ETV Bharat / state

ಆಗಸ್ಟ್​​ 23ರಿಂದ ಶಾಲಾ-ಕಾಲೇಜು ಪ್ರಾರಂಭ : ಎಸ್​ಒಪಿ ಬಿಡುಗಡೆ ಮಾಡಿದ ಶಿಕ್ಷಣ ಇಲಾಖೆ

ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು, ಅದರಿಂದ ಆಚೆಗೆ ಮಕ್ಕಳು ಕೈಜಾರದಂತೆ ನೋಡಿಕೊಳ್ಳಬೇಕಿದೆ.‌ ಇತ್ತ ಮೊದಲ ಹಂತವಾಗಿ ಕೇವಲ ಹೈಸ್ಕೂಲ್ ಹಾಗೂ ಪಿಯುಸಿ ತರಗತಿ ಮಾತ್ರ ಆರಂಭಕ್ಕೆ ಅವಕಾಶ ಮಾಡಿಕೊಡಲಾಗಿದೆ. ಜೊತೆಗೆ ಕೊರೊನಾ ಕಾರಣಕ್ಕೆ ವಿದ್ಯಾರ್ಥಿಗಳು ಭೌತಿಕ ತರಗತಿಗೆ ಬರಲು ಆಗದೇ ಇದ್ದರೆ ಆನ್​ಲೈನ್ ಮೂಲಕವಾದರೂ ಶಿಕ್ಷಣವನ್ನ ಪಡೆಯಬಹುದಾಗಿದೆ..

department-of-education-released-by-sop
ಶಿಕ್ಷಣ ಇಲಾಖೆ
author img

By

Published : Aug 17, 2021, 8:57 PM IST

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಸಂಪೂರ್ಣವಾಗಿ ನಾಶವಾಗಿಲ್ಲ. ಇದರ ನಡುವೆಯೇ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಾಲಾ-ಕಾಲೇಜು ಆರಂಭಕ್ಕೆ ಸಾಕಷ್ಟು ಒತ್ತಡ ಕೇಳಿ ಬಂದಿದೆ. ಇದೀಗ ಕೊರೊನಾ ನಡುವೆಯೂ ಶಾಲಾ-ಕಾಲೇಜು ಆರಂಭಿಸಲು ಶಿಕ್ಷಣ ಇಲಾಖೆ ಹಾಗೂ ಸರ್ಕಾರ ಸಕಲ ತಯಾರಿ ನಡೆಸಿದ್ದು, ಆಗಸ್ಟ್​ 23ರಂದು ತರಗತಿ ಆರಂಭಿಸಲು ಗ್ರೀನ್ ಸಿಗ್ನಲ್ ಕೊಟ್ಟಿದೆ.

ಶಾಲಾ-ಕಾಲೇಜು ಆರಂಭ ಹಿನ್ನೆಲೆ ಆರೋಗ್ಯ ಇಲಾಖೆ ನೀಡಿರುವ ಎಸ್ಒಪಿಯನ್ನ ಶಿಕ್ಷಣ ಇಲಾಖೆ ಜಾರಿ ಮಾಡಿದೆ. ಮಾರ್ಗಸೂಚಿ ಬಿಡುಗಡೆಯೇನೋ ಆಯ್ತು. ಆದರೆ, ಪಾಲನೆ ಮಾಡಿಸೋದೇ ಸವಾಲಿನ ಕೆಲಸವಾಗಿದೆ.

ತರಗತಿಯಲ್ಲಿ ಇರುವಷ್ಟು ಸಮಯ ಅವರಿಗೆ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹೇಳುವುದು ತುಸು ಕಷ್ಟವೇ. ಆಟ-ಊಟದ ಸಮಯದಲ್ಲಿ ಗುಂಪು ಸೇರದಂತೆ ನಿಯಮ ಪಾಲನೆ ಮಾಡುವುದೇ ಕಷ್ಟಸಾಧ್ಯವಾಗಿದೆ.

ಶಾಲಾ-ಕಾಲೇಜು ಪ್ರಾರಂಭ ಕುರಿತು ಉಪನ್ಯಾಸಕರ ಮಾತು..

ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಿಂದ ವಿದ್ಯಾರ್ಥಿಗಳನ್ನ ಕೋವಿಡ್ ಹರಡದಂತೆ ನೋಡಿಕೊಳ್ಳಬಹುದು. ಆದರೆ, ಮಾರ್ಗಸೂಚಿಯನ್ನ ಕಟ್ಟುನಿಟ್ಟಾಗಿ ಪಾಲನೆ ಮಾಡುವ ಜವಾಬ್ದಾರಿ ಶಿಕ್ಷಕರ ಹೆಗಲಮೇಲಿದೆ.‌ ವಿದ್ಯಾರ್ಥಿಗಳಿಗೆ ಕೋವಿಡ್ ಲಕ್ಷಣಗಳಿಲ್ಲವೆಂದು ದೃಢೀಕರಿಸಬೇಕು ಹಾಗೇ ಆರೋಗ್ಯ ಸ್ಥಿತಿಯ ಕುರಿತು ವಿವರ ಪಡೆಯಬೇಕಿದೆ.

ಈ ಕುರಿತು ಉಪನ್ಯಾಸಕ ನಂಜುಂಡಸ್ವಾಮಿ ಮಾತಾನಾಡಿ, ಸರ್ಕಾರ ಮಾರ್ಗಸೂಚಿಗಳ ಅನ್ವಯ ತರಗತಿ ಆರಂಭಿಸಲು ಅನುಮತಿ ನೀಡಿದೆ. ಇದರಲ್ಲಿ ಶಿಕ್ಷಕರಿಗೆ ಪ್ರಮುಖವಾಗಿ ಸಮಸ್ಯೆ ಜೊತೆಗೆ ಸವಾಲಾಗಿ ಕಂಡು ಬರೋದು ಮಕ್ಕಳಿಗೆ ಮಾರ್ಗಸೂಚಿ ಪಾಠ ಮಾಡುವುದು. ಆಟ-ಪಾಠ ಹಾಗೂ ಸ್ನೇಹಿತರ ಜೊತೆ ಒಡನಾಟದ ಸಂದರ್ಭದಲ್ಲಿ ಮೈಮರೆಯುವ ಸಾಧ್ಯತೆ ಇರುತ್ತದೆ. ಮಕ್ಕಳಿಗೆ ಸ್ಯಾನಿಟೈಸ್​ ಆಗುವಂತೆ ಹೇಳುವುದರ ಜೊತೆ ಆಗಾಗ ಮನವರಿಕೆ ಮಾಡುತ್ತಲೇ ಇರಬೇಕಾಗುತ್ತದೆ ಎಂದರು.

ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು, ಅದರಿಂದ ಆಚೆಗೆ ಮಕ್ಕಳು ಕೈಜಾರದಂತೆ ನೋಡಿಕೊಳ್ಳಬೇಕಿದೆ.‌ ಇತ್ತ ಮೊದಲ ಹಂತವಾಗಿ ಕೇವಲ ಹೈಸ್ಕೂಲ್ ಹಾಗೂ ಪಿಯುಸಿ ತರಗತಿ ಮಾತ್ರ ಆರಂಭಕ್ಕೆ ಅವಕಾಶ ಮಾಡಿಕೊಡಲಾಗಿದೆ. ಜೊತೆಗೆ ಕೊರೊನಾ ಕಾರಣಕ್ಕೆ ವಿದ್ಯಾರ್ಥಿಗಳು ಭೌತಿಕ ತರಗತಿಗೆ ಬರಲು ಆಗದೇ ಇದ್ದರೆ ಆನ್​ಲೈನ್ ಮೂಲಕವಾದರೂ ಶಿಕ್ಷಣವನ್ನ ಪಡೆಯಬಹುದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.