ETV Bharat / state

ದೆಹಲಿ ಪ್ರವಾಸ, ಸಿಎಂ ಬರಿಗೈಯಲ್ಲಿ ವಾಪಸ್ ಸಚಿವಾಕಾಂಕ್ಷಿಗಳ ಆಸೆಗೆ ತಣ್ಣೀರು: ಸಂಪುಟ ವಿಸ್ತರಣೆ ಸಾಧ್ಯವೇ ? - Green signal not for cabinet expansion

2023 ರ ಮೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಐದು ತಿಂಗಳು ಮಾತ್ರ ಬಾಕಿ ಇದೆ. ರಾಜ್ಯದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಜನವರಿವರೆಗೂ ಸಚಿವ ಸಂಪುಟ ವಿಸ್ತರಣೆ ಸಾಧ್ಯವಿಲ್ಲ. ಇನ್ನು ಜನವರಿ ಅಂತ್ಯ ಅಥವಾ ಫೆಬ್ರವರಿ ಆರಂಭದಲ್ಲಿ ವಿಧಾನಸಭೆ ಜಂಟಿ ಅಧಿವೇಶನ ನಡೆಯಲಿದೆ, ಅದು ಮುಗಿಯುತ್ತಿದ್ದಂತೆ ಬಜೆಟ್ ಅಧಿವೇಶನ ಆರಂಭಗೊಳ್ಳಲಿದೆ.

CM Basavaraj Bommai
ಸಿಎಂ ಬಸವರಾಜ್ ಬೊಮ್ಮಾಯಿ
author img

By

Published : Dec 2, 2022, 8:08 PM IST

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟ ವಿಸ್ತರಣೆಗೆ ಇನ್ನೂ ಕಾಲ ಕೂಡಿ ಬಂದಿಲ್ಲ ಅನಿಸುತ್ತಿದೆ. ಕೆಲವು ದಿನಗಳ ಹಿಂದೆ ಸಿಎಂ ಅವರು ನವದೆಹಲಿಗೆ ಹೋಗಿದ್ದರು. ಆದರೆ, ಬರಿಗೈಲಿ ಮತ್ತೆ ವಾಪಸ್​ ಆಗಿದ್ದಾರೆ. ವರಿಷ್ಠರೆಲ್ಲಾ ಪ್ರಸ್ತುತ ಗುಜರಾತ್ ಚುನಾವಣೆಯಲ್ಲಿ ಬ್ಯುಸಿಯಾಗಿದ್ದು, ಕೇವಲ ಕೇಂದ್ರದ ಕೆಲ ಸಚಿವರನ್ನು ಭೇಟಿಯಾಗಿ ನಿರಾಸೆಯೊಂದಿಗೆ ಹಿಂದಿರುಗಿದ್ದಾರೆ.

ಇದೂ ಸಚಿವಾಕಾಂಕ್ಷಿಗಳಿಗೆ ಆಸೆ ಕಮರುವಂತೆ ಮಾಡಿದೆ. ಬಹುತೇಕ ಸಂಪುಟ ವಿಸ್ತರಣೆ ಇನ್ನೂ ಸಾಧ್ಯವಿಲ್ಲವಾ ಎಂಬ ಅನುಮಾನ ಆಕಾಂಕ್ಷಿಗಳಲ್ಲಿ ಮನೆ ಮಾಡಿದೆ.

ಎರಡು ದಿನದ ಸಿಎಂ ದೆಹಲಿ ಪ್ರವಾಸ: ಎರಡು ದಿನಗಳ ದೆಹಲಿ ಪ್ರವಾಸ ಮುಗಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಪಸ್​ ಆಗಿದ್ದಾರೆ. ಎಂದಿನಂತೆ ತಮ್ಮ ಕರ್ತವ್ಯದಲ್ಲಿ ತೊಡಗಿಕೊಂಡಿದ್ದಾರೆ. ದೆಹಲಿಗೆ ಹೋಗುವ ವೇಳೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾರ ಭೇಟಿ ಮಾಡುವ ಕುರಿತಾಗಿ ಹೇಳಿಕೆ ನೀಡಿದ್ದ ಸಿಎಂ, ವರಿಷ್ಠರು ಸಮಯಾವಕಾಶ ನೀಡಿದರೆ ಸಚಿವ ಸಂಪುಟ ವಿಸ್ತರಣೆ ಸಲುವಾಗಿ ಮಾತುಕತೆ ನಡೆಸುವುದಾಗಿ ತಿಳಿಸಿದ್ದರು.

ಆದರೆ ನಡ್ಡಾ, ಅಮಿತ್ ಶಾ ಭೇಟಿ ಮಾಡಲು ಬೊಮ್ಮಾಯಿಗೆ ಸಾಧ್ಯವಾಗಿಲ್ಲ. ಹಾಗಾಗಿ ರಾಜನಾಥ್ ಸಿಂಗ್, ಗಜೇಂದ್ರ ಸಿಂಗ್ ಶೇಖಾವತ್, ಪಿಯೂಷ್ ಗೋಯೆಲ್ ಸೇರಿದಂತೆ ಕೆಲ ಸಚಿವರನ್ನು ಭೇಟಿಯಾಗಿ ರಾಜ್ಯದ ಯೋಜನೆಗಳ ಕುರಿತು ಮಾತುಕತೆ ನಡೆಸಿ ವಾಪಸ್​ ಆಗಿದ್ದಾರೆ.

ಸಿಎಂ ಬರಿಗೈಲಿ ವಾಪಸ್: ಗುಜರಾತ್ ಚುನಾವಣೆ ಮುಗಿದು ಅಲ್ಲಿ ಹೊಸ ಸರ್ಕಾರ ರಚನೆ ಆಗುವವರೆಗೂ ಕರ್ನಾಟಕದ ಕಡೆ ವರಿಷ್ಠರು ಗಮನ ಹರಿಸುವುದಿಲ್ಲ. ದೆಹಲಿಯಲ್ಲಿ ಸಿಎಂ ಅವರಿಂದ ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ಕುರಿತು ಯಾವುದೇ ಮಾತುಕತೆ ನಡೆದಿಲ್ಲ. ಹೋದ ಪುಟ್ಟ ಬಂದ ಪುಟ್ಟ ಎಂಬಂತೆ ಸಿಎಂ ಬರಿಗೈಲಿ ವಾಪಸ್ ಬಂದಿದ್ದಾರೆ.

ಇತ್ತೀಚೆಗೆ ರಾಜ್ಯಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಕೂಡ ಸಚಿವ ಸಂಪುಟ ವಿಸ್ತರಣೆ ವಿಷಯ ನಮಗೆ ಬಿಟ್ಟು ಆಡಳಿತ ನೋಡಿಕೊಳ್ಳಿ, ಕ್ಷೇತ್ರಗಳಲ್ಲಿ ಪಕ್ಷದ ಸಾಮರ್ಥ್ಯ ತಿಳಿಸುವ ಮೂರು ರೀತಿಯ ಪಟ್ಟಿ ಕಳಿಸಿಕೊಡಿ ಎಂದಿದ್ದರು. ಆದರೂ ಸಿಎಂ ಸಚಿವ ಸ್ಥಾನದ ಪಟ್ಟಿ ಹಿಡಿದು ದೆಹಲಿಗೆ ಹೋಗಿದ್ದರು. ಆದರೆ, ಅವರ ಪಟ್ಟಿಗೆ ಸಮ್ಮತಿ ನೀಡುವ, ಚರ್ಚಿಸುವ ಯಾವ ನಾಯಕರೂ ಸಿಎಂಗೆ ಸಿಕ್ಕಿಲ್ಲ.

ನಡ್ಡಾ ಭೇಟಿಗೆ ಕಸರತ್ತು: ನವೆಂಬರ್ 30 ರ ಮಧ್ಯೆರಾತ್ರಿವರೆಗೂ ಪಕ್ಷದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿಗೆ ಬಸವರಾಜ ಬೊಮ್ಮಾಯಿ ಪ್ರಯತ್ನ ನಡೆಸಿದರು. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮೂಲಕ ಸಮಯಾವಕಾಶ ಪಡೆದುಕೊಳ್ಳುವ ಕೆಲಸ ಮಾಡಿದರು. ಆದರೂ ಯಾವುದೇ ಪ್ರಯೋಜನವಾಗಲಿಲ್ಲ. ನಡ್ಡಾ ಸಮಯಾವಕಾಶ ಲಭಿಸಲಿಲ್ಲ. ಹಾಗಾಗಿ ಕೊನೆಗೆ ಅನ್ಯ ಮಾರ್ಗವಿಲ್ಲದೇ ಸಿಎಂ ರಾಜ್ಯದ ಕಡೆ ಮುಖ ಮಾಡಿದರು.

ಸಂಪುಟ ವಿಸ್ತರಣೆ ಇನ್ನು ಮರೀಚಿಕೆ:2023 ರ ಮೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಐದು ತಿಂಗಳು ಮಾತ್ರ ಬಾಕಿ ಇದೆ. ಈಗ ಗುಜರಾತ್ ಚುನಾವಣೆ ಮುಗಿಯುವ ವೇಳೆಗೆ ರಾಜ್ಯದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಜನವರಿವರೆಗೂ ಸಚಿವ ಸಂಪುಟ ವಿಸ್ತರಣೆ ಸಾಧ್ಯವಿಲ್ಲ. ಇನ್ನು ಜನವರಿ ಅಂತ್ಯ ಅಥವಾ ಫೆಬ್ರವರಿ ಆರಂಭದಲ್ಲಿ ವಿಧಾನಸಭೆ ಜಂಟಿ ಅಧಿವೇಶನ ನಡೆಯಲಿದೆ, ಅದು ಮುಗಿಯುತ್ತಿದ್ದಂತೆ ಬಜೆಟ್ ಅಧಿವೇಶನ ಆರಂಭಗೊಳ್ಳಲಿದೆ. ಹಾಗಾಗಿ ಸಾಲು ಸಾಲು ಅಧಿವೇಶನಗಳೇ ಬರುವ ಹಿನ್ನೆಲೆಯಲ್ಲಿ ಸಚಿವ ಸಂಪುಟ ವಿಸ್ತರಣೆ ಇನ್ನು ಮರೀಚಿಕೆ ಎನ್ನಲಾಗುತ್ತಿದೆ.

ಚುನಾವಣೆ ಮೂಡ್ ದಲ್ಲಿ ಬಿಜೆಪಿ:ಸದ್ಯ ರಾಜ್ಯದಲ್ಲಿ ಬಿಜೆಪಿ ಚುನಾವಣಾ ಮೂಡ್ ಗೆ ತಿರುಗಿದ್ದು, ಜನ ಸಂಕಲ್ಪ ಯಾತ್ರೆಯಲ್ಲಿ ತೊಡಗಿದೆ. ವಿವಿಧ ಮೋರ್ಚಾಗಳೂ ಬೃಹತ್ ಸಮಾವೇಶಗಳನ್ನು ಆಯೋಜನೆ ಮಾಡುತ್ತಿವೆ. ಬಹುತೇಕ ಇದು ಮುಗಿಯಲು ಇನ್ನು ಒಂದು ತಿಂಗಳ ಅಗತ್ಯವಿದೆ. ಇದರ ನಂತರ ಹೊಸ ಹೊಸ ಯಾತ್ರೆಗಳನ್ನು ಬಿಜೆಪಿ ಆಯೋಜನೆ ಮಾಡಲಿದೆ.

ಪಕ್ಷದಲ್ಲಿ ಕೆಲಸ ಮಾಡಲು ನಾಯಕರನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳಲು ನಿರ್ಧರಿಸಿದೆ. ಹಾಗಾಗಿ ಸಚಿವ ಸಂಪುಟ ವಿಸ್ತರಣೆ, ಪುನಾರಚನೆಯಂಥ ಕೆಲಸಕ್ಕೆ ಕೈ ಹಾಕಿದರೆ, ಪಕ್ಷದಲ್ಲಿ ಅಸಮಾಧಾನ ಉದ್ಭವಿಸಬಹುದು. ಇದೂ ಚುನಾವಣೆ ವೇಳೆ ಹೊಸ ಸಮಸ್ಯೆಗೂ ಕಾರಣವಾಗಬಹುದು. ಹೀಗಾಗಿ ಸಂಪುಟ ವಿಸ್ತರಣೆ ಮಾಡದೇ ನೇರವಾಗಿ ಚುನಾವಣಾ ಸಿದ್ದತೆಗೆ ಹೈಕಮಾಂಡ್ ಇಳಿಯಲಿದೆ ಎಂಬ ಮಾತುಗಳು ಪಕ್ಷದ ಪಡಸಾಲೆಯಲ್ಲಿ ಕೇಳಿಬರುತ್ತಿವೆ.

ಇನ್ನು ಜನವರಿ ನಂತರ ಸಂಪುಟ ವಿಸ್ತರಣೆಯಾಗಿದ್ದಲ್ಲಿ ಇಲಾಖೆಯಲ್ಲಿ ಕೆಲಸ ಮಾಡಲು ಎರಡರಿಂದ ಮೂರು ತಿಂಗಳು ಮಾತ್ರ ಸಿಗಲಿದೆ. ಅಷ್ಟರಲ್ಲಿ ಇಲಾಖೆಯನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ. ಇನ್ನು ಯಾವ ಕೆಲಸ ಮಾಡಲು ಸಾಧ್ಯ. ಯಾವ ಯೋಜನೆ ಜಾರಿಗೆ ತರಲು ಸಾಧ್ಯ ಎಂದು ಆಕಾಂಕ್ಷಿಗಳು ತಮ್ಮ ಅಸಮಾಧಾನವನ್ನು ರಾಜ್ಯ ನಾಯಕರು ಮುಂದೆ ವ್ಯಕ್ತಪಡಿಸಿದ್ದಾರೆ.

ಇಷ್ಟು ದಿನ ಕಾದು ಕುಳಿತಿದ್ದೆವು. ಇನ್ನು ಕ್ಷೇತ್ರದ ಕಡೆ ನಾವು ಓಡಾಡಬೇಕು ಹಾಗಾಗಿ ಸಂಪುಟ ಸೇರುವುದಿಲ್ಲ ಎಂದು ಕೆಲವರು ಹೇಳಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ಬಿಗ್ ಪ್ಲಾನ್​​: ಹಿಂದೂ ಅಜೆಂಡಾದ ರ‍್ಯಾಲಿಗಳಿಗೆ ಮೊರೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.