ಬೆಂಗಳೂರು: ಬಿಬಿಎಂಪಿ ಅಧಿನಿಯಮ 2020ರಡಿ ಆಯುಕ್ತರ ಹುದ್ದೆಯನ್ನು ಮುಖ್ಯ ಆಯುಕ್ತರ ಹುದ್ದೆಯಾಗಿ ಹಾಗೂ ವಲಯಗಳಲ್ಲಿ ವಿಶೇಷ ಆಯುಕ್ತರಾಗಿರುವವರನ್ನು ವಲಯ ಆಯುಕ್ತರಾಗಿ ಮತ್ತು 8 ಜಂಟಿ ಆಯುಕ್ತರನ್ನು ವಲಯ ಜಂಟಿ ಆಯುಕ್ತರಾಗಿ ಪರಿವರ್ತಿಸಿ ಎಪ್ರಿಲ್ 1ರಿಂದ ಅನ್ವಯವಾಗುವಂತೆ ಸರ್ಕಾರ ನಿಯೋಜಿಸಿದೆ.
ಬಿಬಿಎಂಪಿ ಹಾಗೂ ಸರ್ಕಾರವೂ ಸೇರಿದಂತೆ ಇತ್ತರ ಯಾವುದೇ ಪ್ರಾಧಿಕಾರದ ನಡುವೆ ಪಾಲಿಕೆ ಪರವಾಗಿ ಪತ್ರ ವ್ಯವಹಾರ ಮುಖ್ಯ ಆಯುಕ್ತರೇ ನಿರ್ವಹಿಸಬೇಕೆಂದೂ ತಿಳಿಸಲಾಗಿದೆ.