ಬೆಂಗಳೂರು: ಸ್ಯಾಂಡಲ್ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ 30ರ ಸಂಭ್ರಮ. ಪೊಗರಿನ ಹುಡುಗ 30ನೇ ವಸಂತಕ್ಕೆ ಕಾಲಿಟ್ಟಿದ್ದು, ಸಾವಿರಾರು ಅಭಿಮಾನಿಗಳ ಜೊತೆ ಭರ್ಜರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡರು.
ಮನೆ ಮುಂದೆ ನೆರೆದಿದ್ದ ಸಾವಿರಾರು ಅಭಿಮಾನಿಗಳ ಜೊತೆ ಧ್ರುವ ಹುಟ್ಟುಹಬ್ಬ ಆಚರಿಸಿಕೊಂಡರು. ಬಳಿಕ ನೆಚ್ಚಿನ ನಟನ ಜೊತೆ ಫ್ಯಾನ್ಸ್ ಫೋಟೋ ಕ್ಲಿಕ್ಕಿಸಿಕೊಂಡರು.
ಇದೇ ವೇಳೆ ಮಾತನಾಡಿದ ಧ್ರುವ ಸರ್ಜಾ, ಪೊಗರು ಚಿತ್ರ ಶೇ.35 ರಷ್ಟು ಚಿತ್ರೀಕರಣ ಮುಗಿಸಿದೆ ಎಂದು ತಿಳಿಸಿದರು. ಒಂದು ವರ್ಷದಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಅ.24 ರಂದು ಸಂಪೂರ್ಣ ಡೈಲಾಗ್ಗಳನ್ನು ಹೊಂದಿರುವ ಟೀಸರ್ ರಿಲೀಸ್ ಆಗಲಿದೆ.
ಜೊತೆಗೆ ನ.24 , 25 ರಂದು ಹೊಸ ಜೀವನಕ್ಕೆ (ವಿವಾಹ) ಕಾಲಿಡುವ ಸುದ್ದಿಯನ್ನು ಸಹ ಧ್ರುವ ಸರ್ಜಾ ಹಂಚಿಕೊಂಡರು.