ETV Bharat / state

ಇಂದಿನಿಂದ ಅಗತ್ಯ ವಸ್ತುಗಳ ಖರೀದಿಗೆ ಖಾಸಗಿ ವಾಹನ ಬಳಕೆಗೆ ಅನುಮತಿ: ಡಿಜಿಪಿ ಪ್ರವೀಣ್ ಸೂದ್​ - ಲಾಕ್​ಡೌನ್​ ನಿಯಮ ಸರಳ

ದಿನಸಿ‌ ಪದಾರ್ಥ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗಾಗಿ ಸ್ಥಳೀಯ ಮಾರುಕಟ್ಟೆಗೆ ಹೋಗಿ ಬರಲು ತಮ್ಮ ಸ್ವಂತ ವಾಹನ ಬಳಸಬಹುದು. ಕೊಟ್ಟಿರುವ ಅನುಮತಿ ದುರುಪಯೋಗ ಮಾಡಿಕೊಂಡರೆ ಕಾನೂನು ಕ್ರಮ ಕೈಗೊಳ್ಳಬಹುದು.ಸಾಧ್ಯವಾದಷ್ಟು ಹತ್ತಿರವಿರುವ ಅಂಗಡಿ ಹೋಗಿ ಅಗತ್ಯ ವಸ್ತುಗಳನ್ನು‌ ಬೆಳಗ್ಗೆ 6 ರಿಂದ 10ರವರೆಗೆ ಖರೀದಿಸಲು ಅನುಮತಿ ನೀಡಲಾಗಿದೆ‌ ಎಂದು ರಾಜ್ಯ ಪೊಲೀಸ್ ಇಲಾಖೆ‌ ಮಹಾನಿರ್ದೇಶಕ ಪ್ರವೀಣ್ ಸೂದ್ ಟ್ವೀಟ್ ಮಾಡಿದ್ದಾರೆ.

ಸಾಮುನು ಖರೀದಿ
ಸಾಮುನು ಖರೀದಿ
author img

By

Published : May 11, 2021, 2:30 AM IST

ಬೆಂಗಳೂರು: ಅಗತ್ಯ ವಸ್ತುಗಳ ಖರೀದಿಗಾಗಿ ವಾಹನ ಬಳಸಬಾರದು ಎಂದು‌ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಸಾರ್ವಜನಿಕ ವಲಯದಿಂದ‌ ಸಾಕಷ್ಟು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹಿಂಪಡೆದಿರುವ ಸರ್ಕಾರ ಇಂದಿನಿಂದ ಬೈಕ್ ಆಥವಾ ಸ್ವಂತ ವಾಹನ ಓಡಿಸಲು ಅನುಮತಿ ನೀಡಿದೆ.

ರಾಜ್ಯ ಪೊಲೀಸ್ ಇಲಾಖೆ‌ ಮಹಾನಿರ್ದೇಶಕ ಪ್ರವೀಣ್ ಸೂದ್ ಈ ಬಗ್ಗೆ ಟ್ವೀಟ್ ಮಾಡಿದ್ದು, ದಿನಸಿ‌ ಪದಾರ್ಥ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗಾಗಿ ಸ್ಥಳೀಯ ಮಾರುಕಟ್ಟೆಗೆ ಹೋಗಿ ಬರಲು ತಮ್ಮ ಸ್ವಂತ ವಾಹನ ಬಳಸಬಹುದು. ಕೊಟ್ಟಿರುವ ಅನುಮತಿ ದುರುಪಯೋಗ ಮಾಡಿಕೊಂಡರೆ ಕಾನೂನು ಕ್ರಮ ಕೈಗೊಳ್ಳಬಹುದು.‌ ಸಾಧ್ಯವಾದಷ್ಟು ಹತ್ತಿರವಿರುವ ಅಂಗಡಿ ಹೋಗಿ ಅಗತ್ಯ ವಸ್ತುಗಳನ್ನು‌ ಬೆಳಗ್ಗೆ 6 ರಿಂದ 10ರವರೆಗೆ ಖರೀದಿಸಲು ಅನುಮತಿ ನೀಡಲಾಗಿದೆ‌ ಎಂದಿದ್ದಾರೆ.

ಡಿಜಿಪಿ ಪ್ರವೀಣ್ ಸೂದ್​ ಟ್ವೀಟ್
ಡಿಜಿಪಿ ಪ್ರವೀಣ್ ಸೂದ್​ ಟ್ವೀಟ್

ಮನೆಯಿಂದ ಅಂಗಡಿಗಳಿಗೆ ಬರಲು ದೂರವಿರುವ ಕಾರಣ ಪ್ರಮುಖವಾಗಿ ರಾಜ್ಯದ ಗ್ರಾಮೀಣ ಭಾಗದಲ್ಲಿ ಸ್ಥಳೀಯ ಮಾರುಕಟ್ಟೆಗೆ ಹೋಗಲು ಕಿಲೋಮೀಟರ್ ಇದ್ದರಿಂದ ಅನಿವಾರ್ಯವಾಗಿ ಜನರು ಸ್ವಂತ ವಾಹನದಲ್ಲಿ‌ ಓಡಾಡಿದ್ದರಿಂದ ಪೊಲೀಸರು ತಡೆದು ನಿಲ್ಲಿಸಿ ಲಾಠಿ ರುಚಿ ತೋರಿಸಿದ್ದು ಕಂಡು ಬಂತು. ಇನ್ನೂ ಹಲವೆಡೆ ಪೊಲೀಸರೊಂದಿಗೆ ಮಾತಿನ ಚಕಮಕಿ ಇಳಿದು ಸರ್ಕಾರಕ್ಕೂ ಹಿಡಿಶಾಪ ಹಾಕಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.