ETV Bharat / state

ಉತ್ತರ 'ಕೈ' ಕೊಡುವ ಆತಂಕ... ಕಲ್ಪತರು ನಾಡಿನತ್ತ ದೊಡ್ಡ ಗೌಡರ ಚಿತ್ತ!? - ಎಚ್.ಡಿ.ದೇವೇಗೌಡ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಎಚ್.ಡಿ.ದೇವೇಗೌಡರು ಸ್ಪರ್ಧಿಸಲಿದ್ದಾರೆ ಎಂಬ ಮಾತು ಈಗ ಇತಿಹಾಸ. ಕಾರಣ ಗೌಡರ ಚಿತ್ತ ಸದ್ಯ ತುಮಕೂರಿನೆಡೆಗೆ ಸಾಗಿದೆ. ಈ ಚುನಾವಣೆಯಲ್ಲಿ ಗೌಡರು ತುಮಕೂರು ಕ್ಷೇತ್ರದಿಂದ ಸ್ಪರ್ಧಿಸುವುದು ಬಹುತೇಕ ಖಚಿತ ಎನ್ನುತ್ತಿವೆ ಬಲ್ಲ ಮೂಲಗಳು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ
author img

By

Published : Mar 17, 2019, 11:57 PM IST

ಬೆಂಗಳೂರು: ಮಹಾನಗರದ ಮೂರು ಕ್ಷೇತ್ರಗಳ ಪೈಕಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸ್ಪರ್ಧಿಸಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಇದೀಗ ಅವರು ಕಲ್ಪತರು ನಾಡು ತುಮಕೂರಿನತ್ತ ಮುಖ ಮಾಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ನಿರೀಕ್ಷಿತ ಮತಗಳು ಲಭಿಸುವ ಅನುಮಾನ, ಕಾಂಗ್ರೆಸ್ ಶಾಸಕರ ಪೂರ್ಣ ಬೆಂಬಲ ಸಿಗದಿರುವ ಆತಂಕ ಹಾಗೂ ಬಿಜೆಪಿಯ ಸದಾನಂದಗೌಡರ ವಿರುದ್ಧ ಸೆಣೆಸುವ ವಿಚಾರದಲ್ಲಿ ಅದ್ಯಾಕೋ ಒಂಚೂರು ಜಾತಿ ವ್ಯಾಮೋಹ ಕೂಡ ಕಾಡಿದ್ದರಿಂದ ಗೌಡರು ಉತ್ತರ ಬಿಟ್ಟು ಕಲ್ಪತರುವಿನತ್ತ ಮುಖ ಮಾಡಿದ್ದಾರೆ ಎಂದು ಬಲ್ಲ ಮೂಲಗಳು ಹೇಳುತ್ತಿವೆ.

ಇನ್ನೊಂದು ಮಾಹಿತಿ ಪ್ರಕಾರ ತಮ್ಮ ಪಾಲಿಗೆ ಲಭಿಸಿರುವ 8 ಕ್ಷೇತ್ರಗಳ ಪೈಕಿ ತುಮಕೂರನ್ನು ಕಾಂಗ್ರೆಸ್ ವಾಪಸ್ ಕೇಳುತ್ತಿದೆ. ಉತ್ತರ ಕನ್ನಡ, ಉಡುಪಿ ಚಿಕ್ಕಮಗಳೂರು, ಶಿವಮೊಗ್ಗದಂತೆ ಕ್ಲಿಷ್ಟಕರ ಕ್ಷೇತ್ರದ ಮಾದರಿಯಲ್ಲೇ ತುಮಕೂರಿನ ಬದಲು ಬೇರೆ ಕ್ಷೇತ್ರ ಕೊಡಬಹುದು, ಇದರಿಂದ ತಾವೇ ಅಲ್ಲಿಂದ ಸ್ಪರ್ಧಿಸಿದರೆ ಗೆಲುವು ಕೂಡ ಸುಲಭ, ಜತೆಗೆ ಕ್ಷೇತ್ರ ಕೇಳಲು ಕಾಂಗ್ರೆಸ್ ನಾಯಕರಿಗೂ ಬಾಯಿ ಮುಂದೆ ಬರದಂತೆ ಮಾಡುವ ಯೋಚನೆಯಿಂದಾಗಿ ಗೌಡರು ತಮ್ಮ ಸ್ಪರ್ಧೆಗೆ ತುಮಕೂರನ್ನೇ ಕ್ಷೇತ್ರವಾಗಿಸಿಕೊಳ್ಳಲು ನಿರ್ಧರಿಸಿದ್ದಾರೆ ಎಂಬ ಮಾತಿದೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

ಗೌಡರಿಗೆ ಸವಾಲು:
ಕಳೆದ ಏಳೆಂಟು ತಿಂಗಳಿಂದ ರಾಜ್ಯದಲ್ಲಿ ಅಧಿಕಾರದಲ್ಲಿರುವ ಮೈತ್ರಿ ಸರ್ಕಾರ ತಮ್ಮ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಈ ಕೂಡಲೇ ದೇವೇಗೌಡರು ಸಿಎಂ ಎಚ್.ಡಿ. ಕುಮಾರಸ್ವಾಮಿಗೆ ಸಂದೇಶ ಕಳಿಸಿ ಅನುದಾನ ಬಿಡುಗಡೆ ಬಗ್ಗೆ ಭರವಸೆ ಕೊಡಿಸಿದರೆ ನಾವು ದೇವೇಗೌಡರ ಪರ ಪ್ರಚಾರಕ್ಕೆ ಸಿದ್ಧ. ಇಲ್ಲವಾದರೆ ನಾವು ತಟಸ್ಥ ನೀತಿ ಅನುಸರಿಸುತ್ತೇವೆ ಎಂದು ಹೇಳಿಕೊಂಡಿದ್ದಾರೆ. ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಿರುವಾಗ ಅನುದಾನ ಬಿಡುಗಡೆ, ಘೋಷಣೆ ಅಸಾಧ್ಯವಾದ ವಿಚಾರ.
ಹೀಗಾಗಿ ತಮ್ಮ ಸೋಲಿಗೆ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ 8 ವಿಧಾನಸಭೆ ಕ್ಷೇತ್ರಗಳ ಪೈಕಿ ಕಾಂಗ್ರೆಸ್​ನ ಬೈರತಿ ಬಸವರಾಜ್ (ಕೆ.ಆರ್.ಪುರ), ಬ್ಯಾಟರಾಯನಪುರ (ಕೃಷ್ಣಬೈರೇಗೌಡ), ಎಸ್.ಟಿ. ಸೋಮಶೇಖರ್ (ಯಶವಂತಪುರ), ಹೆಬ್ಬಾಳ (ಬೈರತಿ ಸುರೇಶ್) ಹಾಗೂ ಪುಲಕೇಶಿನಗರ (ಅಖಂಡ ಶ್ರೀನಿವಾಸಮೂರ್ತಿ) ಶಾಸಕರಿದ್ದಾರೆ. ಉಳಿದಂತೆ ಆರ್. ಮಂಜುನಾಥ್ (ದಾಸರಹಳ್ಳಿ) ಹಾಗೂ ಕೆ. ಗೋಪಾಲಯ್ಯ (ಮಹಾಲಕ್ಷ್ಮಿಲೇಔಟ್) ಜೆಡಿಎಸ್ ಶಾಸಕರು ಮತ್ತು ಡಾ. ಅಶ್ವತ್ಥನಾರಾಯಣ (ಮಲ್ಲೇಶ್ವರ) ಬಿಜೆಪಿ ಶಾಸಕರಿದ್ದಾರೆ.

ಆದರೆ ಕ್ಷೇತ್ರದಲ್ಲಿ ಕೈ ಶಾಸಕರು ಸಹಕಾರ ನೀಡದಿದ್ದರೆ ಎಂಬ ಆತಂಕ ಒಂದೆಡೆಯಾದರೆ, ಬೆಂಗಳೂರು ಉತ್ತರದಲ್ಲಿ ಗೆಲುವಿನ ಸಾಧ್ಯತೆ ಕಡಿಮೆ ಎಂಬ ಆಂತರಿಕ ವರದಿಯನ್ನು ದೇವೇಗೌಡರು ತರಿಸಿಕೊಂಡಿದ್ದಾರೆ. ಜನ ಜಾತಿ ನೋಡಿ ಮತಹಾಕುವ ಸಾಧ್ಯತೆ ಕಡಿಮೆ, ಅಲ್ಲದೇ ಬೆಂಗಳೂರು ಮತದಾರರಲ್ಲಿ ಕೇಂದ್ರ ಸರ್ಕಾರದ ಕಾರ್ಯದ ಬಗ್ಗೆ ಒಲವು ಹೆಚ್ಚಾಗಿದೆ ಎಂಬ ಮಾಹಿತಿ ದೇವೇಗೌಡರಿಗೆ ಲಭಿಸಿದೆ. ಇದರಿಂದ ಅವರು ಸುರಕ್ಷಿತ ಕ್ಷೇತ್ರ ಹುಡುಕಾಟ ನಡೆಸಿದ್ದಾರೆ.

ತುಮಕೂರು ಉತ್ತಮ:
ತುಮಕೂರು ಜಿಲ್ಲೆಯಲ್ಲಿ ಸದ್ಯ ಒಟ್ಟು 11 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ನಾಲ್ಕು ಕ್ಷೇತ್ರವನ್ನು ಜೆಡಿಎಸ್, ಬಿಜೆಪಿ ಗೆದ್ದುಕೊಂಡಿದ್ದರೆ, ಮೂರರಲ್ಲಿ ಕಾಂಗ್ರೆಸ್ ಗೆದ್ದಿದೆ. ಅಲ್ಲದೇ ಬಿಜೆಪಿಯಿಂದ ಜಿ.ಎಸ್. ಬಸವರಾಜು ಕಣಕ್ಕಿಳಿಯುವ ಸಾಧ್ಯತೆ ಇರುವ ಕಾರಣ, ಗೆಲುವು ಸುಲಭವಾಗಲಿದೆ ಎಂಬ ಲೆಕ್ಕಾಚಾರ ದೇವೇಗೌಡರದು. 11ರ ಪೈಕಿ ತಮಗೆ 7 ಕ್ಷೇತ್ರದ ಶಾಸಕರ ಬೆಂಬಲ ಸಿಗಲಿದೆ ಜತೆಗೆ ಡಿಸಿಎಂ ಡಾ. ಜಿ. ಪರಮೇಶ್ವರ್ ತವರು ಜಿಲ್ಲೆ ಆಗಿದ್ದರಿಂದ ಕಾಂಗ್ರೆಸ್ ಪಕ್ಷ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಲಿದೆ ಎಂಬ ನಂಬಿಕೆಯನ್ನು ದೇವೇಗೌಡರು ಹೊಂದಿದ್ದಾರೆ ಎಂಬ ಮಾತಿದೆ.

ಸದ್ಯ ಕಾಂಗ್ರೆಸ್​ನ ಕೆ.ಎನ್. ರಾಜಣ್ಣ, ಟಿ.ಬಿ. ಜಯಚಂದ್ರ, ಕೆ. ಷಡಕ್ಷರಿ ಸೇರಿದಂತೆ ಹಲವು ನಾಯಕರ ಸಹಕಾರ ಸಿಕ್ಕು ಗೆಲ್ಲುವ ನಿರೀಕ್ಷೆಯನ್ನು ದೇವೇಗೌಡರು ಹೊಂದಿದ್ದಾರೆ. ಇದರಿಂದ ಬೆಂಗಳೂರು ನಗರದ ಬದಲು ತುಮಕೂರನ್ನು ಉತ್ತಮ ಎಂದು ಪರಿಗಣಿಸಿದ್ದಾರೆ ಎನ್ನಲಾಗುತ್ತಿದೆ.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.