಳುತ್ತಿರುವಾಗ ಆಗಾಗ್ಗೆ ಪರೀಕ್ಷಿಸುವುದು ಉತ್ತಮ ಎನ್ನುತ್ತಾರೆ ಡಾ. ಸುದರ್ಶನ್.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.