ETV Bharat / state

ಮಕ್ಕಳನ್ನು ಬಿಟ್ಟು ಬೇರೊಬ್ಬನ ಜೊತೆ ಹೋದ ಪತ್ನಿಯ ಹುಡುಕಿ ಕೊಡಿ... ಬೆಂಗಳೂರು ಪೊಲೀಸರ ಸಹಾಯ ಕೋರಿದ ಪತಿ! - ಮಕ್ಕಳನ್ನು ಬಿಟ್ಟು ಬೇರೆ ವ್ಯಕ್ತಿಯೊಂದಿಗೆ ಹೋದ ಪತ್ನಿ

ಇಬ್ಬರು ಮಕ್ಕಳನ್ನು ಬಿಟ್ಟು ಬೇರೊಬ್ಬ ವ್ಯಕ್ತಿಯೊಂದಿಗೆ ಪತ್ನಿ ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದು, ಆಕೆಯನ್ನು ಹುಡುಕಲು ಸಹಾಯ ಮಾಡಿ ಎಂದು ಪೊಲೀಸರಿಗೆ ಪತಿ ಟ್ವಿಟರ್​ನಲ್ಲಿ ಮನವಿ ಮಾಡಿದ್ದಾನೆ.

delhi-man-tweet-to-bengaluru-police-on-his-wife-missing
ಮಕ್ಕಳನ್ನು ಬಿಟ್ಟು ಬೇರೆ ವ್ಯಕ್ತಿಯೊಂದಿಗೆ ಬೆಂಗಳೂರಿಗೆ ಬಂದ ಪತ್ನಿಯ ಹುಡುಕಿ ಕೊಡಿ...ಪೊಲೀಸರಿಗೆ ಪತಿಯ ಟ್ವೀಟ್​!
author img

By

Published : Jul 16, 2022, 4:40 PM IST

Updated : Jul 16, 2022, 6:12 PM IST

ಬೆಂಗಳೂರು: ದೆಹಲಿಯಿಂದ ನನ್ನ ಪತ್ನಿ ಬೇರೆಯೊಬ್ಬ ವ್ಯಕ್ತಿಯೊಂದಿಗೆ ಓಡಿ ಬೆಂಗಳೂರಿಗೆ ಬಂದಿದ್ದಾಳೆ. ಆಕೆಯನ್ನು ಹುಡುಕಿಕೊಡಿ ಎಂದು ಪತಿಯೊಬ್ಬ ಸಾಮಾಜಿಕ ಜಾಲತಾಣದ ಮೂಲಕ ಬೆಂಗಳೂರಿನ ಪೊಲೀಸರ ಮೊರೆ ಹೋಗಿದ್ದಾನೆ.

ದೆಹಲಿ ಮೂಲದ ಅರವಿಂದ್ ಎಂಬ ವ್ಯಕ್ತಿ ಪತ್ನಿ ಓಡಿ ಹೋದ ಬಗ್ಗೆ ಟ್ವೀಟ್​ ಮಾಡಿ, ಅದನ್ನು ಬೆಂಗಳೂರು ಪೊಲೀಸರಿಗೆ ಟ್ಯಾಗ್​ ಮಾಡಿದ್ದಾನೆ. ನನ್ನ ಹೆಂಡ್ತಿ ಮತ್ತೊಬ್ಬನ ಜೊತೆ ಇರುತ್ತಾಳೆ. ಇಬ್ಬರು ಮಕ್ಕಳನ್ನು ಬಿಟ್ಟು ದೆಹಲಿಯಿಂದ ಬೆಂಗಳೂರಿಗೆ ಬಂದು ಬಿಟ್ಟಿದ್ದಾಳೆ. ಬಲವಂತವಾಗಿ ಇಟ್ಟುಕೊಳ್ಳಲಾಗಿದೆ. ಈಗ ಎಲ್ಲಿದ್ದಾಳೋ ಗೊತ್ತಿಲ್ಲ. ಪತ್ನಿಯನ್ನು ಹುಡುಕಲು ನಿಮ್ಮ ಸಹಾಯಬೇಕೆಂದು ಮನವಿ ಮಾಡಿದ್ದಾನೆ.

ಅಲ್ಲದೇ, ತಾನು ಮತ್ತು ಪತ್ನಿ, ಮಗು ಒಟ್ಟಿಗೆ ಇರುವ ಫೋಟೋ ಹಾಗೂ ಇನ್ನೊಬ್ಬ ವ್ಯಕ್ತಿಯ ಫೋಟೋವನ್ನೂ ಸಹ ಟ್ವೀಟ್​ ಮಾಡಿದ್ದಾನೆ. ಇದಕ್ಕೆ ಬೆಂಗಳೂರು ನಗರ ಪೊಲೀಸ್​ ಟ್ವಿಟರ್​ ಖಾತೆಯಿಂದ ರಿಟ್ವೀಟ್ ಮಾಡಿದ್ದು, ನಿಮ್ಮ ಹತ್ತಿರದ ಪೊಲೀಸ್​ ಠಾಣೆಗೆ ವಿವಿರಗಳ ಸಮೇತ ದೂರು ಸಲ್ಲಿಸಿ. ನಿಮಗೆ ಅವರು ನೆರವು ಮಾಡುತ್ತಾರೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಸುಶ್ಮಿತಾ - ಲಲಿತ್ ಡೇಟಿಂಗ್.. ನಟಿಯ ಎಕ್ಸ್​ ಬಾಯ್​ಫ್ರೆಂಡ್ ಹೇಳಿದ್ದೇನು?

Last Updated : Jul 16, 2022, 6:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.