ಬೆಂಗಳೂರು: ಪೊಲೀಸ್ ಹಾಗೂ ಮೀಡಿಯಾ ಹೆಸರಿನಲ್ಲಿ ನಗರದ ಸ್ಪಾಗಳಿಗೆ ಹಣಕ್ಕಾಗಿ ಬೆಡಿಕೆ ಈಡುತ್ತಿದ್ದ ವ್ಯಕ್ತಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಪಾ ಓನರ್ಸ್ ಅಸೋಸಿಯೇಷನ್ ವತಿಯಿಂದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ಗೆ ದೂರು ಸಲ್ಲಿಸಲಾಗಿದೆ.
ಕೆಲ ಕಿಡಿಗೇಡಿಗಳು ಪೊಲೀಸ್ ಹಾಗೂ ಮಾಧ್ಯಮದ ಹೆಸರಲ್ಲಿ ಹಣಕ್ಕಾಗಿ ಪೀಡಿಸುತ್ತಿರುವುದು ಬೇಸರದ ಸಂಗತಿ. ಈಚೆಗೆ ಮಾರತ್ತಹಳ್ಳಿಯೊಂದರ ಸ್ಪಾಗೆ ಬಂದು ಅಂಬಿ ಕರ್ನಾಟಕ ಪತ್ರಿಕೆ ಸಂಪಾದಕ ಎಂದು ಹೇಳಿ, ವ್ಯಕ್ತಿಯೋರ್ವ ಹಣಕ್ಕಾಗಿ ಬೇಡಿಕೆ ಇರಿಸುವ ಪ್ರಕರಣಗಳು ಹೆಚ್ಚಾಗಿವೆ. ನಾವೂ ಕಾನೂನು ಬದ್ಧವಾಗಿ ಸ್ಪಾ ನಡೆಸುತ್ತಿದ್ದೇವೆ ಎಂದು ಸ್ಪಾ ಅಸೋಸಿಯೇಷನ್ ಅಧ್ಯಕ್ಷ ರಂಜಿತ್ ಕುಮಾರ್ ಬೇಸರ ವ್ಯಕ್ತಪಡಿಸಿದರು.
ಪೊಲೀಸರಿಗೆ ಕರೆ ಮಾಡಿ, ಸ್ಪಾನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ತಪ್ಪು ಮಾಹಿತಿ ನೀಡುತ್ತಿದ್ದಾನೆ. ಈ ಮಾಹಿತಿಯಿಂದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ. ನಂತರ ಯಾವುದೇ ಕಾನೂನು ಬಾಹಿರ ಚಟುವಟಿಕೆ ಇಲ್ಲವೆಂದು ತಿಳಿದು, ವಾಪಾಸಾದ ಘಟನೆ ಹಲವು ಭಾರಿ ನಡೆದಿದೆ. ಇದರಿಂದ ಗ್ರಾಹಕರು ಕಡಿಮೆಯಾಗುತ್ತಿದ್ದಾರೆ. ಇಂತಹ ವ್ಯಕ್ತಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ರವಿ ಮನವಿ ಮಾಡಿದರು.