ETV Bharat / state

ರಾಜ್ಯದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆ.. ಡೆಂಘೀ, ಚಿಕೂನ್​​ ಗುನ್ಯಾ ಪ್ರಕರಣಗಳ ಏರಿಕೆ..

author img

By

Published : Oct 16, 2021, 7:25 PM IST

ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಈ ವರ್ಷ ರಾಜ್ಯದಲ್ಲಿ ಯಾರೂ ಕೂಡ ಡೆಂಘೀಯಿಂದಾಗಿ ಮರಣ ಹೊಂದಿರುವ ವರದಿಯಾಗಿಲ್ಲ. ಆದರೆ, ಜ್ವರ ಕಾಣಿಸಿಕೊಂಡ ಪ್ರಕರಣಗಳ ಸಂಖ್ಯೆ 4,287ಕ್ಕೆ ಏರಿಕೆಯಾಗಿದೆ. ಕಳೆದ ವರ್ಷ 3,823 ಮಂದಿಯಲ್ಲಿ ಜ್ವರ ಕಾಣಿಸಿತ್ತು. ಅವರಲ್ಲಿ 5 ಮಂದಿ ಮೃತಪಟ್ಟಿದ್ದರು..

Dengue and chikungunya cases increased in state
ಏರಿಕೆಯತ್ತ ಸಾಗಿದ ಡೆಂಗ್ಯೂ, ಚಿಕನ್​​ ಗುನ್ಯಾ ಪ್ರಕರಣಗಳು

ಬೆಂಗಳೂರು : ಕೆಲ ದಿನಗಳಿಂದ ರಾಜ್ಯಾದ್ಯಂತ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಡೆಂಘೀ ಹಾಗೂ ಚಿಕೂನ್​ ಗುನ್ಯಾ ಜ್ವರ ಪ್ರಕರಣ ಹೆಚ್ಚಾಗುತ್ತಿವೆ. ಕಳೆದ 15 ದಿನಗಳಲ್ಲಿ ಸುಮಾರು 776 ಮಂದಿಯಲ್ಲಿ ಜ್ವರ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಡೆಂಘೀ ಪ್ರಕರಣ ವರದಿಯಾಗಿವೆ. 16 ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ 100ರ ಗಡಿ ದಾಟಿದೆ. ಈ ವರ್ಷ ಮೊದಲ ಆರು ತಿಂಗಳ ಅವಧಿಯಲ್ಲಿ ಡೆಂಘೀ ನಿಯಂತ್ರಣದಲ್ಲಿತ್ತು. ಮಳೆ ಹೆಚ್ಚಳವಾದ ಬಳಿಕ ಪ್ರಕರಣಗಳು ಏರಿಕೆ ಪಡೆದಿವೆ. ಈ ವರ್ಷ ರಾಜಧಾನಿಯಲ್ಲಿ ಅತೀ ಹೆಚ್ಚಿನ ಪ್ರಕರಣ ದೃಢಪಟ್ಟಿದ್ದು, 756 ಮಂದಿ ಜ್ವರಕ್ಕೆ ತುತ್ತಾಗಿದ್ದಾರೆ.

ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಈ ವರ್ಷ ರಾಜ್ಯದಲ್ಲಿ ಯಾರೂ ಕೂಡ ಡೆಂಘೀಯಿಂದಾಗಿ ಮರಣ ಹೊಂದಿರುವ ವರದಿಯಾಗಿಲ್ಲ. ಆದರೆ, ಜ್ವರ ಕಾಣಿಸಿಕೊಂಡ ಪ್ರಕರಣಗಳ ಸಂಖ್ಯೆ 4,287ಕ್ಕೆ ಏರಿಕೆಯಾಗಿದೆ. ಕಳೆದ ವರ್ಷ 3,823 ಮಂದಿಯಲ್ಲಿ ಜ್ವರ ಕಾಣಿಸಿತ್ತು. ಅವರಲ್ಲಿ 5 ಮಂದಿ ಮೃತಪಟ್ಟಿದ್ದರು.

ಜಿಲ್ಲಾವಾರು ಡೆಂಘೀ ಪ್ರಕರಣಗಳ ಮಾಹಿತಿ :

  • ಕಲಬುರಗಿ- 338
  • ಉಡುಪಿ- 312
  • ಶಿವಮೊಗ್ಗ- 305
  • ಕೊಪ್ಪಳ- 220
  • ದಕ್ಷಿಣ ಕನ್ನಡ- 206
  • ದಾವಣಗೆರೆ- 209
  • ಬಳ್ಳಾರಿ- 200
  • ವಿಜಯಪುರ- 190
  • ಹಾವೇರಿ- 169
  • ಮಂಡ್ಯ- 161
  • ಗದಗ- 127
  • ಯಾದಗಿರಿ- 122
  • ಬೀದರ್‌- 120
  • ತುಮಕೂರು- 117
  • ಚಿತ್ರದುರ್ಗ- 113

ಮೇಲಿನ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 100ರ ಗಡಿಯೊಳಗೆ ಇವೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ

ಚಿಕೂನ್​​ ಗುನ್ಯಾ ಪ್ರಕರಣಗಳ ಮಾಹಿತಿ : ರಾಜ್ಯದ 27 ಜಿಲ್ಲೆಗಳಲ್ಲಿ ಚಿಕೂನ್‌ ಗುನ್ಯಾ ಪ್ರಕರಣ ಕೂಡ ವರದಿಯಾಗಿವೆ. ಈವರೆಗೆ ಈ ಮಾದರಿಯ ಜ್ವರಕ್ಕೆ ಒಳಗಾದವರ ಸಂಖ್ಯೆ 1,415ಕ್ಕೆ ಏರಿಕೆಯಾಗಿದೆ. ಉತ್ತರ ಕನ್ನಡ, ರಾಯಚೂರು ಹಾಗೂ ದಕ್ಷಿಣ ಕನ್ನಡ ಬಿಟ್ಟು ಉಳಿದ ಎಲ್ಲಾ ಜಿಲ್ಲೆಗಳಲ್ಲಿಯೂ ಪ್ರಕರಣಗಳು ದೃಢಪಟ್ಟಿವೆ.

  • ಕಲಬುರಗಿ- 185
  • ಶಿವಮೊಗ್ಗ- 169
  • ಕೋಲಾರ- 108
  • ತುಮಕೂರು- 104
  • ಯಾದಗಿರಿ- 103
  • ಬೆಂಗಳೂರು ನಗರ 100

ಈ ಮೇಲಿನ ಜಿಲ್ಲೆಗಳಲ್ಲಿ ಅಧಿಕ ಪ್ರಕರಣ ವರದಿಯಾಗಿವೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 100ರ ಗಡಿಯೊಳಗಡೆ ಇವೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.