ಬೆಂಗಳೂರು: ಅಕ್ರಮ ಬಾಂಗ್ಲಾ ವಲಸಿಗರು ಸಿಲಿಕಾನ್ ಸಿಟಿಯಲ್ಲಿ ವಾಸ್ತವ ಹೂಡಿರುವ ಹಿನ್ನೆಲೆ ಪೊಲೀಸರು ಇದೀಗ ಕಟ್ಟು ನಿಟ್ಟಿನ ನಿಗಾ ವಹಿಸಿದ್ದಾರೆ.
ಸಿಸಿಬಿ ಪೊಲೀಸರು ಹೆಚ್ಚುವರಿಯಾಗಿ ತಂಡ ರಚನೆ ಮಾಡಿ ನಗರದಲ್ಲಿ ಎಲ್ಲೆಲ್ಲಿ ಬಾಂಗ್ಲಾ ವಲಸಿಗರು ಇದ್ದಾರೆ ಅನ್ನೋದ್ರ ಪಟ್ಟಿ ರೆಡಿ ಮಾಡಲು ಮುಂದಾಗಿದ್ದಾರೆ. ಮಫ್ತಿಯಲ್ಲಿ ಎಲ್ಲ ಕಡೆ ತಿರುಗಿ ಅಕ್ರಮ ಬಾಂಗ್ಲಾ ವಲಸಿಗರ ಮಾಹಿತಿ ಕಲೆಹಾಕಿದ್ದಾರೆ.
ಈಟಿವಿ ಭಾರತ್ ಜೊತೆ ಮಾತನಾಡಿದ ಸಿಸಿಬಿ ಅಧಿಕಾರಿ, ಅಕ್ರಮ ಬಾಂಗ್ಲಾ ವಲಸಿಗರು ನಗರದ ಕಟ್ಟಡ ನಿರ್ಮಾಣ, ಗಾರ್ಮೆಂಟ್ಸ್ ಕೆಲಸ, ಹೋಟೆಲ್ಗಳಲ್ಲಿ ಕಡಿಮೆ ಸಂಬಳಕ್ಕೆ ಕೆಲಸ ಮಾಡ್ತಿರುವ ಮಾಹಿತಿ ಸಿಕ್ಕಿದೆ. ಸಿಲಿಕಾನ್ ಸಿಟಿಯ ಮಾಲೀಕರು ಕಡಿಮೆ ಸಂಬಳಕ್ಕೆ ಇವರ ಕೈಯಲ್ಲಿ ಕೆಲಸ ಮಾಡಿಸುತ್ತಿದ್ದಾರೆ. ಹೀಗಾಗಿ ಈಗಾಗಲೇ ಸಿಸಿಬಿ ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ, ಸಿಲಿಕಾನ್ ಸಿಟಿಯಲ್ಲಿ ಮಫ್ತಿಯಲ್ಲಿ ತಿರುಗಿ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ ಹಚ್ಚಲು ಮುಂದಾಗಿದೆ.
ಹಾಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತನಾಡಿ ಅಕ್ರಮ ವಲಸಿಗರು ನಗರದಲ್ಲಿ ಅಪರಾಧ ಕೃತ್ಯದಲ್ಲಿ ಒಂದು ವೇಳೆ ಭಾಗಿಯಾಗಿದ್ರೆ, ಅವ್ರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ರೆ, ಕ್ರಮ ಕೈಗೊಳ್ಳುತ್ತೀವೆ ಎಂದಿದ್ದಾರೆ.