ETV Bharat / state

HALನ 19 ಪ್ರಯಾಣಿಕ ಸಾಮರ್ಥ್ಯದ ಹಿಂದುಸ್ತಾನ್-228 ವಿಮಾನಕ್ಕೆ ಡಿಜಿಸಿಎ ಅನುಮೋದನೆ

ಹೆಚ್ಎಎಲ್ ನಿರ್ಮಿತ ಹಿಂದುಸ್ತಾನ್ 228 ಏರ್ ಕ್ರಾಫ್ಟ್​ಗೆ ಕೇಂದ್ರ ಸರಕಾರದ ನಾಗರಿಕ ವಿಮಾನಯಾನ ನಿರ್ದೇಶನಾಲಯ ಅನುಮೋದನೆ ನೀಡಿದೆ.

ಹೆಚ್ಎಎಲ್ ನಿರ್ಮಿತ ಹಿಂದುಸ್ತಾನ್228
ಹೆಚ್ಎಎಲ್ ನಿರ್ಮಿತ ಹಿಂದುಸ್ತಾನ್228
author img

By

Published : Feb 27, 2023, 10:43 PM IST

ಬೆಂಗಳೂರು: ದೇಶದ ಪ್ರತಿಷ್ಟಿತ ಕೇಂದ್ರ ಸರಕಾರಿ ಸ್ವಾಮ್ಯದ ವಿಮಾನ ತಯಾರಿಕಾ ಕಾರ್ಖಾನೆ ಹೆಚ್ಎಎಲ್ ನಿರ್ಮಿತ ನೂತನ 19 ಪ್ರಯಾಣಿಕರ ಸಾಮರ್ಥ್ಯದ '' ಹಿಂದುಸ್ತಾನ್ - 228 ಏರ್ ಕ್ರಾಫ್ಟ್'' ಮಾರ್ಪಾಡಿಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ಒಪ್ಪಿಗೆ ಕೊಟ್ಟಿದೆ. ಈ ಹೊಸ ಮಾದರಿಯ 19 ಪ್ರಯಾಣಿಕರ ಸೌಲಭ್ಯದ ವಿಮಾನವು 5,695 ಕೆಜಿ ಟೇಕ್ ಆಫ್ ಗರಿಷ್ಠ ತೂಕದ ಸಾಮರ್ಥ್ಯ ಹೊಂದಿದೆ. ''ಹಿಂದುಸ್ತಾನ್ 228 ಏರ್‌ಕ್ರಾಫ್ಟ್'' ಹಲವಾರು ವಿಶೇಷತೆಗಳಿಂದ ಕೂಡಿದ್ದು ಉಳಿದ ಸಾಮಾನ್ಯ ವಿಮಾನಗಳಿಗೆ ಹೋಲಿಸಿದರೆ ಇದರ ಚಾಲನೆ ಪೈಲಟ್​ಗಳಿಗೆ ಸುಲಭವಾಗಲಿದೆ.

ಹೊಸ ಮಾದರಿಯ ಏರ್ ಕ್ರಾಫ್ಟ್ ಉಪ-5,700 ಕೆಜಿ ವಿಮಾನ ವಿಭಾಗಕ್ಕೆ ಸೇರುತ್ತದೆ. ಈ ಮಾದರಿಯ ವಿಮಾನದ ನಿರ್ವಹಣೆ ಕಡಿಮೆ ವೆಚ್ಚದಾಯಕ. ನಿರ್ವಾಹಕರಿಗೆ ಹತ್ತಾರು ಅನುಕೂಲತೆಗಳು ವಿಮಾನದಲ್ಲಿ ದೊರೆಯಲಿದೆ ಎಂದು ಹೆಚ್ಎಎಲ್​ನ ಪ್ರಧಾನ ಕಚೇರಿಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹತ್ತೊಂಬತ್ತು ಜನ ಪ್ರಯಾಣಿಕರ ಸಾಮರ್ಥ್ಯದ ಈ ಮಾದರಿಯ ವಿಮಾನ ಚಾಲನೆ ಮಾಡಲು ಪೈಲಟ್​ಗೆ ಹೆಚ್ಚಿನ ಕೌಶಲ್ಯದ ಅಗತ್ಯವಿಲ್ಲ. ಕಡಿಮೆ ಅರ್ಹತೆಯ ಪೈಲಟ್ ಆಗಿದ್ದರೆ ಸಾಕು. ವಾಣಿಜ್ಯ ಪೈಲಟ್ ಪರವಾನಗಿ ಹೊಂದಿದ ಪೈಲಟ್ ಸಹ ವಿಮಾನದ ಚಾಲನೆ ಮಾಡಲು ಅವಕಾಶವಿದೆ. ವಿಮಾನ ನಿರ್ವಹಣೆ ಸಿಬ್ಬಂದಿಗೆ ಹೆಚ್ಚಿನ ತರಬೇತಿಯ ಅಗತ್ಯತೆಯೂ ಬೇಕಾಗುವುದಿಲ್ಲ.

ಇದನ್ನೂ ಓದಿ: ಕೋಸ್ಟ್ ಗಾರ್ಡ್‌ಗೆ ಸ್ವದೇಶಿ ನಿರ್ಮಿತ 16 ಸುಧಾರಿತ ಲಘು ಹೆಲಿಕಾಪ್ಟರ್​ ಎಂಕೆ -III ಹಸ್ತಾಂತರಿಸಿದ ಹೆಚ್​ಎಎಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.