ಬೆಂಗಳೂರು: ಮಾಜಿ ಸಿಎಂ ಧರ್ಮಸಿಂಗ್ ಸಂಬಂಧಿ ಸಿದ್ದಾರ್ಥ್ ಕೊಲೆ ಪ್ರಕರಣ ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ಳುತ್ತಿದೆ.
ಪ್ರಕರಣದ ಬೆನ್ನುಹತ್ತಿದ ಪೊಲೀಸರಿಗೆ ಹಲವು ಆಯಾಮಗಳಲ್ಲಿ ಕೃತ್ಯದ ಅಸಲಿ ಸತ್ಯ ಬೆಳಕಿಗೆ ಬರುತ್ತಿದ್ದು. ಹತ್ಯೆಗೆ ಕಾರಣವಾದ ಆಸ್ತಿಯ ಮೊತ್ತ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಸಿದ್ಧಾರ್ಥ್ ಕೊಲೆಗೆ ಕಾರಣವಾಯಿತೇ 500 ಕೋಟಿ ಆಸ್ತಿ?
ಧರ್ಮಸಿಂಗ್ ಸಂಬಂಧಿ ಸಿದ್ಧಾರ್ಥ್ ಕೊಲೆ ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಕೊಲೆಯ ಹಿಂದಿನ ಕಾರಣ ಆಸ್ತಿಗಾಗಿ ಎನ್ನುವುದು ದೃಢಪಟ್ಟಿದೆ. ಸಿದ್ಧಾರ್ಥ್ ತಂದೆಯ ಆಸ್ತಿಯ ಒಟ್ಟು ಮೌಲ್ಯ ಸುಮಾರು 500 ಕೋಟಿ ರೂ. ಎಂಬುವುದು ಪೊಲೀಸರಿಗೆ ತಿಳಿದುಬಂದಿದೆ.
ಚಂಡಿಗಢ, ಚೆನ್ನೈ, ಬೆಂಗಳೂರು ಸೇರಿದಂತೆ ಹಲವು ಕಡೆ ದೇವೇಂದ್ರ ತನ್ನ ಮಗ ಸಿದ್ಧಾರ್ಥ್ಗಾಗಿ ಆಸ್ತಿ ಮಾಡಿಟ್ಟಿದ್ದ. ಈ ಆಸ್ತಿಗಳ ಮೇಲೆ ಕಣ್ಣು ಹಾಕಿದ್ದ ಇಂದು ಚವ್ಹಾಣ್ ಹತ್ಯೆ ನಡೆಸಿ ಆಸ್ತಿ ಲೂಟಿ ಮಾಡುವ ಸಂಚು ಹೊಂದಿದ್ದಳು.
ಪ್ರಕರಣಕ್ಕೆ ರೋಚಕತೆ ಕೊಟ್ಟ ಮೂರು ತಿರುವು
ಮಲತಾಯಿ ಹೊಂಚಿನ 500 ಕೋಟಿ ಮೌಲ್ಯದ ಆಸ್ತಿಯ ಷಡ್ಯಂತರ: ಮಲತಾಯಿ ಇಂದು ಚವ್ಹಾಣ್ ಮೇಲೆ ಅನುಮಾನ ಹೊಂದಿದ್ದ ಪೊಲೀಸರು ಆಕೆಯನ್ನು ಬಂಧಿಸಿದ್ದರು. ಆ ಬಳಿಕ ವಿಚಾರಣೆ ವೇಳೆ ಶ್ಯಾಮ್ ಜೊತೆ ಈಕೆ ಸಂಪರ್ಕದಲ್ಲಿ ಇದ್ದಳು ಎನ್ನುವ ವಿಚಾರ ಬಹಿರಂಗವಾಗಿತ್ತು. ಈಗಾಗಲೇ ಶ್ಯಾಮ್ ಕೃತ್ಯ ಎಸಗಿದ ಬಳಿಕ ಬಂಧನ ಭೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚವ್ಹಾಣ್ ಸದ್ಯ ವಿಚಾರಣೆ ಎದುರಿಸುತಿದ್ದು, ಆಕೆಯಿಂದಲೇ ಈ ಕೃತ್ಯ ನಡೆದಿರುವುದು ತನಿಖೆ ವೇಳೆ ಬಯಲಾಗಿದೆ.
ಮಲತಾಯಿ ಇಂದು ಹಾಗೂ ಶ್ಯಾಮ್ ಜೊತೆ ಸಂಬಂಧ
500 ಕೋಟಿ ರೂ. ರಹಸ್ಯ ಬಯಲಿಗೆಳೆದ ಪೊಲೀಸರು ಮಲತಾಯಿಯ ಷಡ್ಯಂತರವನ್ನು ಪತ್ತೆಹಚ್ಚಿದ್ದರು. ಇದಾದ ಬಳಿಕ ಹಲವು ಮಾಹಿತಿಗಳನ್ನು ಕಲೆಹಾಕಿದ ಪೊಲೀಸರಿಗೆ ಸಿದ್ಧಾರ್ಥ್ ಕೊಲೆ ಮಾಡಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಶ್ಯಾಮ್ ಹಾಗೂ ಇಂದು ಚವ್ಹಾಣ್ ಸಂಬಂಧದ ಬಗ್ಗೆ ಕೆಲ ಮಾಹಿತಿ ಸಂಗ್ರಹಿಸಿದ್ದಾರೆ.
ಪೊಲೀಸರಿಗೆ ಪ್ರಕರಣದ ತನಿಖೆ ವೇಳೆ ಇಬ್ಬರ ನಡುವೆ ಸಂಬಂಧ ಇತ್ತು ಎನ್ನುವ ಮಾಹಿತಿ ದೊರೆತಿದ್ದು, ಕೃತ್ಯದ ಬಳಿಕ ಆಸ್ತಿಯನ್ನು ಲೂಟಿ ಮಾಡಿ ದೇವೆಂದ್ರನನ್ನು ಬಿಟ್ಟು ಇಂದು, ಶ್ಯಾಮ್ ಜೊತೆ ಓಡಿ ಹೊಗಲು ನಿರ್ಧರಿಸಿದ್ದಳು ಎನ್ನಲಾಗುತ್ತಿದೆ.
ಕೊಲೆಯಾದ ಸಿದ್ಧಾರ್ಥ್ನ ತಂದೆ ಪೊಲೀಸರ ವಶಕ್ಕೆ
ಮತ್ತೊಂದೆಡೆ ಕೊಲೆಯ ಅಸಲಿ ಸತ್ಯ ಬಯಲಿಗೆಳೆದ ಪೊಲೀಸರಿಗೆ ಕೆಲವು ಗೊಂದಲಕ್ಕೆ ಕಾರಣ ಮಾಡಿಕೊಟ್ಟಿರುವುದು, ಕೊಲೆಯಾದ ಸಿದ್ಧಾರ್ಥ್ ತಂದೆಯ ಹೇಳಿಕೆಗಳು. ಮಗನ ಕೊಲೆಯ ಸಂಬಂಧಿತ ವಿಚಾರಗಳಲ್ಲಿ ಆತ ಸಾಕಷ್ಟು ದ್ವಂದ್ವ ಹೇಳಿಕೆಗಳನ್ನು ನೀಡುತಿದ್ದ. ಕೊಲೆ ನಡೆಯುವ ಮೊದಲೇ ತಂದೆ ದೇವೇಂದ್ರನಿಗೆ ಈ ಬಗ್ಗೆ ಮಾಹಿತಿ ಇತ್ತಾ ಎನ್ನುಉವ ಅನುಮಾನು ಇದೀಗ ಶುರುವಾಗಿದೆ. ಈ ಹಿನ್ನಲೆಯಲ್ಲಿ ಸಿದ್ಧಾರ್ಥ್ ತಂದೆ ದೇವೇಂದ್ರನನ್ನು ವಶಕ್ಕೆ ಪಡೆದಿರುವ ಪೊಲೀಸರು ಆತನ ವಿಚಾರಣೆ ನಡೆಸುತಿದ್ದಾರೆ.
ಇದನ್ನೂ ಓದಿ: ಕುಂದಾಪುರ ಚರ್ಚ್ ರಸ್ತೆಯಲ್ಲಿ ಬೈಕ್-ಕಾರು ಅಪಘಾತ: ಇಬ್ಬರ ಸಾವು
ಒಟ್ಟಿನಲ್ಲಿ 500 ಕೋಟಿ ರೂ. ಮೌಲ್ಯದ ಆಸ್ತಿ ಹಿಂದೆ ಬಿದ್ದವರಿಂದ ನಡೆದ ಕೊಲೆ ಎಂದು ಹಲವು ಅನುಮಾನಗಳು ಹುಟ್ಟಿಕೊಂಡಿದೆ. ತನಿಖೆ ಕೈಗೊಂಡ ಪೊಲೀಸರ ಪ್ರತಿ ಹಂತದ ತನಿಖೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಸದ್ಯ ಈ ಪ್ರಕರಣದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿ ಹೊರಬರುವ ಲಕ್ಷಣಗಳಿವೆ. ಕೊಲೆಯ ಹಿಂದೆ ಯಾರೆಲ್ಲಾ ಭಾಗಿಯಾಗಿದ್ದರು ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.