ಬೆಂಗಳೂರು : ನಾಡು ಕಂಡ ಅಪರೂಪದ ರಾಜಕಾರಣಿ, ಪ್ರಾಮಾಣಿಕ, ಜನಸಾಮಾನ್ಯರ, ರೈತರ, ಸರ್ವ ಜನಾಂಗದ ಶಾಂತಿಯ ತೋಟದ ರೂವಾರಿ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು. ಪ್ರಧಾನಿಯಾಗಿ ಜೂನ್ 1ಕ್ಕೆ 25 ವರ್ಷ ಪೂರೈಸಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಅವರು ಗುಣಗಾನ ಮಾಡಿದ್ದಾರೆ.
ದೇವೇಗೌಡ ಅವರು ಪ್ರಧಾನಿಯಾಗಿ 25 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜೆಡಿಎಸ್ ಆಯೋಜಿಸಿದ 'ಯುವಜನತೆಗೆ ಗೊತ್ತಿಲ್ಲದ ದೇವೇಗೌಡರ ಪರಿಚಯ' ಕುರಿತು ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ದೇವೇಗೌಡರು ಕೆಂಪುಕೋಟೆ ಮೇಲೆ ಧ್ವಜ ಹಾರಿಸಿ ಇತಿಹಾಸ ಸೃಷ್ಟಿಸಿದರು. ಮುಂದೆ ಕೆಂಪುಕೋಟೆ ಮೇಲೆ ಧ್ವಜ ಯಾರೂ ಹಾರಿಸುತ್ತಾರೋ ಗೊತ್ತಿಲ್ಲ ಎಂದರು.
ಪ್ರಧಾನಿಯಾಗಿ ಚೀನಾ, ಪಾಕಿಸ್ತಾನದ ಜೊತೆ ಬಾಂಧವ್ಯ ಏರ್ಪಡಿಸಿದ್ದರು. ಕಾಶ್ಮೀರಕ್ಕೆ ಹೋಗಿ ಚುನಾವಣೆ ಮಾಡಿವ ಮೂಲಕ ಇಡೀ ದೇಶ ನಿಬ್ಬೆರಗಾಗುವಂತೆ ಮಾಡಿದ ಕೀರ್ತಿ ದೇವೇಗೌಡರದ್ದು. ಭಯೋತ್ಪಾಕ ಗುಂಪಿನ ಸದಸ್ಯನೊಬ್ಬನನ್ನು ಶಾಸಕನನ್ನಾಗಿ ಮಾಡಿದರು. ಅವರ ಧೈರ್ಯವನ್ನು ಮೆಚ್ಚಲೇ ಬೇಕು. ರೈತರಿಗೆ ಶೇ.30ರಷ್ಟು ಸಬ್ಸಿಡಿ, ಟ್ರ್ಯಾಕ್ಟರ್ ಸಬ್ಸಿಡಿ ನೀಡಿ ನೆರವಾಗದರು. ಪಂಜಾಬ್ನಲ್ಲಿ ಒಂದು ತಳಿಗೆ ದೇವೇಗೌಡರ ಹೆಸರು ಇಟ್ಟಿದ್ದಾರೆ. ಯಾವುದೇ ವಿವಾದಗಳಿಲ್ಲದ ಭ್ರಷ್ಟಾಚಾರ ರಹಿತ ರಾಜಕಾರಣಿ ಎಂದರೆ ದೇವೇಗೌಡರು ಎಂದು ಗುಣಗಾನ ಮಾಡಿದರು.
ವಿಧಾನಸೌಧದ ಎದುರು ದೇವೇಗೌಡರ ಮೂರ್ತಿ:
ದೇಶಕ್ಕೆ ಮತ್ತು ರಾಜ್ಯಕ್ಕೆ ಅವರು ಮಾಡಿದ ಕೆಲಸ ದೊಡ್ಡದಿದೆ. ವಿಧಾನಸೌಧದ ಮುಂದೆ ದೇವೇಗೌಡರ ಮೂರ್ತಿ ಇರಿಸಬೇಕು. ಕೃಷ್ಣ ಮೇಲ್ದಂಡೆ ಯೋಜನೆ ಕಾರಣ ಕರ್ತೃ ದೇವೇಗೌಡರು ಅಂದು ಆಂಧ್ರದ ಚಂದ್ರಬಾಬು ನಾಯ್ಡು ಅವರ ಜೊತೆ ಜಗಳವಾಡಿ ನೀರಾವರಿ ಯೋಜನೆಯನ್ನು ತಂದರು ಎಂದಿದ್ದಾರೆ.
ಕರ್ನಾಟಕದಲ್ಲಿ ಪುನಃ ಒಂದು ಶಕ್ತಿಯನ್ನು ಕಟ್ಟುತ್ತೇವೆ ಎಂದು ದೇವೇಗೌಡರು ಹೇಳಿದ್ದಾರೆ. ಕುಮಾರಸ್ವಾಮಿ ಅವರೂ ಇದ್ದಾರೆ. ಅವರ ಆರೋಗ್ಯ ಸರಿ ಇಲ್ಲದಿದ್ದರೂ ಹೋರಾಟ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಮತ್ತೆ ಒಂದು ಶಕ್ತಿ ಬರಬೇಕು ಎಂದು ಪರೋಕ್ಷವಾಗಿ ಜೆಡಿಎಸ್ ಸರ್ಕಾರ ಬರಲೆಂದು ಆಶಿಸಿದರು.
ಎಲ್ಲ ಕಡೆ ಕುಟುಂಬ ರಾಜಕಾರಣ ಇದೆ. ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ, ರಾಹುಲ್ ಗಾಂಧಿ ಮಾಡಿಲ್ಲವೆ? ಹಾಗಾಗಿ, ರಾಜ್ಯದಲ್ಲಿ ಜೆಡಿಎಸ್ ಬೆಳೆಯಬೇಕು ಎಂದು ಪರೋಕ್ಷವಾಗಿ ಹೇಳಿದರು.
ಇದನ್ನೂ ಓದಿ: ಕೋವಿಡ್ ವಿರುದ್ದ ಸಮರ : ಮನೆ ಮನೆಗೆ ತೆರಳಿ ಚುಚ್ಚುಮದ್ದನ್ನು ನೀಡಿದ ಪುಲ್ವಾಮಾದ ಆರೋಗ್ಯ ಕಾರ್ಯಕರ್ತರು