ETV Bharat / state

ಮನೆ ಕಳ್ಳತನ ಆರೋಪಿಗಳ ಬಂಧನ: 50 ಗ್ರಾಂ ಚಿನ್ನಾಭರಣ ವಶ - home theft accused arrest

ಮನೆ ಕಳ್ಳತನ ಮಾಡಿರುವ ಆರೋಪಿಗಳನ್ನು ಪೊಲೀಸರು ಬಂಧಿಸಿ ಅವರಿಂದ 1,50,000 ರೂ. ಬೆಲೆ ಬಾಳುವ 50 ಗ್ರಾಂ ಚಿನ್ನದ ಆಭರಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

banaglore
ಮನೆ ಕಳ್ಳತನ ಆರೋಪಿಗಳ ಬಂಧನ
author img

By

Published : Dec 3, 2020, 2:27 PM IST

ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ನಗರದಲ್ಲಿ ವಾಸವಿದ್ದ ಕುಟುಂಬಗಳು ಊರಿಗೆ ಹೋಗಿ ವಾಪಸ್​ ಬರುವಷ್ಟರಲ್ಲಿ ಮನೆಯಲ್ಲಿ ಕಳ್ಳತನವಾಗಿದ್ದು, ಈ ಸಂಬಂಧ ಚಂದ್ರಾ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಸದ್ಯ ಪ್ರಕರಣದಲ್ಲಿ ಶೇಖ್ ಬಾಬ, ನಯಾಜ್, ಸಲೀಂ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಆರೋಪಿಗಳು ಮನೆಯೊಳಗೆ ಇದ್ದ ಚಿನ್ನ, ಬೆಳ್ಳಿ, ಎರಡು ವಾಚ್​ಗಳನ್ನು ಕಳ್ಳತನ ಮಾಡಿದ್ದಾರೆ. ಇನ್ನು ಆರೋಪಿಗಳಿಂದ 1,50,000 ರೂ. ಬೆಲೆ ಬಾಳುವ 50 ಗ್ರಾಂ ಚಿನ್ನದ ಆಭರಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಹಾಗೆಯೇ ತನಿಖೆ ವೇಳೆ ಪಶ್ಚಿಮ ವಿಭಾಗದ ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್​ಗಳನ್ನು ಕದ್ದಿರುವ ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ಆರೋಪಿ ಶೇಖ್ ಬಾಬ ಈ ಹಿಂದೆಯೇ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದನು. ಇನ್ನುಳಿದ ಆರೋಪಿಗಳು ಈತನ ಸಹಚರರರು ಆಗಿದ್ದಾರೆ.

ಬಂಧಿತರ ವಿಚಾರಣೆ ವೇಳೆ ನೆಲಮಂಗಲ ಹಾಗೂ ಬಸವನಗುಡಿ ವ್ಯಾಪ್ತಿಯ ಕಳ್ಳತನ ಪ್ರಕರಣಗಳು ಬಯಲಾಗಿವೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.