ETV Bharat / state

Dengue fever : ರಾಜ್ಯದಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ .. ಭಯ ಬೇಡ, ಜಾಗ್ರತೆಯಿರಲಿ ಎಂದ ಸಿಎಂ ಸಿದ್ದರಾಮಯ್ಯ - ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮ

Dengue cases in Karnataka: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ಅಷ್ಟೇ ಅಲ್ಲ ರಾಜ್ಯದ ರಾಜಧಾನಿಯಲ್ಲೂ ಅಧಿಕ ಡೆಂಗ್ಯೂ ಪ್ರಕರಣಗಳು ಕಂಡು ಬಂದಿದ್ದು, ಸುತ್ತಮುತ್ತಲಿನ ಪ್ರದೇಶವನ್ನು ಶುಚಿಯಾಗಿಡುವಂತೆ ಸಿಎಂ ಮನವಿ ಮಾಡಿದ್ದಾರೆ.

What is CM appeal to public  Dengue cases increase in the state  Dengue cases in Karnataka  ರಾಜ್ಯದಲ್ಲಿ ಡೆಂಘಿ ಪ್ರಕರಣ ಹೆಚ್ಚಳ  ಡೆಂಘಿ ಬಗ್ಗೆ ಭಯ ಬೇಡ  ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಘಿ ಪ್ರಕರಣ  ರಾಜ್ಯದ ರಾಜಧಾನಿಯಲ್ಲೂ ಅಧಿಕ ಡೆಂಘಿ ಪ್ರಕರಣ  7 ಸಾವಿರಕ್ಕೂ ಅಧಿಕ ಡೆಂಘಿ ಪ್ರಕರಣಗಳು ವರದಿ  ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ
ಡೆಂಘಿ ಬಗ್ಗೆ ಭಯ ಬೇಡ, ಜಾಗೃತೆಯಿರಲಿ ಎಂದ ಸಿಎಂ ಸಿದ್ದರಾಮಯ್ಯ
author img

By ETV Bharat Karnataka Team

Published : Sep 11, 2023, 1:55 PM IST

ಬೆಂಗಳೂರು : ರಾಜ್ಯಾದ್ಯಂತ ಕಳೆದ ಕೆಲವು ದಿನಗಳ ಅವಧಿಯಲ್ಲಿ ಸುಮಾರು 7 ಸಾವಿರಕ್ಕೂ ಅಧಿಕ ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಈ ಸಂಬಂಧ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದರಲ್ಲಿ 4 ಸಾವಿರಕ್ಕೂ ಅಧಿಕ ಪ್ರಕರಣಗಳು ಬೆಂಗಳೂರು ನಗರವೊಂದರಲ್ಲೇ ಕಂಡುಬಂದಿದೆ. ಡೆಂಗ್ಯೂ ಕ್ಷಿಪ್ರಗತಿಯಲ್ಲಿ ವ್ಯಾಪಿಸುತ್ತಿರುವ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಮಾತನಾಡಿ, ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ಸಿಎಂ ತಿಳಿಸಿದ್ದಾರೆ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಜೌಷಧ ಸಿಂಪಡಣೆ, ನೀರು ಶೇಖರಣೆಯಾಗುವ ಸ್ಥಳಗಳನ್ನು ಗುರುತಿಸಿ ಸ್ವಚ್ಛಗೊಳಿಸುವುದು ಸೇರಿದಂತೆ ಸೊಳ್ಳೆ ನಿಯಂತ್ರಣಕ್ಕೆ ಪರಿಣಾಮಕಾರಿ ಮಾರ್ಗಗಳನ್ನು ಅನುಸರಿಸಲಾಗುತ್ತಿದೆ ಎಂದು ಸಿಎಂ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮನೆ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆಗೆ ಆದ್ಯತೆ ನೀಡಿ. ಸೊಳ್ಳೆ ಕಡಿತದ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ. ಡೆಂಗ್ಯೂ ಬಗ್ಗೆ ಭಯ ಬೇಡ. ಜಾಗ್ರತೆಯಿರಲಿ ಎಂದು ಸಾರ್ವಜನಿಕರಿಗೆ ಸಿಎಂ ಸಲಹೆ ನೀಡಿದ್ದಾರೆ.

ವಿವಿಧ ರೀತಿಯ ಲಕ್ಷಣಗಳು : ಸೊಳ್ಳೆ ಕಡಿತದ ನಂತರ 3-14 ದಿನಗಳಲ್ಲಿ ಡೆಂಗ್ಯೂ ಸೋಂಕು ಕಾಣಿಸಿಕೊಳ್ಳಬಹುದು. ಇದರಲ್ಲಿ ಪ್ರಾರಂಭಿಕ, ಗಂಭೀರ ಹಾಗೂ ಗುಣಮುಖ ಎಂಬ ಹಂತಗಳಿರುತ್ತವೆ. ಮೊದಲ ಹಂತದಲ್ಲಿ 5 ದಿನಗಳು ಹಾಗೂ ಗಂಭೀರ ಹಂತದಲ್ಲಿ 2-3 ದಿನಗಳಿರುತ್ತವೆ.

ರೋಗಪತ್ತೆ ಹೇಗೆ?: ಜ್ವರ ಕಾಣಿಸಿಕೊಂಡ ನಂತರ ಎಸ್‌ಎಸ್‌1 ಆಂಟಿಜೆನ್‌ ಪರೀಕ್ಷೆಯನ್ನು ನಡೆಸಬೇಕು. ಒಂದು ವೇಳೆ ಫಲಿತಾಂಶ ಧನಾತ್ಮಕವಾದರೆ, ರೋಗಿಗೆ ಡೆಂಗ್ಯೂ ಬಂದಿದೆ ಎಂದರ್ಥ. ಒಂದು ವೇಳೆ ಇದು 5 ದಿನಗಳ ನಂತರ ಆಗಿದ್ದರೆ, ಐಜಿಎಂ ಆಂಟಿಬಾಡಿ ಟೆಸ್ಟ್‌ ಮಾಡಿಸಬೇಕು. ಏಕೆಂದರೆ, ಎಸ್‌ಎಸ್‌1 ಆಂಟಿಜೆನ್‌ ಈ ಹಂತದಲ್ಲಿ ಗೋಚರಿಸದು. ಒಂದು ವೇಳೆ ಐಜಿಎಂ ಧನಾತ್ಮಕವಾದರೆ, ಡೆಂಗ್ಯೂ ಇನ್ನೂ ಇದೆ ಎಂದರ್ಥ. ಕ್ಷಿಪ್ರ ರೋಗಪತ್ತೆ ಪರೀಕ್ಷೆಗಳಲ್ಲಿ ಡೆಂಘಿ ಧನಾತ್ಮಕವಾಗಿದ್ದರೂ, ದೃಢಪಡಿಸಿಕೊಳ್ಳಲು ನಿಗದಿತ ಗುಣಮಟ್ಟದ ಪರೀಕ್ಷೆಗಳನ್ನು ನಡೆಸಲೇಬೇಕು. ಅವಶ್ಯ ಬಿದ್ದರೆ, ಐಜಿಜಿ ಆಂಟಿಬಾಡಿ ಪರೀಕ್ಷೆಯನ್ನು ನಡೆಸಬೇಕು. ಈ ಮುಂಚೆ ಡೆಂಘಿ ಬಾಧಿತರಾಗಿದ್ದರೆ, ಇದು ಧನಾತ್ಮಕವಾಗಿರುತ್ತದೆ. ಅಂದರೆ, ಡೆಂಘಿ ಎರಡನೇ ಅಥವಾ ಮೂರನೇ ಸಲ ಬಂದಿದೆ ಎಂದರ್ಥ. ಇಂತಹ ಡೆಂಗ್ಯೂ ಅಪಾಯಕಾರಿಯಾಗಿರುವುದರಿಂದ, ಐಜಿಜಿ ಪರೀಕ್ಷೆಯನ್ನು ಹೆಚ್ಚಿನ ಎಚ್ಚರಿಕೆಯಿಂದ ನಡೆಸಬೇಕು.

ಓದಿ: Dengue cases: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಳ.. 6,806 ಕೇಸ್​ ಪತ್ತೆ, ಬೆಂಗಳೂರಲ್ಲೇ ಹೆಚ್ಚು!

ಮುನ್ನೆಚ್ಚರಿಕೆ ಮಹತ್ವದ್ದು: ಡೆಂಗ್ಯೂಯಿಂದ ತೊಂದರೆಗೆ ಒಳಗಾಗುವುದಕ್ಕಿಂತ ಅದು ಬಾರದಂತೆ ಮುನ್ನೆಚ್ಚರಿಕೆ ವಹಿಸುವುದೇ ಉತ್ತಮ. ಸೊಳ್ಳೆಗಳು ನಮ್ಮನ್ನು ಕಚ್ಚದಂತೆ ನೋಡಿಕೊಳ್ಳುವ ಮೂಲಕ ನಾವು ಡೆಂಗ್ಯೂ ಬಾರದಂತೆ ಪೂರ್ತಿಯಾಗಿ ತಡೆಗಟ್ಟಬಹುದು. ಮನೆಯ ಸುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಸೊಳ್ಳೆಪರದೆಗಳನ್ನು ಕಡ್ಡಾಯವಾಗಿ ಬಳಸಬೇಕು. ಹೊರಗೆ ಹೋಗುವಾಗ ತುಂಬುತೋಳಿನ ಅಂಗಿ ಮತ್ತು ಪ್ಯಾಂಟ್‌ ಧರಿಸಬೇಕು. ಸೊಳ್ಳೆ ನಿರೋಧಕ ಮುಲಾಮನ್ನು ಕೈಗಳು ಮತ್ತು ಕಾಲುಗಳಿಗೆ ಲೇಪಿಸಿಕೊಳ್ಳುವುದು ಒಳ್ಳೆಯದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.