ETV Bharat / state

ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಗಡಿಪಾರು ಆದೇಶ ಹೊರಡಿಸಬೇಕು: ಹೈಕೋರ್ಟ್ - high court of karnataka

ಗಡಿಪಾರು ಮಾಡಿ ಆದೇಶ ಮಾಡುವುದು ಸಾಮಾನ್ಯ ಪ್ರಕ್ರಿಯೆಯಲ್ಲ ಎಂದು ಸುಪ್ರೀಂಕೋರ್ಟ್ ಉಲ್ಲೇಖಿಸಿದ್ದು, ಗಡಿಪಾರು ಮಾಡುವುದು ಸಂವಿಧಾನದ 19(1)(ಡಿ) ಪ್ರಕಾರ ಮೂಲಭೂತ ಹಕ್ಕನ್ನು ಕಸಿದುಕೊಳ್ಳುವಂತಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.

deportation-order-to-be-issued-only-in-exceptional-circumstances
ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಗಡಿಪಾರ ಆದೇಶ ಹೊರಡಿಸಬೇಕು: ಹೈಕೋರ್ಟ್
author img

By

Published : Mar 28, 2023, 9:19 PM IST

ಬೆಂಗಳೂರು: ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಗಡಿಪಾರು ಮಾಡುವಂತಹ ನಿರ್ಧಾರಕ್ಕೆ ಮುಂದಾಗಬೇಕು ಎಂಬುದಾಗಿ ಅಭಿಪ್ರಾಯ ಪಟ್ಟಿರುವ ಹೈಕೋರ್ಟ್​ ನ್ಯಾಯಪೀಠ, ವ್ಯಕ್ತಿಯೊಬ್ಬರನ್ನು ಕುಣಿಗಲ್​ ತಾಲೂಕಿನಿಂದ ಗಡಿಪಾರು ಮಾಡಿ ಸಹಾಯಕ ಆಯುಕ್ತರು ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದೆ. ತಮ್ಮನ್ನು ಗಡಿಪಾರು ಮಾಡಿದ್ದ ಕ್ರಮವನ್ನು ಪ್ರಶ್ನಿಸಿ ಕುಣಿಗಲ್​ ತಾಲೂಕಿನ ತೋರೆಬೊಮ್ಮನಹಳ್ಳಿಯ ನಿವಾಸಿ ಟಿ. ರೂಪೇಶ್​ ಕುಮಾರ್​ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಗಡಿಪಾರು ಮಾಡಿ ಆದೇಶ ಮಾಡುವುದು ಸಾಮಾನ್ಯ ಪ್ರಕ್ರಿಯೆಯಲ್ಲ ಎಂದು ಹಲವು ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ಉಲ್ಲೇಖಿಸಿದೆ. ಅಲ್ಲದೆ, ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಮಿತವಾಗಿ ಜಾರಿ ಮಾಡಬಹುದಾಗಿದೆ. ಅಲ್ಲದೆ, ಗಡಿಪಾರು ಮಾಡುವುದು ಸಂವಿಧಾನದ 19 (1) (ಡಿ) ಪ್ರಕಾರ ಮೂಲಭೂತ ಹಕ್ಕನ್ನು ಕಸಿದುಕೊಳ್ಳುವಂತಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.

ದೀಪಕ್ ಮತ್ತು ಮಹಾರಾಷ್ಟ್ರ ರಾಜ್ಯ ಪ್ರಕರಣದಲ್ಲಿ ಭಾರತದ ಸಂವಿಧಾನದ 19ನೇ ವಿಧಿಯ ಕಲಂ (5)ರಲ್ಲಿ ಹೇಳಿರುವಂತೆ ಗಡಿಪಾರು ಮಾಡುವ ಆದೇಶಗಳು ಸಮಂಜಸತೆಯ ಪರೀಕ್ಷೆಗೆ ನಿಲ್ಲಬೇಕು. ಈ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಗಡಿಪಾರು ಮಾಡುವಂತ ಯಾವುದೇ ಸಂದರ್ಭ ಎದುರಾಗಿಲ್ಲ. ಹೀಗಾಗಿ ಅರ್ಜಿದಾರರ ವಿರುದ್ಧ ಹೊರಡಿಸಿರುವ ಗಡಿಪಾರು ಆದೇಶವನ್ನು ರದ್ದು ಮಾಡುತ್ತಿರುವುದಾಗಿ ನ್ಯಾಯಪೀಠ ತಿಳಿಸಿದೆ.

ಅಲ್ಲದೆ, ಅರ್ಜಿದಾರರ ವಿರುದ್ಧ ಹೊರಡಿಸಿರುವ ಆದೇಶವು ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 58ಕ್ಕೆ ವಿರುದ್ಧವಾಗಿದೆ. ಇದು ನಾಗರಿಕರಿಂದ ಕಸಿದುಕೊಳ್ಳುತ್ತಿರುವುದು ಮೂಲಭೂತ ಹಕ್ಕನ್ನು ಕಸಿದುಕೊಂಡಂತಾಗಿದೆ. ಹೀಗಾಗಿ ಗಡಿಪಾರು ಆದೇಶ ರದ್ದು ಮಾಡಲಾಗುತ್ತಿದೆ ಎಂದು ಹೈಕೋರ್ಟ್ ಹೇಳಿದೆ.

ಪ್ರಕರಣದ ಹಿನ್ನೆಲೆ ಏನು ?: ರೂಪೇಶ್‌ ಕುಮಾರ್ ಅವರು ಕರ್ನಾಟಕ ಪೊಲೀಸ್ ಕಾಯಿದೆಯ ಸೆಕ್ಷನ್ 87 (ಸಾರ್ವಜನಿಕವಾಗಿ ಜೂಜಾಟ). ಅದೇ ಕಾಯಿದೆಯ ಸೆಕ್ಷನ್ 87ರ ಅಡಿಯಲ್ಲಿ ಎರಡನೇ ಪ್ರಕರಣವನ್ನು ಮತ್ತು ಮೂರನೇ ಪ್ರಕರಣವನ್ನು ಸೆಕ್ಷನ್ 341, (ತಪ್ಪಾದ ಸಂಯಮ) 504, (ಉದ್ದೇಶಪೂರ್ವಕ ಅವಮಾನ) 323 ಮತ್ತು (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು) 363, (ಅಪಹರಣ) ಮತ್ತು ಭಾರತೀಯ ದಂಡ ಸಂಹಿತೆಯ 34 (ಪಿತೂರಿ), ಕರ್ನಾಟಕ ಮೈನರ್ ಮಿನರಲ್ ಕಾನ್ಸಿಸ್ಟೆಂಟ್ ರೂಲ್ಸ್, ಮತ್ತು ಭಾರತೀಯ ಮೋಟಾರು ವಾಹನಗಳ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಆರು ಪ್ರಕರಣಗಳು ದಾಖಲಾಗಿದ್ದು, ಮೂರು ಪ್ರಕರಣಗಳು ಖುಲಾಸೆಗೊಂಡಿದ್ದರು. ಇನ್ನುಳಿದ ಮೂರು ಪ್ರಕರಣಗಳು ವಿಚಾರಣಾ ಹಂತದಲ್ಲಿದ್ದವು.

ಆರೋಪಿಯ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಯ ಅಧಿಕಾರಿಗಳು ಉಪ ಪೊಲೀಸ್ ವರಿಷ್ಠಾಧಿಕಾರಿಗೆ ವರದಿ ಸಲ್ಲಿಸಿದ ನಂತರ ರೂಪೇಶ ಕುಮಾರ್​ ಅವರನ್ನು ಗಡಿಪಾರು ಮಾಡುವಂತೆ ಮನವಿ ಮಾಡಲಾಗಿತ್ತು. ಇದರ ಆಧಾರದಲ್ಲಿ ಆರೋಪಿ ರೂಪೇಶ್​ ಕುಮಾರ್​ ಅವರನ್ನು 2022ರ ನವೆಂಬರ್ 24ರಂದು ರೂಪೇಶ್‌ ಕುಮಾರ್ ಅವರಿಗೆ ನೋಟಿಸ್ ನೀಡಿದ್ದರು. ಅಲ್ಲದೆ, 2022ರ ಡಿಸೆಂಬರ್ 15 ರಂದು ಗಡಿಪಾರು ಮಾಡಿ ಆದೇಶ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ರೂಪೇಶ್‌ ಕುಮಾರ್ ಅವರು ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಶಾಸಕ ರೇಣುಕಾಚಾರ್ಯ ವಿರುದ್ಧದ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.