ETV Bharat / state

ಮಾಣಿಪ್ಪಾಡಿ ವರದಿ ಮಂಡನೆಗೆ ಆಗ್ರಹ, ಆಡಳಿತ ಸದಸ್ಯರಿಂದಲೇ ಸದನದಲ್ಲಿ ಗದ್ದಲ: ಇಕ್ಕಟ್ಟಿಗೆ ಸಿಲುಕಿದ ಸರ್ಕಾರ

ವಕ್ಫ್ ಆಸ್ತಿ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನ್ವರ್​ ಮಾಣಿಪ್ಪಾಡಿ ಅವರ ವರದಿಯನ್ನು ಸದನದಲ್ಲಿ ಮಂಡಿಸಲು ಸರ್ಕಾರಕ್ಕೆ ಸೂಚನೆ ನೀಡುವಂತೆ ಆಡಳಿತ ಪಕ್ಷದ ಸದಸ್ಯರು ಒತ್ತಾಯಿಸಿದರು.

demand-for-presentation-of-anwar-manippadi-report
ಮಾಣಿಪ್ಪಾಡಿ ವರದಿ ಮಂಡನೆಗೆ ಆಗ್ರಹ, ಆಡಳಿತ ಸದಸ್ಯರಿಂದಲೇ ಸದನದಲ್ಲಿ ಗದ್ದಲ: ಇಕ್ಕಟ್ಟಿಗೆ ಸಿಲುಕಿದ ಸರ್ಕಾರ
author img

By

Published : Sep 21, 2022, 3:28 PM IST

ಬೆಂಗಳೂರು : ವಕ್ಫ್ ಆಸ್ತಿ ಕಬಳಿಕೆ ಪ್ರಕರಣ ಕುರಿತ ಅನ್ವರ್ ಮಾಣಿಪ್ಪಾಡಿ ವರದಿಯನ್ನು ಸದನದಲ್ಲಿ ಮಂಡಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಒತ್ತಾಯಿಸಿ ಆಡಳಿತ ಪಕ್ಷದ ಸದಸ್ಯರೇ ಸದನದಲ್ಲಿ ಆಗ್ರಹಿಸಿ ಗದ್ದಲವೆಬ್ಬಿಸಿದ ಘಟನೆ ವಿಧಾನ ಪರಿಷತ್ ಕಲಾಪದಲ್ಲಿ ನಡೆಯಿತು.

ವಿಧಾನ ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಂಡರು. ಈ ವೇಳೆ ದಿಢೀರ್ ಸದನದಲ್ಲಿ ಎದ್ದು ನಿಂತ ಬಿಜೆಪಿಯ ಕೆಲ ಸದಸ್ಯರು ವಕ್ಫ್ ಆಸ್ತಿ ಕಬಳಿಕೆ ಕುರಿತ ಅನ್ವರ್ ಮಾಣಿಪ್ಪಾಡಿ ವರದಿಯನ್ನು ಸದನದಲ್ಲಿ ಮಂಡಿಸುವಂತೆ ಸರ್ಕಾರಕ್ಕೆ ಸೂಚಿಸಿ ಎಂದು ಸರ್ಕಾರದ ಮುಖ್ಯ ಸಚೇತಕ ನಾರಾಯಣಸ್ವಾಮಿ ಅವರಲ್ಲಿ ಆಗ್ರಹಿಸಿದರು. ವರದಿ ಸಲ್ಲಿಸಿ ಎರಡು ವರ್ಷವಾಗಿದೆ, ಆ ವರದಿ ಸದನದಲ್ಲಿ ಮಂಡಿಸುವಂತೆ ಸರ್ಕಾರಕ್ಕೆ ಸೂಚಿಸಬೇಕು ಎಂದರು.

ಇದಕ್ಕೆ ಸದಸ್ಯರಾದ ರವಿಕುಮಾರ್, ತೇಜಸ್ವಿನಿಗೌಡ ಸೇರಿದಂತೆ ಇತರ ಕೆಲ ಸದಸ್ಯರು ಸಾಥ್​ ನೀಡಿದರು. ಕೂಡಲೇ ವರದಿಯನ್ನು ಕಂದಾಯ ಸಚಿವರು ಮಂಡಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ, ವಿರೋಧ ಪಕ್ಷದ ಕೆಲಸ ನೀವೇ ಮಾಡಿದರೆ ಅವರೇನು ಮಾಡಬೇಕು? ಆಡಳಿತ ಪಕ್ಷದ ಸದಸ್ಯರಾಗಿ ನೀವೇ ಹೀಗೆ ಮಾಡಿದರೆ ಹೇಗೆ? ಒಬ್ಬೊಬ್ಬರಾಗಿ ಮಾತನಾಡಿ ಎಂದರು.

ಇದಕ್ಕೆ ಪ್ರತಿಯಾಗಿ ಪ್ರತಿಪಕ್ಷ ನಾಯಕ ಹರಿಪ್ರಸಾದ್ ಮಾತನಾಡಿ, ಸರ್ಕಾರ ಅವರದ್ದೇ, ಯಾರು ತನಿಖೆ ಮಾಡುವುದು ಬೇಡ ಎಂದಿದ್ದಾರೆ. ಆದರೆ ಮೊದಲು ಪ್ರಶ್ನೋತ್ತರ ತೆಗೆದುಕೊಳ್ಳಿ, ನಂತರ ಅವರ ಮಾತು ಆಲಿಸಿ ಎಂದರು. ಆಡಳಿತ ಪಕ್ಷದ ಸದಸ್ಯರ ಮಾತಿಗೆ ಅವಕಾಶ ನೀಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಸಭಾಪತಿಗಳು, ನಮ್ಮ ಕಾರ್ಯ ಪದ್ಧತಿ ಪ್ರಕಾರ ಪ್ರಶ್ನೋತ್ತರ ತೆಗೆದುಕೊಳ್ಳಲಿದ್ದೇವೆ. ನೀವು ಯಾವುದೇ ನೋಟಿಸ್ ಕೂಡ ನೀಡಲ್ಲ ಎಂದು ಬಿಜೆಪಿ ಸದಸ್ಯರಿಗೆ ಸೂಚಿಸಿ ಪ್ರಶ್ನೋತ್ತರ ಕಲಾಪ ಆರಂಭಿಸಲು ಮುಂದಾದರು. ಆದರೂ ಇದಕ್ಕೆ ಅವಕಾಶ ನೀಡದೆ ಬಿಜೆಪಿ ಸದಸ್ಯ ರವಿಕುಮಾರ್, ಪ್ರಾಣೇಶ, ನಾರಾಯಣಸ್ವಾಮಿ, ತೇಜಸ್ವಿನಿಗೌಡ, ವರದಿ ಮಂಡಿಸಲು ಸರ್ಕಾರಕ್ಕೆ ಆದೇಶ ಮಾಡಿ ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಬಿ ಕೆ ಹರಿಪ್ರಸಾದ್, ಸರ್ಕಾರವೇ ಅಲ್ಲಿ ಇಲ್ಲ ಅದಕ್ಕೆ ನೀವು ಹೇಳುತ್ತಿದ್ದೀರಿ. ನಿಮಗೆ ಧಮ್ಮು ತಾಕತ್ತು ಇಲ್ಲ, ಧಮ್ಮಿರುವುದು 40 ಪರ್ಸೆಂಟ್ ಗೆ ಮಾತ್ರ. ವಕ್ಫ್ ಬೋರ್ಡ್ ನಲ್ಲಿ ಇವರಿಗೆ 40 ಪರ್ಸೆಂಟ್ ಸಿಕ್ಕಿಲ್ಲ, ಅದಕ್ಕೆ ಈಗ ಈ ರೀತಿ ಮಾಡುತ್ತಿದ್ದಾರೆ ಎಂದರು.

ಇದಕ್ಕೆ ಟಾಂಗ್ ನೀಡಿದ ಸರ್ಕಾರಿ ಮುಖ್ಯ ಸಚೇತಕ ನಾರಾಯಣಸ್ವಾಮಿ, ನಿಮ್ಮದು 85 ಪರ್ಸೆಂಟ್ ಸರ್ಕಾರ, ರಾಜೀವ್ ಗಾಂಧಿಯೇ ಹೇಳಿದ್ದರು ಎನ್ನುವುದನ್ನು ಉಲ್ಲೇಖಿಸಿದರು. ಈ ವೇಳೆ ಬಿಜೆಪಿ ಸದಸ್ಯರಾದ ತೇಜಸ್ವಿನಿ ಗೌಡ, ರವಿಕುಮಾರ್ ಯಾವಾಗ ಕೊಡಿಸುತ್ತೀರಾ ಎಂದು ಸರ್ಕಾರದಿಂದ ಭರವಸೆ ಕೊಡಿಸಿ ಎಂದರು.

ಈ ವೇಳೆ ಪ್ರಶ್ನೋತ್ತರ ಕಲಾಪವನ್ನು ಆರಂಭಿಸಲಾಯಿತು. ಆದರೆ ಪ್ರಶ್ನೆಯೇ ಕೇಳಿಸದಂತೆ ಬಿಜೆಪಿ ಸದಸ್ಯರು ಗದ್ದಲ ಮಾಡಿದ್ದರಿಂದ ಕುಪಿತರಾದ ಕಾಂಗ್ರೆಸ್ ಸದಸ್ಯ ಸಲೀಂ ಅಹಮದ್ ಇದೇನು ಮಾರುಕಟ್ಟೆಯಾ? ಇವರನ್ನು ಕೂರಿಸಿ ಎಂದರು.

ಗದ್ದಲ ಹೆಚ್ಚಾಗಿದ್ದರಿಂದ ಸದನದಕ್ಕೆ ಮಾಹಿತಿ ನೀಡಲು ಎದ್ದು ನಿಂತ ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಅವರು ಮಾತನಾಡಿ, ಮಾಣಿಪ್ಪಾಡಿ ವರದಿ ಕುರಿತು ಮಾತು ಆರಂಭಿಸಿದರು. ಆದರೆ ಇದಕ್ಕೆ ಅಶ್ವತ್ಥನಾರಾಯಣ ಬೇಡವೆಂದು ಸೂಚಿಸಿದ್ದರಿಂದ ಉತ್ತರ ಮೊಟಕುಗೊಳಿಸಿದರು. ನಂತರ ಸಭಾಪತಿ ಪ್ರಶ್ನೋತ್ತರ ಕಲಾಪ ಆರಂಭಿಸಿ ಗದ್ದಲಕ್ಕೆ ತೆರೆ ಎಳೆದರು.

ಇದನ್ನೂ ಓದಿ : ಪ್ರಶ್ನೆಗೆ ಉತ್ತರಿಸಲು ಕಾಲಾವಕಾಶ ಕೋರಿದ ಸರ್ಕಾರ, ಕಾಂಗ್ರೆಸ್ ಆಕ್ಷೇಪ: ಕಲಾಪ ಮುಂದೂಡಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.